/newsfirstlive-kannada/media/post_attachments/wp-content/uploads/2024/08/salman_khan_NEW.jpg)
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಹಳೆ ಸಂದರ್ಶನದ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅವರು ತಮ್ಮ ಬಾಲ್ಯದಲ್ಲಿ ತಮ್ಮ ಮನೆಗೆ ನುಗ್ಗಿದ್ದ ಕಳ್ಳನನ್ನು ಹೇಗೆ ಹಿಡಿದಿದ್ದರು ಎಂದು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಆ ಕಳ್ಳನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಆತನಿಗೆ ಆಹಾರ ನೀಡಿದ್ದರಂತೆ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್.
ಇದನ್ನೂ ಓದಿ:ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!
ಸಲ್ಮಾನ್ ಖಾನ್ ಬಾಲಿವುಡ್ನ ಸೂಪರ್ ಸ್ಟಾರ್. ಮೊದಲಿನಿಂದ ಮಾನವೀಯತೆ ಗುಣವುಳ್ಳ ಆ್ಯಕ್ಟರ್. ಕಳೆದೆರಡು ತಿಂಗಳುಗಳ ಹಿಂದೆ ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು. ಮುಂಬೈ ಮನೆ ಗ್ಯಾಲಕ್ಸಿ ಕಟ್ಟಡದ ಮೇಲೆ ಬೈಕ್ನಲ್ಲಿ ಬಂದು ಅಪರಿಚಿತರು ಫೈರಿಂಗ್ ಮಾಡಿದ್ದರು. ಬಳಿಕ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸಲ್ಮಾನ್ ಖಾನ್ರನ್ನ ಕೊಲ್ಲಲು ಯತ್ನ ನಡೆದಿತ್ತು ಎಂಬುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ನಡುವೆ ಬಾಲಿವುಡ್ ನಟನ ಹಳೆ ಸಂದರ್ಶನ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಮನೆಗೆ ನುಗ್ಗಿದ ಕಳ್ಳನನ್ನು ಹೇಗೆ ಹಿಡಿದು, ಆ ಮೇಲೆ ಏನು ಮಾಡಿದ್ದರು ಎಂಬುದು ವಿವರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ!
ಬಾಲಿವುಡ್ ಬ್ಯೂಟಿ ನಟಿ ಪ್ರೀತಿ ಜಿಂಟಾರ ಚಾಟ್ ಶೋ 'ಅಪ್ ಕ್ಲೋಸ್ ಅಂಡ್ ಪರ್ಸನಲ್ ವಿತ್ PZ' ನಲ್ಲಿ, ಸಲ್ಮಾನ್ ಖಾನ್ ಇದನ್ನು ಎಳೆ ಎಳೆಯಾಗಿ ಹೇಳಿದ್ದಾರೆ. ಸಲ್ಮಾನ್ ಮನೆಯಲ್ಲಿ ತಿಂಗಳುಗಟ್ಟಲೆ ಹಲವು ಜನರು ಇರುತ್ತಿದ್ದರಂತೆ. ಅದೊಂದು ಸಲ ಪಾರ್ಟಿ ನಂತರ ಕಳ್ಳನೊಬ್ಬ ಸಲ್ಮಾನ್ ಖಾನ್ ಮನೆಗೆ ನುಗ್ಗಿದ್ದನಂತೆ. ಗ್ರ್ಯಾಂಡ್ ಪಾರ್ಟಿಯಲ್ಲಿ ಸಖತ್ ಆಗಿ ಎಂಜಾಯ್ ಮಾಡಿದ ಬಳಿಕ ಅರ್ಬಾಜ್ ಮಲಗುವ ರೂಮ್ಗೆ ಸಲ್ಮಾನ್ ಹೋಗಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?
ಆದರೆ ಅರ್ಬಾಜ್ ಮಲಗುವ ಮಲಗುವ ರೂಮ್ನಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಎಚ್ಚರ ವಹಿಸಿದ ಸಲ್ಮಾನ್ ಖಾನ್ ಸೈಲೆಂಟ್ ಆಗಿ ಹೋಗಿ ಅರ್ಬಾಜ್ರನ್ನು ನಿದ್ದೆಯಿಂದ ಎಬ್ಬಿಸಿದ್ದಾರೆ. ಇಬ್ಬರು ಸೇರಿಕೊಂಡು ಏನನ್ನು ಮಾತನಾಡದೇ ಗಪ್ಚುಪ್ ಆಗಿ ಕಳ್ಳನನ್ನು ಹಿಡಿದಿದ್ದರಂತೆ.
ಕಳ್ಳನನ್ನು ಹಿಡಿದ ಮೇಲೆ ಸಲ್ಮಾನ್ ಖಾನ್ ಏನು ಮಾಡಿದ್ರು?
ಕಳ್ಳನನ್ನು ಹಿಡಿದ ಮೇಲೆ ಸಂಪೂರ್ಣವಾಗಿ ಆತನನ್ನು ವಿಚಾರಣೆ ಮಾಡಿದ್ದಾರೆ. ಆ ಕಳ್ಳ ತನ್ನ ಬಗ್ಗೆ ಹೇಳಿಕೊಂಡಿದ್ದಾನೆ. ಅಲ್ಲದೇ ಅದೇ ಮೊದಲ ಬಾರಿಗೆ ಕಳ್ಳತನಕ್ಕೆ ಬಂದಿರುವುದಾಗಿ ಹೇಳಿ, ಈಗ ನಿಮಗೆ ಸಿಕ್ಕಿ ಬಿದ್ದಿದ್ದೇನೆ ಎಂದು ಹೇಳಿದ್ದಾನೆ. ಸುಳ್ಳು ಹೇಳುತ್ತಿದ್ದಾನೆಂದು ಅವನ ಬಳಿ ಹಣ ಇದೆಯೇ ಎಂದು ಸಂಪೂರ್ಣವಾಗಿ ಕಳ್ಳನನ್ನು ಚೆಕ್ ಮಾಡಿದಾಗ ಕೇವಲ 5 ರೂಪಾಯಿ ಮಾತ್ರ ಇತ್ತಂತೆ. ಆಗ ಸಲ್ಮಾನ್ ಖಾನ್, ಅರ್ಬಾಜ್ಗೆ ಏನೋ ಒಂಥರಾ ಬೇಜಾರಾಗಿ ಊಟ ಮಾಡಿದ್ದೀಯಾ ಎಂದು ಕೇಳಿದ್ರಂತೆ. ಅದಕ್ಕೆ ಕಳ್ಳ ಇಲ್ಲ ಎಂದು ಹೇಳಿದ್ದಾನೆ. ಆಗ ಆತನಿಗೆ ಹೊಟ್ಟೆ ತುಂಬಾ ಊಟ ತಿನ್ನಿಸಿ ಕಳುಹಿಸಿದ್ದರಂತೆ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂದರ್ಶನದಲ್ಲಿ ಹೇಳಿರುವುದು ಈಗ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ