ಮತ್ತೆ ಮದ್ವೆ ಆಗ್ತಾರಾ?.. ಫಾರಿನ್​ನಲ್ಲಿ ಸಮಂತಾ ಹೆಗಲ ಮೇಲೆ ಕೈಹಾಕಿ ಹೊರಟ ರಾಜ್ ನಿಡಿಮೊರು..

author-image
Veena Gangani
ಮತ್ತೆ ಮದ್ವೆ ಆಗ್ತಾರಾ?.. ಫಾರಿನ್​ನಲ್ಲಿ ಸಮಂತಾ ಹೆಗಲ ಮೇಲೆ ಕೈಹಾಕಿ ಹೊರಟ ರಾಜ್ ನಿಡಿಮೊರು..
Advertisment
  • ಸಮಂತಾ ನಿರ್ದೇಶಕನೊಂದಿಗೆ ಡೇಟಿಂಗ್ ಮಾಡುತ್ತಿರೋದು ಪಕ್ಕಾ!
  • ಸ್ಯಾಮ್​ ಪೋಸ್ಟ್ ಮಾಡಿರುವ ಫೋಟೋಗಳು ಏನನ್ನು ಹೇಳುತ್ತಿವೆ?
  • ಹೆಗಲ ಮೇಲೆ ಕೈ ಹಾಕಿ ಜೋಡಿಗಳು ನೀಡುತ್ತಿರುವ ಸೂಚನೆ ಏನು?

ತೆಲುಗು ಖ್ಯಾತ ನಟಿ ಸಮಂತಾ ಬಗ್ಗೆ ಒಂದಲ್ಲಾ ಒಂದು ವಿಚಾರ ಸುದ್ದಿಯಲ್ಲಿ ಇರುತ್ತದೆ. ಟಾಲಿವುಡ್​​ನ ಸುಂದರಿ ಸದ್ಯ ಹನಿಬನ್ನಿ ನಿರ್ದೇಶಕ ರಾಜ್ ನಿಡಿಮೊರು ಜೊತೆ ಕಾಲ ಕಳೆಯುತ್ತಿದ್ದಾರೆ. ಅಮೆರಿಕದ ಮಿಚಿಗನ್​ನ ಡೆಟ್ರಾಯ್ಟ್​ನಲ್ಲಿರುವ ತೆಲುಗು ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಂತಾ, ರಾಜ್ ಹಾಗೂ ಇತರರು ತೆರಳಿದ್ದಾರೆ.

ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?

ಈ ವೇಳೆ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಸಮಂತಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಲವು ಕಡೆಗಳಲ್ಲಿ ರಾಜ್ ನಿಧಿಮೋರು ಅವರ ಜೊತೆಗೆ ಇರೋ ಫೋಟೋಗಳನ್ನು ಕಾಣಬಹುದಾಗಿದೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಈ ಇಬ್ಬರ ಸಂಬಂಧ ಖಚಿತವಾಗಿದೆ ಎಂದು ಕಾಮೆಂಟ್ಸ್​ ಹಾಕಿದ್ದಾರೆ.

publive-image

ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಧಿಮೋರು ಮಧ್ಯೆ ಪ್ರೀತಿ ಮೂಡಿದೆ ಎಂಬ ವಿಚಾರ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಟಿ ಎಲ್ಲಿಯೂ ಖಚಿತಪಡಿಸಿರಲಿಲ್ಲ. ಆದರೆ, ಇದೀಗ ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಸಮಂತಾ ಹೆಗಲ ಮೇಲೆ ಕೈ ಹಾಕಿ ರಾಜ್ ಬರುತ್ತಿದ್ದರೆ, ಅವರನ್ನು ಸಮಂತಾ ತಮ್ಮ ಕೈ ಮೂಲಕ ಹಿಡಿದುಕೊಂಡಿದ್ದಾರೆ. ಇದೇ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಸಮಂತಾ ಹಾಗೂ ರಾಜ್ ಮೊದಲ ಬಾರಿಗೆ ಭೇಟಿ ಆಗಿದ್ದು, ‘ದಿ ಫ್ಯಾಮಿಲಿ ಮ್ಯಾನ್ 2’ ಶೂಟ್ ವೇಳೆ. ಆ ಬಳಿಕ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈಗಾಗಲೇ ರಾಜ್ ನಿಧಿಮೋರು ಮತ್ತು ಶ್ಯಾಮಲಿ ದೇ ಮದುವೆಯಾಗಿ ಸುಮಾರು ಐದು ವರ್ಷಗಳಾಗಿವೆ. ಆದರೆ 2021ರಲ್ಲಿ ಈ ಇಬ್ಬರು ಬೇರ್ಪಟ್ಟರು. ಮಾಜಿ ದಂಪತಿಗಳು ಒಂದು ಹೆಣ್ಣು ಮಗುವನ್ನು ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment