/newsfirstlive-kannada/media/post_attachments/wp-content/uploads/2025/01/Shwetha.jpg)
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ರಾಕಿ ಸಹೋದರಿ ಶ್ವೇತಾ ರೋಹಿರಾ (Shweta Rohira) ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ. ನಟಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸ್ಪತ್ರೆ ಬೆಡ್ ಮೇಲೆ ಕುಳಿತಿರುವ ಶ್ವೇತಾ ಅವರಿಗೆ ವಿವಿಧ ಕಡೆ ಬ್ಯಾಂಡೇಜ್ ಹಾಕಿರೋದನ್ನು ಕಾಣಬಹುದಾಗಿದೆ. ಶ್ವೇತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು, ಶಾರುಖ್ ಖಾನ್ ಚಿತ್ರದ ಹಾಡಿನ ಕೆಲವು ಲೈನ್ಗಳನ್ನು ಕೂಡ ಬರೆದಿದ್ದಾರೆ.
ಇದನ್ನೂ ಓದಿ: ರಾಮಾಚಾರಿ ಸೀರಿಯಲ್ ನಿರ್ದೇಶಕ ರಾಮ್ ಜೀ ಮೇಲೆ ಲೈಂಗಿಕ ಕಿರುಕುಳದ ಆರೋಪ; FIR ದಾಖಲು
ದುರ್ಘಟನೆಯ ನಂತರ ನಾನು ಎದೆಗುಂದಿಲ್ಲ. ಮತ್ತೆ ಕಂಬ್ಯಾಕ್ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ, ಫಾಲೋವರ್ಸ್ಗೆ ಭರವಸೆ ನೀಡಿದ್ದಾರೆ. ಜೀವನ ತುಂಬಾ ಅಚ್ಚರಿಗಳಿಂದ ತುಂಬಿದೆ. ಅಲ್ಲವೇ? ಒಂದು ಕ್ಷಣ kalhonaho ಎಂದು ಗುನುಗುತ್ತಿರಿ. ನಿಮ್ಮ ದಿನಕ್ಕಾಗಿ ಪ್ಲಾನ್ ಮಾಡುತ್ತೀರಿ. ಇನ್ನೊಂದು ಕ್ಷಣದಲ್ಲಿ ಲೈಫ್ ಹೇಳಲು ನಿರ್ಧರಿಸುತ್ತದೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಶ್ವೇತಾ ರೋಹಿರಾರನ್ನು ಸಲ್ಮಾನ್ ಖಾನ್ ಅವರನ್ನು ರಾಖಿ ಸಹೋದರಿ ಅಂತಾ ಕರೆಯಲಾಗುತ್ತದೆ. ಇವರು ಮೊದಲು ನಟ ಪುಲ್ಕಿತ್ ಸಾಮ್ರಾಟ್ರನ್ನು ಮದುವೆಯಾಗಿದ್ದರು. 2014 ರಲ್ಲಿ ಇವರ ವಿವಾಹ ನಡೆದಿತ್ತು. ಒಂದು ವರ್ಷದಲ್ಲೇ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಪುಲ್ಕಿತ್ ಸಾಮ್ರಾಟ್ ಕಳೆದ ವರ್ಷ ನಟಿ ಕೃತಿ ಖರ್ಬಂದಾರನ್ನು ಮದುವೆ ಆಗಿದ್ದಾರೆ.
ಇದನ್ನೂ ಓದಿ: ಕೇಳ್ರಪ್ಪೋ ಕೇಳಿ..! ಕರ್ನಾಟಕದಲ್ಲಿ ನಾಳೆ ಹಾಲು, ಮೊಸರು ಸಿಗೋದು ಡೌಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ