/newsfirstlive-kannada/media/post_attachments/wp-content/uploads/2024/11/Salt-Effect-1.jpg)
ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಗಾದೆಯಿದೆ. ಅದರ ಜೊತೆಗೆ ಅಳತೆ ಮೀರಿದರೆ ಎಲ್ಲವೂ ಕೂಡ ಆಪತ್ತು ತಂದೊಡ್ಡುತ್ತವೆ ಎಂಬ ಮಾತು ಕೂಡ ಇದೆ. ಉಪ್ಪು ನಮ್ಮ ಎಲ್ಲ ಆಹಾರಗಳಿಗೂ ಅಗತ್ಯವಾಗಿ ಬೇಕಾಗಿರುವಂತ ಪದಾರ್ಥ. ಹೋಳಿಗೆಯಂತಹ ಸಿಹಿ ಪದಾರ್ಥ ಮಾಡಬೇಕೆಂದರೂ ಕೂಡ ಹೋಳಿಗೆ ಹಿಟ್ಟಿಗೆ ಚಿಟಿಕೆ ಉಪ್ಪನ್ನು ಹಾಕಿಯೇ ಸಿದ್ಧಗೊಳಿಸುತ್ತೇವೆ. ಸದ್ಯದ ಬದಲಾದ ಕಾಲಮಾನದಲ್ಲಿ ಉಪ್ಪಿನಿಂದ ಕೇವಲ ಆಯೋಡಿನ್, ಕ್ಯಾಲ್ಸಿಯಂ ಮಾತ್ರವಲ್ಲ ಬಿಪಿಯಂತಹ ಕಾಯಿಲೆಗಳು ಕೂಡ ಮುಕ್ತವಾಗಿ ಬರುತ್ತವೆ. ಆದ್ರೆ ಇತ್ತೀಚೆಗೆ ಯುಕೆ ಬಯೋಬ್ಯಾಂಕ್ ಪಾರ್ಟಿಸಿಪಂಟ್​ ನಡೆಸಿರುವ ಒಂದು ಅಧ್ಯಯನವಂತೂ ಇನ್ನೂ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕಿದೆ.
/newsfirstlive-kannada/media/post_attachments/wp-content/uploads/2024/11/Salt-Effect.jpg)
ನಿಜ, ಯುಕೆನಲ್ಲಿ ನಡೆದ ಒಂದು ಅಧ್ಯಯನ ಶಾಕಿಂಗ್ ಸುದ್ದಿಯನ್ನೊಂದು ಬಹಿರಂಗಪಡಿಸಿದೆ. ಈ ಅಧ್ಯನ ಜರ್ನಲ್ ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂಬ ಶಿರ್ಷಿಕೆಯಲ್ಲಿ ಪ್ರಕಟವಾಗಿದೆ. ಇದರಿಂದ ಉಪ್ಪಿನಿಂದ ನಮ್ಮ ಆರೋಗ್ಯದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಈ ಒಂದು ಅಧ್ಯಯನದಲ್ಲಿ 4,71,144 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರು ತಮ್ಮ ಆಹಾರದಲ್ಲಿ ಬಳಸುವ ಹೆಚ್ಚಿನ ಪ್ರಮಾಣದ ಉಪ್ಪು ಅವರಲ್ಲಿ ಸ್ಟಮಕ್ ಕ್ಯಾನ್ಸರ್ ಉತ್ಪತ್ತಿ ಮಾಡುತ್ತಿರುವುದು ಈ ಅಧ್ಯಯನದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ:ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!
ಇದು ಮಾತ್ರವಲ್ಲ ಏಷಿಯನ್ ಸ್ಟಡಿಸ್ ಎಂಬ ಅಧ್ಯಯನವೂ ಕೂಡ ಹೆಚ್ಚು ಉಪ್ಪು ಸೇವನೆಯಿಂದಾಗಿ ಗ್ಯಾಸ್ಟ್ರಿಕ್ ಕ್ಯಾನ್ಸರ್​ನಂತಹ ಸಮಸ್ಯೆಗಳು ಕೂಡ ಕಂಡು ಬರುತ್ತವ ಎನ್ನುವುದರ ಬಗ್ಗೆ ಬೆಳಕು ಚೆಲ್ಲಿವೆ. ಕಳೆದ 10 ವರ್ಷ 9 ತಿಂಗಳಲ್ಲಿ ಇಂತಹ 640 ಪ್ರಕರಣಗಳು ಕಂಡು ಬಂದಿರುವ ಬಗ್ಗೆ ಏಷಿಯನ್ ಸ್ಟಡಿ ತನ್ನ ಅಧ್ಯಯನದಲ್ಲಿ ಉಲ್ಲೇಖಿಸಿದೆ.
ಆಹಾರದಲ್ಲಿ ಹೆಚ್ಚು ಉಪ್ಪು ಹಾಕುವುದರಿಂದ ಅಥವಾ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ನಾವು ಸೇವಿಸಿದರೆ, ಇದು ನಮ್ಮ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಂದೆ ನಮಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ತರುವುದರ ಜೊತೆಗೆ ಸ್ಟ್ರೋಕ್, ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇನ್ನು ಒಂದು ವಿಷಯ ಅಂದ್ರೆ ಈಗಾಗಲೇ ಪ್ಯಾಕ್ಡ್ ಫುಡ್​ಗಳನ್ನು ಜನರು ಹೆಚ್ಚು ಬಳಸುತ್ತಿದ್ದಾರೆ.ಅವುಗಳಲ್ಲಿ ಮೊದಲೇ ಹೆಚ್ಚಿನ ಪ್ರಮಾಣದ ಸೋಡಿಯಂ ಇರುತ್ತದೆ. ಇದರ ಜೊತೆಗೆ ಮತ್ತೆ ನಾವು ಅದಕ್ಕೆ ಉಪ್ಪು ಸೇರಿಸಿ ತಿಂದಲ್ಲಿ ದೊಡ್ಡ ಅಪಾಯವಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಕಿತ್ತಳೆ ಹಣ್ಣಿನಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು.. ಚಳಿಗಾಲದಲ್ಲಿ ಮೂಸಂಬಿ ಒಳ್ಳೆಯದಾ?
ಹಾಗಂತ ನಾವು ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದರಿಂದ ಪ್ರಯೋಜನಗಳಾಗುವುದು ತುಂಬಾ ಕಡಿಮೆ. ನಾವು ನಿಧಾನವಾಗಿ ನಮ್ಮ ದೇಹಕ್ಕೆ ಉಪ್ಪು ಹೆಚ್ಚಿನ ಪ್ರಮಾಣದಲ್ಲಿ ಹೋಗುವುದನ್ನು ತಡೆಯಬೇಕು. ಸಾಲ್ಟಿ ಫುಡ್​ಗಳಿಂದ ಆದಷ್ಟು ದೂರ ಇರಬೇಕು. ಊಟ ಮಾಡುವಾಗ ಉಪ್ಪನ್ನು ಮತ್ತಷ್ಟು ಸೇರಿಸಿಕೊಳ್ಳುವ ರೂಢಿಯನ್ನು ಬಿಡಬೇಕು. ಲೆಮನ್ ಜ್ಯೂಸ್​ ಕುಡಿಯುವುದು. ವೆನೆಗಾರ್ ಬಳಸಿರುವ ಆಹಾರವನ್ನು ಹೆಚ್ಚು ಸೇವಿಸುವುದು ಕೂಡ ಆರೋಗ್ಯಕ್ಕೆ ಆಪತ್ತು ತಂದಿಡುವ ಸಾಧ್ಯತೆ ಇರುತ್ತದೆ.
ಹೀಗಾಗಿ ಉಪ್ಪು ಅಳತೆ ಮೀರಿದರೆ ಆಪತ್ತು ಎಂಬ ಅರಿವು ನಿಮ್ಮಲ್ಲಿ ಇರಲಿ. ಊಟದಲ್ಲಿ ಉಪ್ಪಿರಲಿ ಅದು ಆಪತ್ತು ತರದಷ್ಟು ಇರಲಿ. ಇಲ್ಲವಾದರೆ ಅಪಾಯಗಳಂತೂ ಕಟ್ಟಿಟ್ಟ ಬುತ್ತಿ ನೆನಪಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us