Advertisment

ಸಲ್ಲುಭಾಯ್​ಗೆ ನಿಲ್ಲದ ಬಿಷ್ಣೋಯ್ ಕಾಟ! ಶೂಟಿಂಗ್​ ಸ್ಥಳಕ್ಕೆ ಬಂದ ಅನಾಮಧೇಯ ವ್ಯಕ್ತಿ ಹೇಳಿದ್ದೇನು?

author-image
Gopal Kulkarni
Updated On
ಸಲ್ಲುಭಾಯ್​ಗೆ ನಿಲ್ಲದ ಬಿಷ್ಣೋಯ್ ಕಾಟ! ಶೂಟಿಂಗ್​ ಸ್ಥಳಕ್ಕೆ ಬಂದ ಅನಾಮಧೇಯ ವ್ಯಕ್ತಿ ಹೇಳಿದ್ದೇನು?
Advertisment
  • ಬಾಲಿವುಡ್ ಬ್ಯಾಡ್​ಬಾಯ್ ಸಲ್ಲುಗೆ ನಿಲ್ಲದ ಬಿಷ್ಣೋಯ್ ಕಾಟ
  • ಶೂಟಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಯಿಂದಲೂ ಸಲ್ಮಾನ್​ಗೆ ಬೆದರಿಕೆ
  • ಯಾಕೆ ಬಿಷ್ಣೋಯ್​ಗೆ ಹೇಳಲಾ? ಎಂದು ಗುಡುಗಿದ ಅನಾಮಧೇಯ

2024ನೇ ವರ್ಷ ಸಲ್ಮಾನ್ ಖಾನ್ ಪಾಲಿಗೆ ಬೆದರಿಕೆಗಳ ವರ್ಷಧಾರೆ ತಂದ ವರ್ಷ. ಏಪ್ರಿಲ್‌ನಿಂದ ಶುರುವಾದ ಬಿಷ್ಣೋಯ್​ ಗ್ಯಾಂಗ್​ ಹಾಗೂ ಸಲ್ಮಾನ್ ಖಾನ್ ನಡುವಿನ ಈ ಬೆದರಿಕೆಯ ಆಟ ಮುಂದುವರೆದುಕೊಂಡೇ ಬಂದಿದೆ. ಅದೆಲ್ಲಿಯವರೆಗೆ ಅಂದ್ರೆ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿಯನ್ನ ಇದೇ ಗ್ಯಾಂಗ್ ಹತ್ಯೆ ಮಾಡುವ ಮಟ್ಟಕ್ಕೆ ಹೋಗಿತ್ತು. ಇದೀಗ ಸಲ್ಲುಭಾಯ್​ಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ. ಅದು ಕೂಡ ಶೂಟಿಂಗ್ ಸ್ಪಾಟ್​ನಲ್ಲಿಯೇ.

Advertisment

ಸಲ್ಮಾನ್ ಖಾನ್ ಶೂಟಿಂಗ್ ಸ್ಥಳದಲ್ಲಿ ಅಪರಿಚಿತನಿಂದ ಭೀತಿ
ಗುರು ಸಲ್ಮಾನ್​ ಖಾನ್​ಗೆ ಬಂದಿರೋ ಅಗ್ನಿ ಪರೀಕ್ಷೆ ಒಂದೆರಡಲ್ಲ. ಕುಳಿತಲ್ಲೂ, ನಿಂತಲ್ಲೂ ಬಿಷ್ಣೋಯ್​ ಎಂಬ ಹೆಸರು ನಡುಗಿಸುತ್ತಿದೆ. ​ಮಲಗಿದ್ದರೂ ಬಿಷ್ಣೋಯ್​ ಹೆಸರು ಬೆನ್ನು ಹತ್ತಿದ ಬೇತಾಳದಂತೆ ಕಾಡುತ್ತಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್​ನಿಂದ ಜೀವ ಉಳಿಸಿಕೊಳ್ಳೋದಕ್ಕೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಬುಲ್ಲೆಟ್ ಪ್ರೂಫ್​ ಕಾರು. ಹೈ ಸೆಕ್ಯೂರಿಟಿ. ಇಷ್ಟಲ್ಲಾ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದರೂ ಕೂಡ ಒಬ್ಬರಾದ ಮೇಲೊಬ್ಬರು ಬಂದು ಸಲ್ಮಾನ್​ ಬಾಯ್​ನ ಜೀವಕ್ಕೆ ಬೆದರಿಕೆವೊಡ್ಡುತ್ತಿದ್ದಾರೆ.

ನಿನ್ನೆ ಮುಂಬೈನಲ್ಲಿ ಸಲ್ಮಾನ್ ಖಾನ್ ಚಿತ್ರವೊಂದರ ಶೂಟಿಂಗ್​ನಲ್ಲಿದ್ದರು. ಚಿತ್ರೀಕರಣದ ಸ್ಥಳಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಇವನು ಯಾರು ಅಂತಾ ಅನುಮಾನ ಪಟ್ಟು, ಆತನನ್ನ ವಿಚಾರಿಸಿದಾಗ ಶಾಕಿಂಗ್​ ಉತ್ತರ ಕೊಟ್ಟಿದ್ದಾನೆ. ಇದು ಸಲ್ಮಾನ್​ ಖಾನ್​ನ ಬೆವರಿಳಿಸಿದೆ.

ಇದನ್ನೂ ಓದಿ:ಪುಷ್ಪಾ-2 ವಿಶ್ವದಾದ್ಯಂತ ರಿಲೀಸ್.. ಫಸ್ಟ್​ ಡೇ, ಫಸ್ಟ್​ ಶೋ ನೋಡಿ ಅಭಿಮಾನಿಗಳು ಥ್ರಿಲ್..!

Advertisment

ಬಾಲಿವುಡ್ ನಟ ಸಲ್ಮಾನ್​ ಖಾನ್ ಭದ್ರತೆಯಲ್ಲಿ ಲೋಪ ಉಂಟಾಗಿದ್ದು, ಶೂಟಿಂಗ್ ಸ್ಥಳಕ್ಕೆ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಮುಂಬೈನ​ ದಾದರ್‌ನ ಶಿವಾಜಿ ಪಾರ್ಕ್ ಬಳಿ ಶೂಟಿಂಗ್ ನಡೆಸಲಾಗುತ್ತಿತ್ತು. ಶೂಟಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿಯ ಚಲನವಲನ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಆತನನ್ನ ಹಿಡಿದು ವಿಚಾರಣೆ ನಡೆಸಿದಾಗ ಬಿಷ್ಣೋಯ್​ಗೆ ಹೇಳುವೆ ಎಂದು ಬೆದರಿಕೆ ಹಾಕಿದ್ದಾನೆ. ಚಿತ್ರತಂಡ ಪೊಲೀಸ್​ ಅಧಿಕಾರಿಗಳಿಗೆ ತಿಳಿಸಿದ್ದು, ಅಪರಿಚಿತನನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:VIDEO: ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಅನಾಹುತ; ಪೊಲೀಸರಿಂದ ಲಾಠಿ ಚಾರ್ಜ್‌!

ಕೃಷ್ಣಮೃಗಗಳನ್ನ ಹೊಡೆದುರುಳಿಸಿದ ಆರೋಪದ ಕಾರಣ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಟೋಯ್​ ಗ್ಯಾಂಗ್​ ಸಂಚು ಹಾಕುತ್ತಲೇ ಇದೆ. ಸಲ್ಮಾನ್​ ಖಾನ್​ ಕ್ಷಮೆ ಕೇಳಲಿ ಎಂಬುದು ಅವರ ಹಠ. ಸಲ್ಮಾನ್​ ಕ್ಷಮೆ ಕೇಳಲ್ಲ. ಬಿಷ್ಟೋಯ್ ಗ್ಯಾಂಗ್​ ಬಿಡಲ್ಲ. ಅನ್ನೋ ಟಾಕ್​ ಇದೀಗ ಮುಂಬೈನಲ್ಲಿ ಹರಿದಾಡ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment