/newsfirstlive-kannada/media/post_attachments/wp-content/uploads/2024/10/SALMAN-KHAN-2.jpg)
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಜೀವ ಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಿಸಲಾಗಿದೆ. ಈಗಾಲೇ ವೈ-ಪ್ಲಸ್ ಸೆಕ್ಯೂರಿಟಿ ಪಡೆದಿರುವ ಸಲ್ಮಾನ್ ಖಾನ್ಗೆ ಇದೀಗ ಬುಲೆಟ್ ಪ್ರೂಫ್ ಕಾರು ಖರೀದಿಸಲಾಗಿದೆ.
ಎಷ್ಟು ಕೋಟಿ ಕಾರು..?
2 ಕೋಟಿ ಮೌಲ್ಯದ ಹೊಸ ಬುಲೆಟ್ ಪ್ರೂಫ್ ನಿಸ್ಸಾನ್ SUV ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಆ ಮೂಲಕ ಸಲ್ಮಾನ್ ಖಾನ್, ಎರಡನೇ ಬುಲೆಟ್ ಪ್ರೂಫ್ ಕಾರು ಹೊಂದಿದಂತಾಗುತ್ತದೆ. ಈ ಕಾರು ಗುಂಡಿನ ದಾಳಿಯನ್ನು ತಡೆದುಕೊಳ್ಳುವ ಅಗ್ನಿ ನಿರೋಧಕ ಗ್ಲಾಸ್ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು ಟಿಂಟೆಡ್ ಗ್ಲಾಸ್ ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಸಲ್ಮಾನ್ ಖಾನ್ ಈಗಾಗಲೇ ಒಂದು ಬುಲೆಟ್ ಪ್ರೂಫ್ ಕಾರನ್ನು ಹೊಂದಿದ್ದರು. ಈಗ ಎರಡನೇ ಬುಲೆಟ್ ಪ್ರೂಫ್ ಕಾರ್ ಖರೀದಿಸಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಮತ್ತೊಂದೆಡೆ ಹಿಂದಿ ಬಿಗ್ ಬಾಸ್ ಶೋ ಶೂಟಿಂಗ್‌ಗೆ 60 ಮಂದಿ ಬಾಡಿಗಾರ್ಡ್ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮ ಶೂಟಿಂಗ್ ಆರಂಭದಿಂದ ಮುಗಿಯುವವರೆಗೂ ಬಾಡಿಗಾರ್ಡ್ಗಳ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:25 ಲಕ್ಷ, ಪಾಕಿಸ್ತಾನದಿಂದ ಬರಲಿದ್ವು ಎಕೆ 47, ಎಕೆ92! ಸಲ್ಮಾನ್ ಮುಗಿಸಲು ಏನೆಲ್ಲಾ ಪ್ಲಾನ್ ನಡೆದಿತ್ತು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ