/newsfirstlive-kannada/media/post_attachments/wp-content/uploads/2025/01/SAMANTHA.jpg)
ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತು ಪ್ರಭು ಅವರು ನಾಗ ಚೈತನ್ಯ ಇಂದ ಬೇರೆಯಾದ ಮೇಲೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲು ಯತ್ನಿಸುತ್ತಿದ್ದಾರೆ. ಬಾಲಿವುಡ್ನ ವೆಬ್ ಸಿರೀಸ್ ಸಿಟಾಡೆಲ್ನಲ್ಲಿ ಸಮಂತಾ ಅದ್ಭುತವಾಗಿ ಅಭಿನಯಿಸಿದ್ದರು. ಇದಕ್ಕೆ ಒಟಿಟಿಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಇದಾದ ಮೇಲೆ ಬಾಲಿವುಡ್ನಲ್ಲೇ ಸುತ್ತಾಡುತ್ತಿರುವ ಸಮಂತಾ, ಪ್ರೀತಿಯ ಬಲೆಗೆ ಸಿಲುಕಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತವೆ.
ನಾಗ ಚೈತನ್ಯ ಇನ್ನೊಂದು ಮದುವೆಯಾಗಿ ಹ್ಯಾಪಿಯಾಗಿದ್ದಾರೆ. ಸಮಂತಾ ಮಾತ್ರ ಶೂಟಿಂಗ್ ಅದು, ಇದು ಎಂದು ಸುತ್ತಾಡುತ್ತ ಈಗಲೂ ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಆದರೆ ಇತ್ತೀಚಿನ ಕೆಲ ವರದಿಗಳ ಪ್ರಕಾರ ಸಮಂತಾ, ಡೇಟಿಂಗ್ನಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ತಮ್ಮ ಮೊಬೈಲ್ಗೆ ಬಂದ ಅದೊಂದು ಮೆಸೇಜ್ನಿಂದ ಸಮಂತಾ ಫುಲ್ ಖುಷಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಿಚ್ಚನ ಪಂಚಾಯ್ತಿ ಕಟ್ಟೆಯಲ್ಲಿ ತ್ರಿವಿಕ್ರಮ್ ಲವ್ ಪ್ರಪೋಸ್ ಪ್ರಸ್ತಾಪ.. ಭವ್ಯಗೌಡ ಹೇಳಿದ್ದೇನು..?
ಬ್ಯೂಟಿ ಸ್ಯಾಮ್ ಬಾಲಿವುಡ್ಗೆ ಹೋದ ಮೇಲೆ ಅಲ್ಲಿ ಒಬ್ಬ ಸ್ಟಾರ್ ನಿರ್ದೇಶಕನ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಮಂತಾ ಇಂಟರ್ವ್ಯೂವ್ ಕೊಡುತ್ತಿದ್ದರು. ಇಂಟರ್ವ್ಯೂವ್ ಮಧ್ಯೆದಲ್ಲೇ ಅವರಿಗೊಂದು ವಾಟ್ಸ್ ಅಪ್ ಆಡಿಯೋ ಮೆಸೇಜ್ ಬಂದಿದೆ. ತಕ್ಷಣ ಅದನ್ನು ಪ್ಲೇ ಮಾಡಿ ಕೇಳಿದ್ದಾರೆ. ಅಷ್ಟೇ ಆ ಮೆಸೇಜ್ ಕೇಳಿದ ತಕ್ಷಣ ಸಮಂತಾ ಮುಖದ ಭಾವವೇ ಬದಲಾವಣೆ ಆಗಿದೆ. ಫುಲ್ ಖುಷಿಯಲ್ಲಿ ನಾಚಿ ನೀರಾಗಿ ಮುಗುಳು ನಗು ನಕ್ಕು ಬಳಿಕ ಸಂದರ್ಶನ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಇನ್ನು ಆ ಆಡಿಯೋ ಮೆಸೇಜ್ ಮಾಡಿರುವುದು ಬೇರೆ ಯಾರು ಅಲ್ಲ. ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು ಅವರು ಎಂದು ಹೇಳಲಾಗಿದೆ. ರಾಜ್ ನಿರ್ದೇಶನದಲ್ಲೇ ಸಮಂತಾ ಸಿಟಾಡೆಲ್ ಹಾಗೂ ಫ್ಯಾಮಿಲಿ ಮ್ಯಾನ್- 2ರಲ್ಲಿ ನಟಿಸಿದ್ದಾರೆ. ಈ ಎರಡು ಶೂಟಿಂಗ್ ಮಾಡುವಾಗಲೇ ಇಬ್ಬರಿಗೂ ಸ್ನೇಹ ಏರ್ಪಟ್ಟಿದೆ. ಸದ್ಯ ಈಗ ಸಮಂತಾ ಜೊತೆ ರಾಜ್ ನಿಡಿಮೋರು ಅವರು ರಕ್ತ ಬ್ರಹ್ಮಾಂಡಂ ಎನ್ನುವ ವೆಬ್ ಸಿರೀಸ್ ಮಾಡುತ್ತಿದ್ದು ಹಣ ಕೂಡ ರಾಜ್ ಅವರೇ ಹಾಕಿದ್ದಾರೆ. ಈಗಾಗಲೇ ನಿರ್ದೇಶಕನಿಗೆ ಮದುವೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ