Advertisment

ಸಲ್ಮಾನ್ ಖಾನ್​ಗೆ ನೀಡಿರುವ Y plus ಭದ್ರತೆಗೆ ಸರ್ಕಾರ ಎಷ್ಟು ಖರ್ಚು ಮಾಡುತ್ತದೆ..?

author-image
Ganesh
Updated On
ಸಲ್ಮಾನ್ ಖಾನ್​ಗೆ ನೀಡಿರುವ Y plus ಭದ್ರತೆಗೆ ಸರ್ಕಾರ ಎಷ್ಟು ಖರ್ಚು ಮಾಡುತ್ತದೆ..?
Advertisment
  • ಸಲ್ಮಾನ್ ಖಾನ್​​ ಭದ್ರತೆಗೆ ಬೇಕು ಕೋಟಿ ಕೋಟಿ ಹಣ
  • ವೈ-ಪ್ಲಸ್ ಸೆಕ್ಯುರಿಟಿಯಲ್ಲಿ ಎಷ್ಟು ಸಿಬ್ಬಂದಿ ಇರುತ್ತಾರೆ..?
  • ಜೀವ ಬೆದರಿಕೆ ಹಿನ್ನೆಯಲ್ಲಿ ಸಲ್ಮಾನ್ ಖಾನ್​ಗೆ ಭದ್ರತೆ

ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್​​ಗೆ ವೈ-ಪ್ಲಸ್ ಭದ್ರತೆ ನೀಡಲಾಗಿದೆ. ಸಲ್ಮಾನ್ ಖಾನ್ ಭದ್ರತೆಗಾಗಿ ಸರ್ಕಾರ ಪ್ರತಿ ತಿಂಗಳು ಎಷ್ಟು ಹಣ ಖರ್ಚು ಮಾಡುತ್ತಿದೆ? ವರ್ಷಕ್ಕೆ ಎಷ್ಟು ಹಣ ಬೇಕು ಅನ್ನೋ ವಿವರ ಲಭ್ಯವಾಗಿದೆ.

Advertisment

ವೈ-ಪ್ಲಸ್ ಸೆಕ್ಯುರಿಟಿಯಲ್ಲಿ ಸುಮಾರು 25 ಭದ್ರತಾ ಸಿಬ್ಬಂದಿ ಸಲ್ಮಾನ್ ಖಾನ್ ರಕ್ಷಣೆಯಲ್ಲಿರುತ್ತಾರೆ. ಇದರಲ್ಲಿ ಸುಮಾರು 2 ರಿಂದ 4 NSG ಕಮಾಂಡೋಗಳು ಮತ್ತು ಪೊಲೀಸ್ ಭದ್ರತಾ ಸಿಬ್ಬಂದಿ ಜೊತೆಗೆ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಈ ಭದ್ರತಾ ತಂಡದಲ್ಲಿ 2 ರಿಂದ 3 ವಾಹನಗಳಿದ್ದು ಬುಲೆಟ್ ಪ್ರೂಫ್ ವಾಹನವೂ ಸೇರಿವೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಮೇಲೆ ಅಟ್ಯಾಕ್‌ ಮಾಡಿದ್ದು ಯಾಕೆ? ಇದು ಕೇವಲ ಟ್ರೇಲರ್​ ಅಷ್ಟೇ ಎಂದ ಗ್ಯಾಂಗ್!

ಸರ್ಕಾರ ಎಷ್ಟು ಕೋಟಿ ಖರ್ಚು ಮಾಡುತ್ತದೆ?
ತಜ್ಞರ ಪ್ರಕಾರ.. ವೈ ಪ್ಲಸ್ ಭದ್ರತೆಯ ವೆಚ್ಚವು ಪ್ರತಿ ತಿಂಗಳು ಸುಮಾರು 12 ಲಕ್ಷ ರೂಪಾಯಿಗಳು. ಅಂದರೆ ವಾರ್ಷಿಕ ವೆಚ್ಚವು ಸುಮಾರು 1.5 ಕೋಟಿ ರೂಪಾಯಿ ತಲುಪುತ್ತದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಯಾವುದೇ ವೈ-ಪ್ಲಸ್ ಸೆಕ್ಯುರಿಟಿ ತಂಡದೊಂದಿಗೆ ಹಾಜರಿರುವ ಸಿಬ್ಬಂದಿಯ ಸಂಖ್ಯೆಯನ್ನು ಭದ್ರತಾ ಕಾರಣಗಳಿಂದ ಸ್ಪಷ್ಟವಾಗಿ ಹೇಳುವುದಿಲ್ಲ.

Advertisment

ಕೆಲವು ಮಾಹಿತಿಗಳ ಪ್ರಕಾರ.. ಸಲ್ಮಾನ್ ಖಾನ್ ಭದ್ರತೆಗಾಗಿ ವೆಚ್ಚವು ಸುಮಾರು 3 ಕೋಟಿ ರೂಪಾಯಿ ತಲುಪುತ್ತದೆ. ವೈ-ಪ್ಲಸ್ ಭದ್ರತೆ, ಮುಂಬೈ ಪೊಲೀಸ್ ಸಿಬ್ಬಂದಿ ನಿಯೋಜನೆ, ಸಲ್ಮಾನ್ ಖಾನ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಸೇರಿ ಒಟ್ಟು 3 ಕೋಟಿ ರೂಪಾಯಿ ಖರ್ಚು ಆಗಲಿದೆ ಎಂದು ಹೇಳಲಾಗಿದೆ. ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಿನ್ನೆಯಲ್ಲಿ ಭದ್ರತೆ ಬಗ್ಗೆ ಪೊಲೀಸರು ವಿಶೇಷ ಕಾಳಜಿ ವಹಿಸ್ತಿದ್ದಾರೆ.

ಇದನ್ನೂ ಓದಿ:ಬಾಬಾ ಸಿದ್ದಿಕಿ ಕೇಸ್​ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ; ಏನಿದು ಲಿಂಕ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment