/newsfirstlive-kannada/media/post_attachments/wp-content/uploads/2024/07/SALMAN_KHAN-2.jpg)
ಮುಂಬೈ: ಬಾಲಿವುಡ್​ ಇಂಡಸ್ಟ್ರಿ ಎಂದರೆ ಹಣದ ಹೊಳೆಯೇ ಹರಿಯುತ್ತದೆ. ಒಂದೇ ಒಂದು ಜಾಹೀರಾತು ಮಾಡಿದರೆ ಸಾಕು ಅಲ್ಲಿನ ಸ್ಟಾರ್ಸ್ ಕೋಟಿ ಕೋಟಿ ರೂಪಾಯಿಗಳನ್ನ ಜೇಬಿಗೆ ಹಾಕಿಕೊಳ್ತಾರೆ. ಬಿಟೌನ್​ನಲ್ಲಿ ಹಣಕ್ಕೇನೂ ಬರ ಇಲ್ಲ. ಅಲ್ಲಿನ ಪ್ರತಿಯೊಬ್ಬ ಸೆಲೆಬ್ರಿಟಿಯೂ ಸಿನಿಮಾ, ರಿಯಾಲಿಟಿ ಶೋ, ಬೇರೆ ಬೇರೆ ಕಾರ್ಯಕ್ರಮಗಳಿಂದ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇವರೇನು ಸೆಲೆಬ್ರಿಟಿ ಹಣ ಗಳಿಸ್ತಾರೆ. ಆದರೆ ಸ್ಟಾರ್​ಗಳ ಹಿಂದಿರುವವರು ಭಾರೀ ಮೊತ್ತದ ಹಣ ಗಳಿಸುತ್ತಾರೆ ಎನ್ನಲಾಗ್ತಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್, ಬಾಲಿವುಡ್​ನ ಬ್ಯಾಚುಲರ್​, ಸೂಪರ್ ಸ್ಟಾರ್​ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್​ನ ಸ್ಯಾಲರಿ ಎಷ್ಟು ಎಂದು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!
ಸೂಪರ್ ಸ್ಟಾರ್​ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್​ನ ಹೆಸರು ಗುರ್ಮೀತ್ ಸಿಂಗ್ ಜಾಲಿ. ಕಳೆದ 30 ವರ್ಷಗಳಿಂದ ಸಲ್ಮಾನ್​ ಖಾನ್ ಅವರ ಅಂಗರಕ್ಷಕರಾಗಿ ಕೆಲಸ ಮಾಡ್ತಿದ್ದಾರೆ. ಈ ಬಾಡಿಗಾರ್ಡ್ ಗೆ​ ಬಾಲಿವುಡ್​​ನಲ್ಲಿ ಶೇರ್​ (ಸಿಂಹ) ಎಂದು ಕರೆಯುತ್ತಾರೆ. ಗುರ್ಮೀತ್ ಸಿಂಗ್ ಜಾಲಿ ಅವರು 1969 ರಲ್ಲಿ ಮುಂಬೈನಲ್ಲಿ ಜನಿಸುತ್ತಾರೆ. ನಂತರದ ದಿನಗಳಲ್ಲಿ ಇವರು ಮೊದಲು ಜೂನಿಯರ್ ಬಾಡಿ ಬಿಲ್ಡಿಂಗ್‌ನ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿ ಗೆಲ್ತಾರೆ. ನಂತರ 1987ರಲ್ಲಿ ಮಿಸ್ಟರ್ ಮುಂಬೈ ಪ್ರಶಸ್ತಿ ತಮ್ಮದಾಗಿಸಿಕೊಳ್ಳುತ್ತಾರೆ. ಬಳಿಕ ಕಂಪನಿ ಒಂದರಲ್ಲಿ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿರುತ್ತಾರೆ.
ಇದನ್ನೂ ಓದಿ: ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ.. ಮನು ಭಾಕರ್​ಗೆ ಅಭಿನಂದನೆಗಳ ಸುರಿಮಳೆ
/newsfirstlive-kannada/media/post_attachments/wp-content/uploads/2024/07/SALMAN_KHAN_2.jpg)
ಆಗ 1995ರಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಳ್ತಾರೆ. ಇದಾದ ಮೇಲೆ ಸಲ್ಮಾನ್ ಅವರು ತಮ್ಮ ಬಾಡಿಗಾರ್ಡ್​ ಆಗಿ ಅವರನ್ನ ನೇಮಿಸಿಕೊಳ್ತಾರೆ. ಅಂದಿನಿಂದ ಇವರೆಗೂ ಸಲ್ಮಾನ್ ಖಾನ್ ಅವರ ಪ್ರತಿ ಹೆಜ್ಜೆಯ ಹಿಂದೆ ಗುರ್ಮೀತ್ ಸಿಂಗ್ ನೆರಳು ಇರುತ್ತೆ. ಹೀಗಾಗಿ ಸಲ್ಮಾನ್ ಖಾನ್​ಗೂ ಸಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ, ನಂಬಿಕೆ. ಇವರು ಒಂದು ರೀತಿ ಸ್ನೇಹಮಯವಾಗಿ ಇರುತ್ತಾರೆ ಎನ್ನುವುದಕ್ಕೆ ಬೆಸ್ಟ್ ಉದಾಹರಣೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿರುವ ಇವರ ಫೋಟೋಗಳು. ಅಲ್ಲದೇ ಸಂದರ್ಶನವೊಂದರಲ್ಲಿ ನಾನು ಎಲ್ಲಿವರೆಗೆ ಬದುಕಿರುತ್ತೇನೋ ಅಲ್ಲಿವರೆಗೂ ಸಲ್ಲು ಭಾಯ್ ಅವರ ರಕ್ಷಣೆ ಮಾಡುತ್ತಿರುತ್ತೇನೆ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
ಸಲ್ಮಾನ್​ ಖಾನ್ ಅವರು ತನ್ನ ನೆಚ್ಚಿನ ಬಾಡಿಗಾರ್ಡ್​ಗೆ ಎಷ್ಟು ಸ್ಯಾಲರಿ ಕೊಡ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ಬಾಡಿಗಾರ್ಡ್ ಗುರ್ಮೀತ್ ಸಿಂಗ್​ಗೆ ವರ್ಷಕ್ಕೆ 2 ಕೋಟಿ ರೂಪಾಯಿಗಳು ಅಂದರೆ ತಿಂಗಳಿಗೆ 17 ಲಕ್ಷ ರೂಪಾಯಿಗಳನ್ನು ಸಲ್ಲು ಭಾಯ್​ ನಿಡ್ತಾರಂತೆ. ತಿಂಗಳ ಮೊದಲ ವಾರದಲ್ಲೇ ಲಕ್ಷ ಲಕ್ಷ ಸಂಬಳ ಸಿಂಗ್​ ಕೈ ಸೇರುತ್ತದೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/07/SALLU.jpg)
ಇಷ್ಟೊಂದು ಮೊತ್ತದ ಹಣವನ್ನು ಜೇಬಿಗೆ ಇಳಿಸುತ್ತಿರುವ ಬಾಡಿಗಾರ್ಡ್​ ಗುರ್ಮೀತ್ ಸಿಂಗ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಆದರು ಇಂದು​ ಮುಂಬೈನಲ್ಲೇ ಸ್ವಂತ ನಿವಾಸ ಹೊಂದಿದ್ದಾರೆ. ಜೊತೆಗೆ ಐಷಾರಾಮಿ ಕಾರು, ಬೈಕ್​ ಸೇರಿದಂತೆ ಲಕ್ಸುರಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇವರ ಬಳಿ ಕವಾಸಕಿ ಸೂಪರ್ ಬೈಕ್, ಮರ್ಸಿಡಿಸ್ ಹಾಗೂ ಬಿಎಂಡಬ್ಲ್ಯು ಕಾರು ಹೊಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 30 ವರ್ಷಗಳಿಂದ ಗುರ್ಮೀತ್ ಸಿಂಗ್ ತಮ್ಮ ಜೊತೆ ಇರುತ್ತಿರುವುದರಿಂದ ಅವರನ್ನ ಶೇರ್ ಎಂದು ಸಲ್ಮಾನ್​ ಖಾನ್ ಕರೆಯುತ್ತಾರಂತೆ.
ಬಾಲಿವುಡ್​ ಸ್ಟಾರ್​ಗಳಂತೆ ಗುರ್ಮೀತ್ ಸಿಂಗ್ ಕೂಡ ಇಂಡಿಸ್ಟ್ರಿಯಲ್ಲಿ ಒಳ್ಳೆಯ ಹೆಸರಿನ ಜೊತೆ ಸೆಲೆಬ್ರಿಟಿಯಾಗಿದ್ದಾರೆ. ಗುರ್ಮೀತ್ ತಮ್ಮ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೆ ಸಲ್ಲು ಭಾಯ್​​ರನ್ನ ಕರೆದುಕೊಂಡು ಹೋಗ್ತಾರೆ. ಇನ್ನೊಂದು ವಿಶೇಷ ಎಂದರೆ ಮಾಲೀಕರಾದವರು ಕೆಲಸಗಾರರ ಭುಜದ ಮೇಲೆ ಕೈ ಹಾಕೋದು ಕಾಮನ್. ಆದರೆ ಇಲ್ಲಿ ಮಾತ್ರ ಇದು ಫುಲ್ ಚೇಂಜ್. ಯಾವ ಫೋಟೋದಲ್ಲೂ ನೋಡಿದರೂ ಸಲ್ಮಾನ್ ಖಾನ್ ಭುಜದ ಮೇಲೆ ಗುರ್ಮೀತ್ ಸಿಂಗ್ ಕೈ ಹಾಕಿ ಸ್ಟಾರ್​​ನಂತೆ ಪೋಸ್ ಕೊಟ್ಟಿದ್ದಾರೆ. ಇಂತಹ ಫೋಟೋಗಳನ್ನ ನೋಡಿದರೆ ಯಾರು ಓನರ್ ಅನ್ನೋದೇ ಕನ್​​ಫ್ಯೂಸ್​ ಆಗುತ್ತೆ.
ವಿಶೇಷ ವರದಿ:ಭೀಮಪ್ಪ,ನ್ಯೂಸ್ ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us