/newsfirstlive-kannada/media/post_attachments/wp-content/uploads/2025/07/salman1.jpg)
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಸಲ್ಮಾನ್ ಖಾನ್ ಅವರು ಬುಧವಾರ ರಾತ್ರಿ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರ 65ನೇ ಬರ್ತ್ ಡೇ ಸೆಲೆಬ್ರೇಷನ್ಗೆ ಬಂದಿದ್ದರು.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?
ಭಾರೀ ಭದ್ರತೆ ನಡುವೆ ಬರ್ತ್ ಡೇ ಪಾರ್ಟಿಗೆ ಸ್ಟೈಲಿಶ್ ಲುಕ್ನಲ್ಲಿ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ. ಹೌದು, ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಸಂಗೀತಾ ಬಿಜಲಾನಿ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಸಂಗೀತಾ ಅವರು ಸಲ್ಮಾನ್ ಖಾನ್ ಅವರ ಗೆಳತಿಯಾಗಿದ್ದರು. ಸಲ್ಮಾನ್ ಅವರನ್ನು ಮದುವೆಯಾಗಲು ಸಹ ಸಜ್ಜಾಗಿದ್ದರು. ಆದರೆ ಯಾವುದೋ ಕಾರಣದಿಂದ ಅದು ಮುರಿದುಹೋಯಿತು. ಅದಾದ ನಂತರ, ನಟಿ ಅವರಿಂದ ಮತ್ತು ಚಿತ್ರರಂಗದಿಂದ ದೂರವಾದರು. ಇನ್ನೂ, ಸಲ್ಮಾನ್ ಖಾನ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಸಂಗೀತಾ ಅವರ ಹೆಸರು ಒಬ್ಬ ಕ್ರಿಕೆಟಿಗನೊಂದಿಗೆ ತಳುಕು ಹಾಕಿಕೊಂಡಿತು. ಅವರೇ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್.
ಸಂಗೀತಾ ಮೊದಲ ನೋಟದಲ್ಲೇ ಅಜರ್‌ನನ್ನು ಪ್ರೀತಿಸುತ್ತಿದ್ದರು. 1996ರಲ್ಲಿ ಅವರು ಸಂಗೀತಾ ಬಿಜಲಾನಿ ಮೊಹಮ್ಮದ್ ಅಜರುದ್ದೀನ್ ರಹಸ್ಯವಾಗಿ ಮದುವೆಯಾಗಿದ್ದರು. ಆದ್ರೆ ಮೊಹಮ್ಮದ್ ಅಜರುದ್ದೀನ್ ಈ ಹಿಂದೆಯೇ ಹೈದ್ರಾಬಾದ್ ಮೂಲದ ನೂರೀನ್ ಅನ್ನೋ ಹುಡುಗಿಯನ್ನ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಕೂಡ ಹುಟ್ಟಿದ್ದರು. ಆದ್ರೆ ಇಬ್ಬರ ಸಂಸಾರದಲ್ಲಿ ಬಿರುಕು ಉಂಟಾಗಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ