/newsfirstlive-kannada/media/post_attachments/wp-content/uploads/2024/10/SALMAN-KHAN.jpg)
ಮುಂಬೈನಲ್ಲಿ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ ಅವರನ್ನು ಶನಿವಾರ ಗುಂಡಿಕ್ಕಿ ಸಾಯಿಸಲಾಗಿದೆ. ಈ ಘಟನೆಯ ನಂತರ ಭದ್ರತೆಗೆ ಸಂಬಂಧಿಸಿದಂತೆ ದೊಡ್ಡ ಪ್ರಶ್ನೆಗಳು ಎದ್ದಿದ್ದು, ಪ್ರತಿಪಕ್ಷಗಳು ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸ್ತಿವೆ.
ಬಾಬಾ ಸಿದ್ದಿಕಿ ಹತ್ಯೆಯ ನಂತರ ಮುಂಬೈನಲ್ಲಿರುವ ನಟ ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡಿದೆ. ಹತ್ಯೆಯ ಎಲ್ಲಾ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು ಪೊಲೀಸರು ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ. ಕೃಷ್ಣಮೃಗ ಬೇಟೆ ವಿಚಾರದಲ್ಲಿ ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ:ಸಾಬರಮತಿ ಸೆಂಟ್ರಲ್ ಜೈಲಿನಲ್ಲಿ ಮೌನವ್ರತಕ್ಕೆ ಕೂತಿದ್ದೇಕೆ ಬಿಷ್ಣೋಯಿ? ಸಲ್ಲು ಸ್ನೇಹವೇ ಬಾಬಾ ಸಿದ್ಧಿಕಿಗೆ ಸಾವಾಯ್ತಾ?
ಬಾಬಾ ಸಿದ್ದಿಕಿ ಟಾರ್ಗೆಟ್
ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶಾನ್ ಕೂಡ ಟಾರ್ಗೆಟ್ ಆಗಿದ್ದಾರೆ. ಮಾಹಿತಿ ಪ್ರಕಾರ ಜೀಶಾನ್ ಕೂಡ ಹಂತಕರ ಗುರಿಯಾಗಿದ್ದ. ಬಾಬಾ ಸಿದ್ದಿಕಿ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಲಿವುಡ್ ಪಾಲಿನ ‘ಬಾಂದ್ರಾ ಬಾಯ್’ ಈ ಸಿದ್ದಿಕಿ?
ಬಾಬಾ ಸಿದ್ದಿಕಿ ರಾಜಕಾರಣಿ ಮಾತ್ರವಲ್ಲ. ಬಾಲಿವುಡ್ನ ಹಲವರ ಪಾಲಿನ ಬ್ಯಾಕ್ಬೋನ್. ಬಾಬಾ ಸಿದ್ದಿಕಿ, ಬಾಂದ್ರಾ ಬಾಯ್ ಅಂತಾನೆ ಖ್ಯಾತಿ. ಸಲ್ಮಾನ್-ಶಾರುಖ್ ನಡುವಿನ ಸ್ಟಾರ್ ವಾರ್ ಖತಂ ಮಾಡಿದ ಸಿದ್ದಿಕಿ, ರಂಜಾನ್ನ ಇಫ್ತಾರ್ ಕೂಟದಲ್ಲಿ ಒಂದಾಗಿಸಿದರು. ಪ್ರತಿವರ್ಷ ಆಯೋಜನೆ ಆಗುವ ಈ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ತುಂಬಿ ತುಳುಕುತ್ತಿತ್ತು. ಅದರಲ್ಲೂ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ಗೆ ಬಾಬಾ ಸಿದ್ದಿಕಿ ಅತ್ಯಾಪ್ತರಾಗಿದ್ದರು.
ಇದನ್ನೂ ಓದಿ:ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ