/newsfirstlive-kannada/media/post_attachments/wp-content/uploads/2024/12/VIRAT_SAM.jpg)
ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದುಕೊಂಡ ಆಸಿಸ್​ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಓಪನರ್ ಆಗಿ ಡೆಬ್ಯೂ ಮಾಡಿರುವ ಯಂಗ್ ಬ್ಯಾಟ್ಸ್​ಮನ್ 19 ವರ್ಷದ ಸ್ಯಾಮ್ ಕಾನ್​​ಸ್ಟಸ್ ಟೆಸ್ಟ್​ನಲ್ಲಿ ವೇಗದ ಅರ್ಧ ಶತಕ ಸಿಡಿಸಿ ಔಟ್​ ಆದರ. ಸ್ಯಾಮ್ ಕಾನ್​​ಸ್ಟಸ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್​ ಕೊಹ್ಲಿ ಹಾಗೂ ನನ್ನ ನಡುವೆ ನಡೆದಿರುವುದು ಭಾವನೆಗಳಷ್ಟೇ. ಕೈಗೆ ಗ್ಲೌಸ್ ಸರಿ ಮಾಡಿಕೊಳ್ಳುವಾಗ ನಡೆದಿದೆ. ಈ ರೀತಿ ಕ್ರಿಕಟ್​​ನಲ್ಲಿ ನಡೆಯುವುದು ಸರ್ವೇ ಸಾಮಾನ್ಯ. ಅರ್ಧ ಶತಕ ಸಿಡಿಸಿದ್ದಕ್ಕೆ ನನಗೆ ಸಂತೋಷ ವಿದೆ. ಬ್ಯಾಟ್ ಎತ್ತಿ ಸಂಭ್ರಮಿಸುವಾಗ ಅಭಿಮಾನಿಗಳು ಚೀಯರ್ ಮಾಡಿರುವುದು ನನಗೆ ರೋಮಾಂಚನವಾಯಿತು. ಎಲ್ಲರೂ ನನಗೆ ಸಪೋರ್ಟ್​ ಮಾಡಿದ್ದಾರೆ. ಇನ್​ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಳವಾಗಿರುವುದು ಸಂತಸವಾಗಿದೆ.
ಮೊದಲ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದ ಸ್ಯಾಮ್ 6 ಬೌಂಡರಿ, 2 ಸಿಕ್ಸರ್ ಸಮೇತ 52 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. ಸ್ಯಾಮ್​​ಗೆ ವಿರಾಟ್ ಕೊಹ್ಲಿಯೇ ನೆಚ್ಚಿನ ಆಟಗಾರ ಆಗಿದ್ದಾರೆ. ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಮಧ್ಯೆ ಕೊಂಚ ಘರ್ಷಣೆ ನಡೆಯಿತು. ಸದ್ಯ ಇದು ಎಲ್ಲೆಡೆ ಚರ್ಚೆ ಆಗುತ್ತಿದೆ. ಸ್ಯಾಮ್ ಕೈಗ್ಲೌಸ್​ ಸರಿಮಾಡುತ್ತ ಹೋಗುವಾಗ ವಿರಾಟ್​ ಕೊಹ್ಲಿಯ ಭುಜ ಟಚ್ ಆಗಿದೆ. ಈ ವೇಳೆ ಇದನ್ನು ಪ್ರಶ್ನಿಸಿದಕ್ಕೆ ಇಬ್ಬರ ನಡುವೆ ಘರ್ಷಣೆ ನಡೆದಿದೆ.
ಸದ್ಯ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡು ಬ್ಯಾಟಿಂಗ್ ಮುಂದುವರೆಸಿದೆ. ನಾಲ್ವರು ಬ್ಯಾಟ್ಸ್​ಮನ್​ಗಳ ಅರ್ಧಶತಕಗಳ ನೆರವಿನಿಂದ 311 ರನ್​ಗಳನ್ನು ಮೊದಲ ದಿನದಲ್ಲೇ ಕಲೆ ಹಾಕಿದೆ. ಭಾರತದ ಪರ ಜಸ್​ಪ್ರಿತ ಬೂಮ್ರಾ 3 ವಿಕೆಟ್ ಕಬಳಿಸಿ ನೆರವಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ