newsfirstkannada.com

ಸ್ಯಾಮ್​ ಕರ್ರಾನ್​​ ಅರ್ಧ ಶತಕದಾಟ.. 4 ವಿಕೆಟ್​ಗಳ ಮೊದಲ ಜಯ ಪಡೆದ ಪಂಜಾಬ್​ ಕಿಂಗ್ಸ್​

Share :

Published March 23, 2024 at 8:06pm

Update March 23, 2024 at 8:15pm

    ಡೆಲ್ಲಿ ನೀಡಿದ ಟಾರ್ಗೆಟ್​ ಉಡೀಸ್​ ಮಾಡಿದ ಪಂಜಾಬ್​ ಕಿಂಗ್ಸ್​

    ಸ್ಯಾಮ್​ ಕರ್ರಾನ್​ ಅದ್ಭುತ ಆಟಕ್ಕೆ ಬೆಚ್ಚಿ ಬಿದ್ದ ಪಂಜಾಬ್​ ಫ್ಯಾನ್ಸ್​

    ರಿಷಬ್​ ಪಂತ್​ ನಾಯಕತ್ವದ ಡೆಲ್ಲಿ ತಂಡಕ್ಕೆ ಮೊದಲ ಸೋಲು

ಡೆಲ್ಲಿ ನೀಡಿದ 174 ರನ್​ಗಳ ಟಾರ್ಗೆಟ್​ ಬೆನ್ನು ಹತ್ತಿದ ಪಂಬಾಜ್​​ ಕಿಂಗ್ಸ್​ 4 ವಿಕೆಟ್​ಗಳ ಜಯ ಸಾಧಿಸಿದೆ. ಸ್ಯಾಮ್​ ಕರ್ರಾನ್​ ಅದ್ಭುತ ಆಟ ತಂಡದ ಮೊದಲ ಜಯಕ್ಕೆ ನೆರವಾಗಿದೆ. 6 ಬೌಂಡರಿ ಒಂದು ಸಿಕ್ಸ್​ ಬಾರಿಸಿ ಇಂದು ಪಂಜಾಬ್​ ಹಿರೋ ಎಂದೆನಿಸಿಕೊಂಡಿದ್ದಾರೆ.

ಡೆಲ್ಲಿ ತಂಡ ನೀಡಿದ ಟಾರ್ಗೆಟ್​ ಎದುರಿಟ್ಟುಕೊಂಡು ವಿಜಯ ಪತಾಕೆ ಹಾರಿಸಲು ಬ್ಯಾಟಿಂಗ್​ ಇಳಿದ ಶಿಖರ್​ ಧವನ್​ 16 ಎಸೆತಕ್ಕೆ 4 ಬೌಂಡರಿ ಬಾರಿ 22 ರನ್​ ಬಾರಿಸಿದರು. ಆದರೆ ಇಶಾಂತ್​ ಶರ್ಮಾ ಮಾತ್ರ ತನ್ನ ವೇಗದ ಎಸೆತಕ್ಕೆ ಧವನ್​ರನ್ನು ಪೆವಿಲಿಯನತ್ತ ಕಳುಹಿಸಿದರು. ಇವರ ಜೊತೆಯಾಟಗಾರ ಜಾನಿ ಕೂಡ 3 ಎಸೆತಕ್ಕೆ 2 ಬೌಂಡರಿ ಬಾರಿಸುವ ಮೂಲಕ 9 ರನ್​ ಬಾರಿಸಿ ರನ್​ ಔಟ್​ ಆದರು.

ಬಳಿಕ ಬಂದ ಪ್ರಬ್​ಸಿಮ್ರಾನ್​ ಸಿಂಗ್​ 5 ಬೌಂಡರಿ ಬಾರಿಸಿ 26 ರನ್​ ಗಳಿಸಿದರು. ಆದರೆ ಕುಲದೀಪ್​ ಎಸೆತಕ್ಕೆ ಬೌಂಡರಿ ಲೈನ್​ನಲ್ಲಿ ವಾರ್ನರ್​ಗೆ ಕ್ಯಾಚ್​ ನೀಡಿ ಔಟ್​ ಆದರು. ನಂತರ ಬ್ಯಾಟ್​​ಮನ್​ ಸ್ಯಾಮ್​ ಕರ್ರಾನ್​ ಮಾತ್ರ ತಂಡಕ್ಕೆ ಬಲವಾದ ನಂಬಿಕೆ ತಂದುಕೊಟ್ಟರು.

ಎದುರಾಳಿಗಳ ಎಸೆತಕ್ಕೆ ಹೆದರದೆ ಅಬ್ಬರಿಸಿದ ಸ್ಯಾಮ್​​ 47 ಎಸೆತಕ್ಕೆ 63 ರನ್​ ಬಾರಿಸಿದ್ದಾರೆ. ಅದರಲ್ಲಿ 6 ಫೋರ್​ ಜೊತೆಗೆ ಒಂದು ಸಿಕ್ಸ್​ ಭಾರಿಸಿದರು. ಬಳಿಕ ಖಲಿ ಅಹ್ಮದ್​ ಎಸೆತಕ್ಕೆ ವಿಕೆಟ್​ ಒಪ್ಪಿಸಿದರು.

ಇನ್ನು ಜಿತೇಶ್​ ಶರ್ಮಾ 9 ಎಸೆತಕ್ಕೆ 9 ರನ್​, ಶಶಾಂಕ್​ ಸಿಂಗ್​ ಸೊನ್ನೆ ಸುತ್ತಿದರು. ಆದರೆ ಲಿಯಾಮ್ ಲಿವಿಂಗ್ಸ್ಟೋನ್ 21 ಎಸೆತಕ್ಕೆ 2 ಬೌಂಡರಿ ಮತ್ತು 3 ಸಿಕ್ಸ್​ ಬಾರಿಸಿ 38 ರನ್​ ಬಾರಿಸಿ ತಂಡಕ್ಕೆ ಜಯತರಲು ತೆರವಾದರು. ಇವರಿಗೆ ಹರ್ಪ್ರೀತ್​ ನೆರವಾದರು.

ಇನ್ನು ಖಲಿ ಅಹ್ಮದ್​ ಮತ್ತು ಕುಲದೀಪ್​ ತಲಾ ಎರಡೆರಡು ವಿಕೆಟ್​ ಪಡೆದರೆ, ಇಶಾಂತ್​ ಶರ್ಮಾ 1 ವಿಕೆಟ್​ ಪಡೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಮ್​ ಕರ್ರಾನ್​​ ಅರ್ಧ ಶತಕದಾಟ.. 4 ವಿಕೆಟ್​ಗಳ ಮೊದಲ ಜಯ ಪಡೆದ ಪಂಜಾಬ್​ ಕಿಂಗ್ಸ್​

https://newsfirstlive.com/wp-content/uploads/2024/03/Sam-curran.webp

Load More