/newsfirstlive-kannada/media/post_attachments/wp-content/uploads/2024/12/SIKANDAR-MOVIE-TEASER-1.jpg)
ಬಾಲಿವುಡ್​ ಬ್ಯಾಡ್​ಬಾಯ್ ಸಲ್ಮಾನ್ ಖಾನ್ ಇಂದು ಅಂದ್ರೆ ಡಿಸೆಂಬರ್ 27ಕ್ಕೆ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಗಾಗಿ ಸಿಕಂದರ್ ಚಿತ್ರತಂಡ ಇಂದು ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿತ್ತು. ಕೋಟ್ಯಾಂತರ ಅಭಿಮಾನಿಗಳು ಕೂಡ ತುಂಬಾ ನಿರೀಕ್ಷೆಯಿಟ್ಟುಕೊಂಡು ಕುಳಿತಿದ್ದರು. ಆದ್ರೆ ಇಂದು ಬಿಡಗಡೆಯಾಗಬೇಕಿದ್ದ ಸಿಕಂದರ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
/newsfirstlive-kannada/media/post_attachments/wp-content/uploads/2024/12/SIKANDAR-MOVIE-TEASER.jpg)
ಎ.ಆರ್. ಮುರುಗದಾಸ್​ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಾಡಿಯಾವಾಲಾ ಗ್ರ್ಯಾಂಡ್​ಸನ್ ಎಂಟೆಟೈನ್ಮೆಂಟ್ಸ್​​ನ ಅಫಿಷಿಯಲ್ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ. ಡಿಸೆಂಬರ್ 27ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾದ ಟೀಸರ್ ಡಿಸೆಂಬರ್ 28 ಬೆಳಗ್ಗೆ 11.07ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿದೆ.
ಇವತ್ತು ಇಟ್ಟುಕೊಂಡಿದ್ದ ಟೀಸರ್ ಬಿಡುಗಡೆ ಕಾರ್ಯಕ್ರಮ ಮುಂದೂಡಲು ಕಾರಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ ಅವರ ಅಗಲಿಕೆ. ನಿನ್ನೆಯಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಹಲೋಕ ತ್ಯಜಿಸಿದರು. ಸದ್ಯ ಇಡೀ ದೇಶವೇ ಶೋಕಾಚರಣೆಯನ್ನು ಆಚರಿಸುತ್ತಿದೆ. ಈ ಕಾರಣದಿಂದ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಸಿನಿಮಾ ತಂಡ ಹೇಳಿದೆ.
ಇದನ್ನೂ ಓದಿ:ಪುಷ್ಪಾ 2 ಸಿನಿಮಾದ ದಾಖಲೆಯನ್ನು ಮುರಿಯಲಿದೆಯಾ ಈ ಕನ್ನಡ ಸಿನಿಮಾ? ನಿರೀಕ್ಷೆಗಳು ಹೇಗಿವೆ ಗೊತ್ತಾ?
/newsfirstlive-kannada/media/post_attachments/wp-content/uploads/2024/12/SIKANDAR-MOVIE-TEASER-2.jpg)
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಮ್ಮೆಲ್ಲರನ್ನು ಅಗಲಿದ್ದರಿಂದ ಸಿಕಂದರ್ ಸಿನಮಾದ ಟೀಸರ್ ಬಿಡುಗಡೆಯನ್ನು ಮುಂದೂಡಿದ್ದೇವೆ ಎಂದು ತಿಳಿಸಲು ಬೇಜಾರು ಆಗುತ್ತಿದೆ, 28 ಡಿಸೆಂಬರ್ 11.07ಕ್ಕೆ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ನಾಡಿಯಾವಾಲಾ ಗ್ರ್ಯಾಂಡ್​ಸನ್ ತನ್ನ ಎಕ್ಸ್​ ಖಾತೆಯಲ್ಲಿ ಹೇಳಿಕೊಂಡಿದೆ.
ಇದನ್ನೂ ಓದಿ: MAXimumBlockbuster: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ನಾಳೆಯಿಂದ ಮ್ಯಾಕ್ಸ್ ಮ್ಯಾಕ್ಸಿಸಂ ಫಿಕ್ಸ್!
ಸಲ್ಮಾನ್​ಖಾನ್ ನಟನೆಯ ಸಿಕಂದರ್ ಸಿನಿಮಾಗೆ ಸಾಜಿದ್​ ನಾಡಿಯಾವಾಲ ಬಂಡವಾಳ ಹೂಡುತ್ತಿದ್ದಾರೆ. ಈ ಇಂದೆ ಮುಜ್ಸೆ ಶಾದಿ ಕರೋಗಿ ಹಾಗೂ ಕಿಕ್ ಸಿನಿಮಾಗಳಿಗೆ ಇದೇ ನಿರ್ಮಾಣ ಸಂಸ್ಥೆ ಹೂಡಿಕೆ ಮಾಡಿತ್ತು. ಸದ್ಯ ಸಲ್ಲಾನ್ ನಟನೆಯ ಮತ್ತೊಂದು ಸಿನಿಮಾಗೆ ಹೂಡಿಕೆ ಮಾಡುತ್ತಿದೆ. ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣ ಹಾಗೂ ಕಾಜಲ್ ಅಗರವಾಲ್ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದು. 2025ರ ಈದ್​ ದಿನದಂದು ತೆರೆಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us