Advertisment

ಮೈದಾನದಲ್ಲಿ ರೂಲ್ಸ್​ ಬ್ರೇಕ್.. ಕೊಹ್ಲಿ ವರ್ತನೆಗೆ ಭಾರೀ ಆಕ್ರೋಶ

author-image
Ganesh
Updated On
ಮೈದಾನದಲ್ಲಿ ರೂಲ್ಸ್​ ಬ್ರೇಕ್.. ಕೊಹ್ಲಿ ವರ್ತನೆಗೆ ಭಾರೀ ಆಕ್ರೋಶ
Advertisment
  • ಚೊಚ್ಚಲ ಪಂದ್ಯದಲ್ಲೇ ಕಿರಿಕ್ ಮಾಡಿಕೊಂಡ ಸ್ಯಾಮ್
  • ಬೇಕು ಅಂತಲೇ ಡಿಕ್ಕಿ ಹೊಡೆದ್ರಾ ವಿರಾಟ್ ಕೊಹ್ಲಿ?
  • ಬುಮ್ರಾ, ಸಿರಾಜ್​ಗೆ ಮನಬಂದಂತೆ ಚಚ್ಚಿದ ಸ್ಯಾಮ್

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡುತ್ತಿದೆ. ಆಸ್ಟ್ರೇಲಿಯಾ ಪರ ಡೆಬ್ಯು ಮಾಡಿದ 19 ವರ್ಷದ ಯುವ ಬ್ಯಾಟ್ಸರ್​ ಸ್ಯಾಮ್ ಕಾನ್​​ಸ್ಟಸ್ ಅದ್ಭುತ ಬ್ಯಾಟಿಂಗ್ ನಡೆಸಿದರು. ಸಿರಾಜ್ ಹಾಗೂ ಬುಮ್ರಾ ಬೌಲಿಂಗ್​​ಗೆ ಬೌಂಡರಿ, ಸಿಕ್ಸರ್​ಗಳನ್ನ ಚಚ್ಚಿ ಭಾರತಕ್ಕೆ ಆಘಾತ ನೀಡಿದರು.

Advertisment

ಇದನ್ನೂ ಓದಿ:Bigg Boss: ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ ಪೈ..!

52 ಬಾಲ್​ನಲ್ಲಿ ಅರ್ಧಶತಕ ಬಾರಿಸಿದ ಸ್ಯಾಮ್​​, 2 ಸಿಕ್ಸರ್, 6 ಬೌಂಡರಿಯೊಂದಿಗೆ 65 ಬಾಲ್​ನಲ್ಲಿ 60 ರನ್​ಗಳಿಸಿದರು. ಅದ್ಭುತ ಬ್ಯಾಟಿಂಗ್ ಮಾಡ್ತಿದ್ದ ಸ್ಯಾಮ್​ ಹಾಗೂ ಕೊಹ್ಲಿ ನಡುವೆ ಕ್ಲ್ಯಾಶ್ ಆಗಿದೆ. ಬುಮ್ರಾ ಬೌಲಿಂಗ್ ವೇಳೆ, ಇಬ್ಬರು ಮುಖಾಮುಖಿಯಾದರು.

ವಿರಾಟ್​ ಕೊಹ್ಲಿ ಕೀಪರ್​ ಪಂತ್ ಕಡೆ ಬರ್ತಿದ್ದಾಗ ಸ್ಯಾಮ್​​ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಿಸಿಕೊಂಡ ಸ್ಯಾಮ್ ವಿರಾಟ್ ಕೊಹ್ಲಿಯನ್ನೇ ದಿಟ್ಟಿಸಿ ನೋಡಿದ್ದಾರೆ. ಆಗ ಕೊಹ್ಲಿ ಕೂಡ ಸ್ಯಾಮ್​​ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೊನೆಗೆ ಆಸಿಸ್​ ಬ್ಯಾಟರ್ ಖವಾಜ್ ಸ್ಯಾಮ್​​ ಅವರನ್ನು ಸಮಾಧಾನ ಮಾಡಿದ್ದಾರೆ. ಕೊಹ್ಲಿ ಹಾಗೂ ಸ್ಯಾಮ್ ನಡುವಿನ ಕಿರಿಕ್ ಇದೀಗ ಭಾರೀ ಚರ್ಚೆ ಆಗ್ತಿದೆ.

Advertisment

ಇದನ್ನೂ ಓದಿ:Bigg Boss: ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ ಪೈ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment