ರಶ್ಮಿಕಾ ಮಗಳ ಜೊತೆಗೂ ಸಿನಿಮಾ ಮಾಡ್ತೇನೆ ನಿಮ್ಗೇನು? ಸಲ್ಮಾನ್ ಖಾನ್ ಆಕ್ರೋಶ ​

author-image
Veena Gangani
Updated On
ರಶ್ಮಿಕಾ ಮಗಳ ಜೊತೆಗೂ ಸಿನಿಮಾ ಮಾಡ್ತೇನೆ ನಿಮ್ಗೇನು? ಸಲ್ಮಾನ್ ಖಾನ್ ಆಕ್ರೋಶ ​
Advertisment
  • ಬಾಲಿವುಡ್​ ಸ್ಟಾರ್​ ಹೀರೋ ಜೊತೆ ನಟಿಸಿದ ನಟಿ ರಶ್ಮಿಕಾ
  • ರಶ್ಮಿಕಾ ಮಂದಣ್ಣ ವಯಸ್ಸಿನ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?
  • ಮಾರ್ಚ್​ 30 ರಂದು ತೆರೆಗೆ ಬರಲಿದೆ ಸಲ್ಲು ಭಾಯ್ ಸಿಕಂದರ್

ಕೊಡಗಿನ ಕುವರಿ, ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ಖ್ಯಾತಿ ಪಡೆದುಕೊಂಡಿರೋ ರಶ್ಮಿಕಾ ಮಂದಣ್ಣ ಸದ್ಯ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ‘ಸಿಕಂದರ್’. ಬಾಲಿವುಡ್​ ಸ್ಟಾರ್​ ಹೀರೋ ​ಸಲ್ಮಾನ್ ಖಾನ್ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ತೆರೆಗೆ ಬರಲು ಸಿಕಂದರ್ ಸಿನಿಮಾ ಸಜ್ಜಾಗಿದೆ.

publive-image

ಸಿನಿಮಾ ರಿಲೀಸ್​ಗೂ ಮುನ್ನವೇ ರಶ್ಮಿಕಾ ನಟನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಸಲ್ಮಾನ್ ಖಾನ್​ ಅವರಿಗಿಂತ ರಶ್ಮಿಕಾ 31 ವರ್ಷ ಚಿಕ್ಕವರು ಎಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಸಲ್ಮಾನ್​ ಖಾನ್​ ಜೊತೆಗೆ ರೊಮ್ಯಾನ್ಸ್ ವಿಚಾರಕ್ಕೂ ಟೀಕೆಗಳು ವ್ಯಕ್ತವಾಗಿದ್ದವು. ಆದ್ರೆ ಇದೀಗ ಎಲ್ಲದಕ್ಕೂ ಸಲ್ಲು ಭಾಯ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಇನ್ನೂ 2 ದಿನ ಭಯಂಕರ ಸೆಕೆ; ಕರ್ನಾಟಕದ ಈ ಭಾಗದಲ್ಲಿ ಭಾರೀ ಬಿಸಿಲು; ಹವಾಮಾನ ಇಲಾಖೆ ಎಚ್ಚರಿಕೆ

publive-image

ಭಾನುವಾರ ಸಿಕಂದರ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮಮೊಂದರಲ್ಲಿ ಮಾತಾಡಿದ ಸಲ್ಲು ಭಾಯ್​, ರಶ್ಮಿಕಾಗೆ ವಯಸ್ಸಿನ ಅಂತರದ ಬಗ್ಗೆ ಯಾವುದೇ ತೊಂದರೆ ಇಲ್ಲ. ಅವರ ತಂದೆಗೂ ಯಾವುದೇ ತೊಂದರೆ ಇಲ್ಲ. ಅವರಿಗಿಲ್ಲದ ಸಮಸ್ಯೆ ನಿಮಗೇಕೆ ಎಂದು ನಗು ನಗುತ್ತಲೇ ಟಾಂಗ್​ ಕೊಟ್ಟಿದ್ದಾರೆ. ಮತ್ತೆ ಮಾತನ್ನು ಮುಂದುವರೆಸಿದ ಅವರು, ರಶ್ಮಿಕಾ ಮದುವೆಯಾದರೂ ನಾನು ಅವರ ಜೊತೆ ನಟನೆ ಮಾಡೋದಕ್ಕೆ ಸಿದ್ಧ. ಮುಂದೊಂದು ದಿನ ರಶ್ಮಿಕಾಗೆ ಮಗಳಾದರೆ ಆಕೆ ಜೊತೆಗೂ ಸಿನಿಮಾ ಮಾಡುತ್ತೇನೆ ಹೇಳಿದ್ದಾರೆ.


">March 23, 2025

ತಮಿಳಿನ ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಸಿಕಂದರ್ ಸಿನಿಮಾ ಮೂಡಿ ಬರುತ್ತಿದೆ. ಇದೇ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಸತ್ಯರಾಜ್ ಇದರಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಹಾಡುಗಳು ವೀಕ್ಷಕರ ಗಮನ ಸೆಳೆದಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment