/newsfirstlive-kannada/media/post_attachments/wp-content/uploads/2024/10/SALMAN-KHAN-SIDDAQUE-1.jpg)
ಬಾಬಾ ಸಿದ್ಧಕಿಯನ್ನು ಮೂರು ಜನ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಬಾಬಾ ಸಿದ್ಧಕಿ ಬಾಲಿವುಡ್ನೊಂದಿಗೆ ಅತ್ಯಂತ ನಿಕಟ ಸ್ನೇಹವನ್ನು ಹೊಂದಿದ್ದರು. ಅದರಲ್ಲೂ ಸಲ್ಮಾನ್ ಖಾನ್ ಹಾಗೂ ಶಾರುಖ್ಖಾನ್ ಅವರಿಗೆ ಅತ್ಯಂತ ನಿಕಟವರ್ತಿಯಾಗಿದ್ದರು. ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರು ಕೂಡ ಸಲ್ಲು ಹಾಗೂ ಶಾರುಖ್ ಹಾಜರಾಗುತ್ತಿದ್ದರು. ಅಷ್ಟೊಂದು ಆತ್ಮೀಯವಾಗಿದ್ದರು. ಈಗ ಸಿದ್ಧಕಿಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಇದು ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ರನ್ನು ವಿಚಲಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಲೀಲಾವತಿ ಆಸ್ಪತ್ರೆಯಲ್ಲಿ ಸಿದ್ಧಕಿಯನ್ನು ಕೊನೆಯ ಬಾರಿ ನೋಡಿ ಬಂದ ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿ ನಿದ್ದೆಯಿಲ್ಲದೇ ಒದ್ದಾಡಿದ್ದಾರೆ ಎಂಬ ಸುದ್ದಿಯೊಂದು ಈಗ ಜೋರಾಗಿ ಹರಿದಾಡುತ್ತಿದೆ.ಆತ್ಮೀಯ ಗೆಳೆಯ ಭೀಕರ ಮರಣದ ಸುದ್ದಿ ತಿಳಿದಾಗಿನಿಂದ ಇಡೀ ರಾತ್ರಿ ಸಲ್ಮಾನ್ ಖಾನ್ ಅಂತಿಮಕ್ರಿಯೆಯ ಬಗ್ಗೆ ಏನೆಲ್ಲಾ ಆಯ್ತು ಎಂದು ಕ್ಷಣ ಕ್ಷಣ ಸುದ್ದಿಯನ್ನು ಫೋನ್ ಕಾಲ್ ಮೂಲಕ ಪಡೆಯುತ್ತಿದ್ದರಂತೆ. ಅದರ ಜೊತೆಗೆ ತಮ್ಮ ಎಲ್ಲಾ ಮೀಟಿಂಗ್ಗಳನ್ನು ಸಲ್ಮಾನ್ ಖಾನ್ ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಪಟಾಕಿ ಸೌಂಡಿನಲ್ಲೇ ಗುಂಡಿನ ದಾಳಿ.. ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ NCP ನಾಯಕ; ಯಾರು ಈ ಬಾಬಾ ಸಿದ್ದಿಕಿ?
ಸಲ್ಮಾನ್ ಖಾನ್ ಕುಟುಂಬದೊಂದಿಗೆ ತುಂಬಾ ಆತ್ಮೀಯರಾಗಿದ್ದ ಬಾಬಾ ಸಿದ್ಧಕಿ, ಸಲ್ಮಾನ್ ಕುಟುಂಬದಲ್ಲಿ ಒಬ್ಬರಾಗಿ ಉಳಿದುಕೊಂಡಿದ್ದರು. ಸಲ್ಮಾನ್ ಸಹೋದರರಾದ ಅರ್ಬಾಜ್ ಖಾನ್ ಹಾಗೂ ಸೋಹಿಲ್ ಖಾನ್ರೊಂದಿಗೂ ಕೂಡ ಬಾಬಾ ಸಿದ್ಧಕಿ ಅಷ್ಟೇ ಆತ್ಮಿಯತೆಯಿಂದ ಇದ್ದರು.
ಬಾಬಾ ಸಿದ್ಧಕಿ ಅಸುನೀಗಿದ ಸುದ್ದಿ ಬಂದಾಗ ಸಲ್ಮಾನ್ ಖಾನ್ ಬಿಗ್ಬಾಸ್ ಶೂಟಿಂಗ್ನಲ್ಲಿದ್ದರು. ರವಿವಾರದ ವಿಕೇಂಡ್ ವಾರ್ ಶೂಟಿಂಗ್ನಲ್ಲಿ ನಿರತರಾಗಿದ್ದ ವೇಳೆ ಸಲ್ಮಾನ್ಗೆ ಸುದ್ದಿ ಮುಟ್ಟಿದೆ. ಕೂಡಲೇ ಮುಂದಿನ ಶೂಟಿಂಗ್ ಕ್ಯಾನ್ಸಲ್ ಮಾಡಿದ ಸಲ್ಲು ನೇರವಾಗಿ ಲೀಲಾವತಿ ಆಸ್ಪತ್ರೆಗೆ ಧಾವಿಸಿದ್ದರು.
ಇದನ್ನೂ ಓದಿ:ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ಧಕಿ ಮೇಲೆ ಗುಂಡಿನ ದಾಳಿ; ಲೀಲಾವತಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಬಾ
ಸದ್ಯ ಬಾಬಾ ಸಿದ್ಧಕಿ ಹತ್ಯೆಯ ಹೊಣೆಯನ್ನ ಲಾವರೆನ್ಸ್ ಬಿಷ್ಣೊಯಿ ಗ್ಯಾಂಗ್ ಹೊತ್ತುಕೊಂಡಿದೆ. ಬಿಷ್ಣೋಯಿ ಗ್ಯಾಂಗ್ನ ಸದಸ್ಯನಾಗಿರುವ ಒಬ್ಬ ಇದನ್ನು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾನೆ. ಶುಭೂ ಲಂಕರ್ ಮಹಾರಾಷ್ಟ್ರ ಎನ್ನವು ಫೇಸ್ಬುಕ್ ಖಾತೆಯಲ್ಲೊಬ್ಬ ಈ ಬಗ್ಗೆ ಪೋಸ್ಟ್ ಒಂದನ್ನ ಮಾಡಿದ್ದಾನೆ. ಓಂ, ಜೈ ಶ್ರೀರಾಮ್, ಜೈಭಾರತ್, ನಾನು ಬದುಕಿನ ಸಾರವನ್ನು ಕಂಡುಕೊಂಡಿದ್ದೇನೆ. ಸಂಪತ್ತು ಮತ್ತು ದೇಹ ಎರಡು ನಶ್ವರ ಎಂಬುದು ಕೂಡ ಗೊತ್ತಾಗಿದೆ. ನಾನು ನನ್ನ ಸ್ನೇಹಕ್ಕೊಸ್ಕರ ಅತ್ಯದ್ಭುತ ಕಾರ್ಯವನ್ನು ಮಾಡಿದ ಬಗ್ಗೆ ಗೌರವ ಇದೆ. ಸಲ್ಮಾನ್ ಖಾನ್, ನಮಗೆ ಈ ಯುದ್ಧ ಬೇಕಾಗಿರಲಿಲ್ಲ. ಆದರೆ, ನೀನು ನಮ್ಮ ಸಹೋದರನಿಗೆ ನೋವುಂಟು ಮಾಡಿದ್ದೀಯಾ ಎಂದು ಪೋಸ್ಟ್ನಲ್ಲಿ ಉಲ್ಲೇಖವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ