ಸಲ್ಮಾನ್ ಖಾನ್ ಸಿಕಂದರ್‌ಗೆ ಬಿಗ್ ಶಾಕ್‌.. ಫುಲ್‌ HD ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! VIDEO

author-image
admin
Updated On
ಸಲ್ಮಾನ್ ಖಾನ್ ಸಿಕಂದರ್‌ಗೆ ಬಿಗ್ ಶಾಕ್‌.. ಫುಲ್‌ HD ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! VIDEO
Advertisment
  • ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್!
  • ರಂಜಾನ್ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಸಿಕಂದರ್‌ ಸಿನಿಮಾ
  • 600 ವೆಬ್‌ಸೈಟ್‌ಗಳಲ್ಲಿ ಸಿನಿಮಾ ಪ್ರಸಾರ ಡಿಲೀಟ್ ಮಾಡಲು ಹರಸಾಹಸ

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡುತ್ತಿದೆ. ಜಗತ್ತಿನಾದ್ಯಂತ ಸಲ್ಲೂ ಭಾಯ್ ಸಿನಿಮಾ ನೋಡಲು ಅವರ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಸಿಕಂದರ್‌ ಸಲ್ಲೂ ಫ್ಯಾನ್ಸ್‌ಗೆ ಹಬ್ಬದ ಗಿಫ್ಟ್ ಆಗಿದೆ.

ಸಿಕಂದರ್ ಹವಾ ಶುರುವಾಗಿರುವ ಈ ಹೊತ್ತಿನಲ್ಲೇ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸಿಕಂದರ್ ಬಿಡುಗಡೆಗೂ ಮೊದಲೇ ಫುಲ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಹಲವು ಪೈರೇಟೆಡ್ ವೆಬ್‌ಸೈಟ್‌ಗಳು ಸಿಕಿಂದರ್ ಸಿನಿಮಾವನ್ನು ಪ್ರಸಾರ ಮಾಡಿರೋದು ಬೆಳಕಿಗೆ ಬಂದಿದೆ.

ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಆಗಿದೆ. ಈ ಬಿಗ್ ಬಜೆಟ್ ಸಿನಿಮಾ ಬಿಡುಗಡೆಗೂ ಮುನ್ನ ಪೈರೆಸಿ ಭೂತ ಅಟ್ಯಾಕ್ ಮಾಡಿದೆ. ಅಂದ್ರೆ ಮಾರ್ಚ್‌ 30ರಂದು ಸಿಕಂದರ್ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದು ಕಂಡು ಬಂದಿದೆ.

publive-image

600 ವೆಬ್‌ಸೈಟ್‌ಗಳಲ್ಲಿ ಲೀಕ್‌! 
ತಮಿಳು ರಾಕರ್ಸ್, ಮೂವೀರುಲ್ಜ್, ಫಿಲ್ಮಿಜಿಲ್ಲಾ ಸೇರಿದಂತೆ ವಿವಿಧ ಟೆಲಿಗ್ರಾಮ್‌ ಗುಂಪುಗಳು ಸಿಕಂದರ್ ಪೂರ್ತಿ ಸಿನಿಮಾವನ್ನು ಪ್ರಸಾರ ಮಾಡಿವೆ. ಸ್ಟ್ರೀಮಿಂಗ್ ಹಾಗೂ ಡೌನ್‌ಲೋಡ್‌ ಲಿಂಕ್‌ಗಳನ್ನು ಅಕ್ರಮವಾಗಿ ಹಂಚಿಕೊಂಡಿದ್ದಾರೆ.


">March 30, 2025

ಅನಧಿಕೃತ ಸ್ಟ್ರೀಮಿಂಗ್ ಹಾಗೂ ಪೈರೆಸಿ ತಡೆಯಲು ಅನೇಕ ಕಾನೂನು ಜಾರಿಯಲ್ಲಿದ್ದರೂ ಬಾಲಿವುಡ್‌ಗೆ ಈ ಪೈರೆಸಿ ದೊಡ್ಡ ಸಮಸ್ಯೆಯಾಗಿದೆ. ಇದೀಗ ಸಿಕಂದರ್ ಕೂಡ ಪೈರಸಿಯ ಪೆಡಂಭೂತದ ಬಾಯಿಗೆ ಬಿದ್ದಿದೆ. ಆನ್‌ಲೈನ್‌ನಲ್ಲಿ ಸುಮಾರು 600ಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಸಿಕಂದರ್ ಸಿನಿಮಾವನ್ನು ಲೀಕ್ ಮಾಡಲಾಗಿದೆ. ಸಿಕಂದರ್ ನಿರ್ಮಾಪಕರು ಈ 600 ವೆಬ್‌ಸೈಟ್‌ಗಳಲ್ಲಿ ಸಿನಿಮಾ ಪ್ರಸಾರವನ್ನು ಡಿಲೀಟ್ ಮಾಡಿಸೋ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ರಜತ್‌ಗೆ ಮತ್ತೊಂದು ಬಿಗ್ ಶಾಕ್‌.. ರೌಡಿಶೀಟರ್ ಓಪನ್ ಮಾಡಲು ಪೊಲೀಸರ ತಯಾರಿ; ಕಾರಣವೇನು?  

ಈ ಪೈರಸಿ ಕಾಟ ಏನೇ ಇದ್ದರೂ ಸಲ್ಮಾನ್ ಖಾನ್ ಅಭಿಮಾನಿಗಳು ಸಿಕಂದರ್ ಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಥಿಯೇಟರ್‌ಗೆ ಧಾವಿಸುತ್ತಿರುವ ಫ್ಯಾನ್ಸ್‌ ಬೆಳ್ಳಿತೆರೆ ಮೇಲೆ ಸಿಕಿಂದರ್‌ನ ಅಬ್ಬರ ಹಾಗೂ ಎ.ಆರ್‌. ಮುರುಗದಾಸ್‌ನ ಆ್ಯಕ್ಷನ್ ಥ್ರಿಲ್ಲರ್‌ ಅನ್ನು ಎಂಜಾಯ್ ಮಾಡುತ್ತಿದ್ದಾರೆ.

ಸಿಕಿಂದರ್ ಸಿನಿಮಾದಲ್ಲಿ ಸಲ್ಮಾನ್‌ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಾಜಲ್ ಅಗರ್ವಾಲ್ ಮತ್ತು ಶರ್ಮನ್ ಜೋಶಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment