ನೆಚ್ಚಿನ ಶ್ವಾನ ಟೊರೊವನ್ನು ಕಳೆದುಕೊಂಡ ದುಃಖದಲ್ಲಿ ಸಲ್ಮಾನ್ ಖಾನ್​; ನೀನು ಎಂದಿಗೂ ನಮ್ಮೊಂದಿಗಿರುವೆ ಎಂದ ಲುಲಿಯಾ ವೆಂಚೂರ್

author-image
Gopal Kulkarni
Updated On
ನೆಚ್ಚಿನ ಶ್ವಾನ ಟೊರೊವನ್ನು ಕಳೆದುಕೊಂಡ ದುಃಖದಲ್ಲಿ ಸಲ್ಮಾನ್ ಖಾನ್​; ನೀನು ಎಂದಿಗೂ ನಮ್ಮೊಂದಿಗಿರುವೆ ಎಂದ ಲುಲಿಯಾ ವೆಂಚೂರ್
Advertisment
  • ನೆಚ್ಚಿನ ಶ್ವಾನ ಟೊರೊವನ್ನು ಕಳೆದುಕೊಂಡ ನಟ ಸಲ್ಮಾನ್ ಖಾನ್​
  • ಟೊರೊಗೆ ಬಾವುಕ ವಿದಾಯ ಹೇಳಿದ ಸಲ್ಲು ಗೆಳತಿ ಲುಲಿಯಾ ವೆಂಚೂರ್
  • ಸಲ್ಮಾನ್​ ಖಾನ್ ಪನ್​ವೇಲ್ ಫಾರ್ಮ್​ಹೌಸ್​ನಲ್ಲಿದ್ದ ನೆಚ್ಚಿನ ಶ್ವಾನ ಟೊರೊ

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ನೆಚ್ಚಿನ ಶ್ವಾನ ಟೊರೊವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.  ಈ ವಿಷಯವನ್ನು ಸಲ್ಮಾನ್ ಖಾನ್ ಆಪ್ತ ಗೆಳತಿ ಲುಲಿಯಾ ವೆಂಚೂರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಟೊರೊಗೆ ಭಾವುಕ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. ಟೊರೊ ಇಷ್ಟು ದಿನ ನಮ್ಮ ಬದುಕನ್ನು ಹರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನನ್ನ ಪ್ರೀತಿಯ ಟೋರೊ ನೀನು ನಮ್ಮೊಂದಿಗೆ ಸದಾ ಇರುತ್ತೀಯಾ ಎಂದು ಹೇಳಿದ್ದಾರೆ.

publive-image

ಇದರ ಜೊತೆಗೆ ಟೊರೊನೊಂದಿಗೆ ಕಳೆದ ಹಲವು ವಿಶೇಷ ವಿಡಿಯೋಗಳನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ಟೊರೊ ಸಲ್ಮಾನ್​ ಖಾನ್ ಅವರ ಪನ್​ವೇಲ್​ನಲ್ಲಿರುವ ಫಾರ್ಮ್​ಹೌಸ್​ನಲ್ಲಿ ವಾಸವಿತ್ತು.

ಇದನ್ನೂ ಓದಿ:BREAKING ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಅಟ್ಯಾಕ್

ಸಲ್ಮಾನ್​ ಖಾನ್​ ಸಾಕು ಪ್ರಾಣಿಗಳೊಂದಿಗೆ ವಿಶೇಷ ನಂಟನ್ನು ಹೊಂದಿದ್ದಾರೆ. ಅವುಗಳ ಜೊತೆಗೆ ಕಳೆದ ಸಮಯವನ್ನು ಸೋಷಿಯಲ್ ಮೀಡಿಯಾಗಳಲ್ಲಿಯೂ ಕೂಡ ಹಂಚಿಕೊಳ್ಳುತ್ತಾರೆ. ಅದರಲ್ಲೂ ಟೊರೊ ಜೊತೆಗೆ ಕಳೆದ ಅನೇಕ ಸುಂದರ ಕ್ಷಣಗಳನ್ನು ಕೂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ಹಂಚಿಕೊಂಡಿದ್ದರು. 2019ರಲ್ಲಿ ಟೊರೊ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದ ಸಲ್ಲುಭಾಯ್​. ಇದು ನನ್ನ ಅತ್ಯಂತ ಪ್ರೀತಿಯ, ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸ್ನೇಹಿತ ಎಂದು ಹೇಳಿಕೊಂಡಿದ್ದರು. ಇನ್ನು ಸಲ್ಮಾನ್ ಖಾನ್ ಜಿಮ್​ ಮಾಡುವ ವೇಳೆಯಲ್ಲೆಲ್ಲಾ ಟೊರೊ ಅಲ್ಲಿ ಬಂದ ಅವರೊಂದಿಗೆ ಸಮಯ ಕಳೆಯುತ್ತಿದ್ದ ವಿಡಿಯೋಗಳು ಕೂಡ ಈ ಹಿಂದೆ ವೈರಲ್ ಆಗಿದ್ದವು. ಟೊರೊ ಮತ್ತು ಸಲ್ಮಾನ್ ನಡುವೆ ಅಂತಹದೊಂದು ಬಾಂಧವ್ಯ ಬೆಸೆದುಕೊಂಡಿತ್ತು.

ಇದನ್ನೂ ಓದಿ:ಇದು ಮನೆಯಲ್ಲ ಅರಮನೆ..! ಚಾಕು ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ?

ಸದ್ಯ ಟೊರೊ ಅಗಲಿಕೆಯ ವೇಳೆ ಸಲ್ಮಾನ್​ ಖಾನ್ ತಮ್ಮ ಸಿಕಂದರ್ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಎ. ಆರ್ ಮುರುಗದಾಸ್ ನಿರ್ದೇಶದನ ಈ ಸಿನಿಮಾದಲ್ಲಿ ಸಲ್ಮಾನ್​ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿಸುತ್ತಿದ್ದಾರೆ. ಇದರ ಹಿಂದೆಯೇ ಕಿಕ್ 2 ಸಿನಿಮಾಗೂ ಕೂಡ ಸಲ್ಮಾನ್ ಖಾನ್ ತಯಾರಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment