newsfirstkannada.com

×

ಸಲ್ಮಾನ್ ಖಾನ್‌ಗೆ ₹5 ಕೋಟಿ ಡಿಮ್ಯಾಂಡ್‌ ಮಾಡಿದ್ದು ತರಕಾರಿ ವ್ಯಾಪಾರಿ; ಜೀವ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್!

Share :

Published October 24, 2024 at 1:19pm

Update October 24, 2024 at 1:20pm

    ಡಾನ್‌ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಸಲ್ಲೂಗೆ ಜೀವ ಬೆದರಿಕೆ

    ಮುಂಬೈ ಪೊಲೀಸರಿಗೆ ಮೆಸೇಜ್ ಕಳುಹಿಸಿದ್ದ ತರಕಾರಿ ವ್ಯಾಪಾರಿ

    5 ಕೋಟಿ ಕೊಡಬೇಕು ಇಲ್ಲದಿದ್ದರೆ ಸಲ್ಮಾನ್ ಖಾನ್ ಮುಗಿಸೋ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬಹಳ ದಿನಗಳಿಂದಲೂ ಜೀವ ಬೆದರಿಕೆ ಇದೆ. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದ್ದು, ಸಲ್ಲೂಗೆ ಬಿಗಿ ಭದ್ರತೆ ನೀಡಲಾಗಿದೆ. ಆದರೆ, ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಮತ್ತೆ ಜೀವ ಬೆದರಿಕೆ ಹಾಕಲಾಗಿದ್ದು, ಮುಂಬೈ ಪೋಲೀಸರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಅಕ್ಟೋಬರ್ 12ರಂದು ಮುಂಬೈನಲ್ಲಿ ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ಎನ್‌ಸಿಪಿ ನಾಯಕನನ್ನು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ಖಾನ್‌ಗಳು ಶೇಕ್ ಆಗಿ ಹೋಗಿದ್ದರು. ಈ ಶೂಟೌಟ್ ಬೆನ್ನಲ್ಲೇ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆಯ ಸಂದೇಶ ಕಳುಹಿಸಲಾಗಿತ್ತು.

ಇದನ್ನೂ ಓದಿ: ಬಾಬಾ ಸಿದ್ದಿಕಿ ಕೇಸ್​ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ; ಏನಿದು ಲಿಂಕ್..? 

ಮುಂಬೈ ಟ್ರಾಫಿಕ್ ಪೊಲೀಸರಿಗೆ ವಾಟ್ಸಾಪ್‌ ಮೆಸೇಜ್‌ನಲ್ಲಿ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ರವಾನೆ ಮಾಡಲಾಗಿತ್ತು. ನಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ. ತನಗೆ 5 ಕೋಟಿ ರೂಪಾಯಿ ಕೊಡಬೇಕು. ಹಣ ಕೊಡದಿದ್ದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಮೆಸೇಜ್ ಮಾಡಲಾಗಿತ್ತು.

ಅನಾಮಧೇಯ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ. ಬಳಿಕ ಅದೇ ವಾಟ್ಸಾಪ್‌ಗೆ ಮೆಸೇಜ್ ಮಾಡಿ ಕ್ಷಮೆಯನ್ನು ಕೇಳಿದ್ದ. ಇದೀಗ ಈ ವಾಟ್ಸ್ಆ್ಯಪ್ ನಂಬರ್ ಟ್ರ್ಯಾಕ್ ಮಾಡಿರುವ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

₹5 ಕೋಟಿಗೆ ಡಿಮ್ಯಾಂಡ್ ಇಟ್ಟಿದ್ದು ತರಕಾರಿ ವ್ಯಾಪಾರಿ!
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಜಾರ್ಖಂಡ್‌ ರಾಜ್ಯದಿಂದ ಬೆದರಿಕೆ ಮೆಸೇಜ್ ಬಂದಿತ್ತು. ಜಮ್‌ಶೇಡ್‌ಪುರದ ತರಕಾರಿ ವ್ಯಾಪಾರಿ 5 ಕೋಟಿ ರೂಪಾಯಿಗೆ ಬೆದರಿಕೆ ಹಾಕಿದ್ದು ಮುಂಬೈ ಪೊಲೀಸರು ವಾಟ್ಸ್‌ಆ್ಯಪ್ ನಂಬರ್ ಟ್ರ್ಯಾಕ್ ಮಾಡುವ ಮೂಲಕ ಬಂಧಿಸಿದ್ದಾರೆ. ತರಕಾರಿ ವ್ಯಾಪಾರಿ ಹಣದ ಆಸೆಗೆ ಡಿಮ್ಯಾಂಡ್ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಮಾನ್ ಖಾನ್‌ಗೆ ₹5 ಕೋಟಿ ಡಿಮ್ಯಾಂಡ್‌ ಮಾಡಿದ್ದು ತರಕಾರಿ ವ್ಯಾಪಾರಿ; ಜೀವ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್!

https://newsfirstlive.com/wp-content/uploads/2024/10/Salman-Khan-Lawrence-Bishnoi.jpg

Load More