newsfirstkannada.com

‘ಸತ್ತ ಮೇಲೆ ಅರ್ಧ ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ’- ಏನಿದು ಸ್ಯಾಮ್ ಪಿತ್ರೋಡಾ ಮತ್ತು ಕಾಂಗ್ರೆಸ್​​ ವಿವಾದ?

Share :

Published April 25, 2024 at 6:20am

Update April 25, 2024 at 9:44am

    ಲೋಕಸಭಾ ಸಮರದಲ್ಲಿ ಬಿಜೆಪಿಗೆ ಆಹಾರವಾಯ್ತಾ ಕಾಂಗ್ರೆಸ್?

    ಬಿಜೆಪಿ​ ಪಾಲಿಗೆ ‘ಪತ್ರೊಡೆ’ಯಾದ ಸ್ಯಾಮ್ ಪಿತ್ರೋಡ ಸ್ಟೇಟ್ಮೆಂಟ್​​

    ಇಡೀ ದೇಶಾದ್ಯಂತ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿ ಕುರಿತು ಚರ್ಚೆ!

ಬೆಂಗಳೂರು: ದೇಶದಾದ್ಯಂತ ಲೋಕಸಭಾ ಚುನಾವಣೆ ಕಾವೇರಿದ ಸಮಯದಲ್ಲೇ ಕಾಂಗ್ರೆಸ್ ನಾಯಕ ಸ್ಯಾಮ್‌ ಪಿತ್ರೋಡಾ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಆಸ್ತಿ, ಸಂಪತ್ತು ಸಂಗ್ರಹಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅಮೆರಿಕಾದಲ್ಲಿ ಇರುವಂತಹ ಪಿತ್ರಾರ್ಜಿತ ತೆರಿಗೆ ಪದ್ದತಿ ಭಾರತದಲ್ಲಿಲ್ಲ. ಅದರ ಬಗ್ಗೆಯೂ ಚರ್ಚೆಯಾಗಬೇಕು ಎಂದಿದ್ದಾರೆ. ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಿದೆ.

ಪಿತ್ರೋಡ್​​ ಕೊಟ್ಟ ಸಲಹೆ ಏನು?

ಅಮೆರಿಕಾದ ಈ ತೆರಿಗೆ ಪದ್ಧತಿ ಬಗ್ಗೆ ಪಿತ್ರೋಡಾ ಪ್ರಸ್ತಾಪಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ಮಕ್ಕಳಿಗೆ ಹಂಚಿಕೆ ವೇಳೆ ಶೇ.55ರಷ್ಟು ತೆರಿಗೆ ವಿಧಿಸುವ ನೀತಿ ಜಾರಿ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಅಮೆರಿಕಾದ ತೆರಿಗೆ ಪದ್ಧತಿಯನ್ನ ಭಾರತದಲ್ಲೂ ಜಾರಿ ಬಗ್ಗೆ ಚರ್ಚೆ ಆಗಲಿ ಎಂದು ಹೇಳಿದ್ದಾರೆ. ಪಿತ್ರಾರ್ಜಿತ ತೆರಿಗೆ ಪದ್ದತಿಯಡಿ ವ್ಯಕ್ತಿ ನಿಧನ ನಂತರ ಶೇ.45 ರಷ್ಟು ಆಸ್ತಿ ಮಾತ್ರ ಮಕ್ಕಳಿಗೆ ಹೋಗುತ್ತೆ, ಉಳಿದಿದ್ದು ಎಲ್ಲಾ ಸರ್ಕಾರದ ಪಾಲಾಗುತ್ತದೆ.

ಸಂಪತ್ತಿನ ಸಮರ ಸಾರಿರುವ ಮೋದಿಗೆ ಪಿತ್ರೋಡ್​​​ ಮಾತೇ ಸಿಕ್ಕಿದ್ದೆ ಶಿರುಂಡೆ ಆಗಿಸಿದೆ. ಛತ್ತೀಸ್‌ಗಢದಲ್ಲಿ ನಿಂತು ಗುಡುಗಿದ ಮೋದಿ, ಸಾವಿನ ಬಳಿಕವೂ ನಿಮ್ಮನ್ನು ದೋಚಲು ಕಾಂಗ್ರೆಸ್​ ಸಂಚು ಹೂಡಿದೆ ಅಂತ ವಾಗ್ದಾಳಿ ನಡೆಸಿದ್ದಾರೆ. ವಿವಾದ ಸೃಷ್ಟಿಯಾಗುತ್ತಲೇ ಸ್ಯಾಮ್‌ ಪಿತ್ರೋಡಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ರೀತಿ ಭಾರತದಲ್ಲಿ ಮಾಡಲಾಗುತ್ತೆ ಎಂದು ಹೇಳಿದ್ದು ಯಾರು? ಬಿಜೆಪಿ ಭಯಗೊಂಡಿರುವುದು ಏಕೆ? ಸಾಮಾನ್ಯ ಚರ್ಚೆಯ ವೇಳೆ ಅಮೆರಿಕಾದ ಪಿತ್ರಾರ್ಜಿತ ತೆರಿಗೆ ಬಗ್ಗೆ ಉಲ್ಲೇಖಿಸಿದ್ದೇನೆ ಎಂದು ಸಮರ್ಥಿಸಿದ್ದಾರೆ.

ಇದನ್ನೂ ಓದಿ: 6,6,6,6,6,6,6,6,4,4,4,4,4; 88 ರನ್​ ಚಚ್ಚಿದ ಪಂತ್​​; ಗುಜರಾತ್​ಗೆ ಡೆಲ್ಲಿ ಬರೋಬ್ಬರಿ 225 ರನ್​ ಟಾರ್ಗೆಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸತ್ತ ಮೇಲೆ ಅರ್ಧ ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ’- ಏನಿದು ಸ್ಯಾಮ್ ಪಿತ್ರೋಡಾ ಮತ್ತು ಕಾಂಗ್ರೆಸ್​​ ವಿವಾದ?

https://newsfirstlive.com/wp-content/uploads/2024/04/Sam-Pitrod_Rahul-Gandhi.jpg

Load More