ರಾಜ್ ನಿಡಿಮೊರು ಜೊತೆ ಡೇಟಿಂಗ್ ಮಾಡ್ತಾ ಇದ್ದಾರಾ ಸಮಂತಾ? ಈ ಜೋಡಿ ಮೇಲೆ ಈಗ ಎಲ್ಲರ ಕಣ್ಣು!

author-image
Gopal Kulkarni
Updated On
ರಾಜ್ ನಿಡಿಮೊರು ಜೊತೆ ಡೇಟಿಂಗ್ ಮಾಡ್ತಾ ಇದ್ದಾರಾ ಸಮಂತಾ? ಈ ಜೋಡಿ ಮೇಲೆ ಈಗ ಎಲ್ಲರ ಕಣ್ಣು!
Advertisment
  • ಖ್ಯಾತ ನಿರ್ದೇಶಕನೊಂದಿಗೆ ಸಮಂತಾ ರುತ್ ಪ್ರಭು ಡೇಟಿಂಗ್?
  • ಸ್ಯಾಮ್​ ಪೋಸ್ಟ್ ಮಾಡಿರುವ ಫೋಟೋಗಳು ಏನನ್ನು ಹೇಳುತ್ತಿವೆ?
  • ಕೈ ಕೈ ಹಿಡಿದುಕೊಂಡು ಜೋಡಿಗಳು ನೀಡುತ್ತಿರುವ ಸೂಚನೆ ಏನು?

ತೆಲುಗು ಖ್ಯಾತ ನಟಿ ಸಮಂತಾ ಅಂದ್ರೆ ಅವರ ಸುತ್ತ ಸದಾ ಒಂದಿಲ್ಲೊಂದು ರೂಮರ್ಸ್ ಸುತ್ತುತ್ತಲೇ ಇರುತ್ತವೆ. ಈಗ ಮತ್ತೊಂದು ಗಾಳಿ ಸುದ್ದಿ ನಟಿಯ ಸುತ್ತ ಹರಡುತ್ತಿದೆ. ಟಾಲಿವುಡ್​​ನ ಸುಂದರಿ ಸದ್ಯ ಹನಿಬನ್ನಿ ನಿರ್ದೇಶಕ ರಾಜ್ ನಿಡಿಮೊರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.ಇತ್ತೀಚೆಗೆ ಪಿಕಲ್​ಬಾಲ್ ಟೋರ್ನಾಮೆಂಟ್​ನಿಂದಾಗಿ ನಟಿ ಸಮಂತಾ ಹಲವು ಸಿನಿಮಾಗಳ ಆಫರ್​ಗಳನ್ನು ತಿರಸ್ಕರಿಸಿದ್ದಾರೆ. ಸದ್ಯ ಆ ಪಂದ್ಯಾವಳಿಗಳಲ್ಲಿ ನಿರ್ದೇಶಕ ರಾಜ್​ ನಿಡಿಮೊರು ಕೂಡ ಕಾಣಿಸಿಕೊಂಡಿದ್ದಾರೆ. ಅವರೊಂದಿಗಿನ ಅನೇಕ ಫೋಟೋಗಳನ್ನ ಸಮಂತಾ ಹಂಚಿಕೊಂಡಿದ್ದು, ಅದರಲ್ಲೂ ಇಬ್ಬರೂ ಕೈ ಕೈ ಹಿಡಿದಿಕೊಂಡಿರುವ ಫೋಟೋಗಳನ್ನೇ ಹೆಚ್ಚು ಹಂಚಿಕೊಂಡಿದ್ದಾರೆ. ಇದರಿಂದ ಇಬ್ಬರೂ ಸದ್ಯ ಡೇಟಿಂಗ್ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ನಟಿಸಲ್ವಾ.. ಪಡೆದ ಅಡ್ವಾನ್ಸ್​ ಹಣ ವಾಪಸ್ ಕೊಟ್ರಾ?

ಫೆಬ್ರವರಿ 1ರಂದು ಸಮಂತಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪಿಕಲ್​ಬಾಲ್ ಲೀಗ್​​ ಮ್ಯಾಚ್​ನ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನಟಿ ಸಮಂತಾ ಪಿಕಲ್​ಬಾಲ್​ ಟೋರ್ನಾಮೆಂಟ್​ನ ಚೆನ್ನೈ ಸೂಪರ್ ಚಾಂಪ್ಸ್​ನ ಒಡತಿ. ಮೊದಲ ಫೋಟೋ ರಾಜ್ ಜೊತೆ ನಡೆದುಕೊಂಡು ಹೋಗುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ ಮತ್ತೊಂದು ಫೋಟೋದಲ್ಲಿ ಇಬ್ಬರು ಟೀಮ್​ನ್ನು ಚೀಯರ್ ಮಾಡುತ್ತಿರುವುದು ಕಂಡು ಬಂದಿದೆ. ಹೀಗೆ ಟೀಮ್ ಜೊತೆ ಕಳೆದ ಹಲವು ಫೋಟೋಗಳನ್ನು ಹಂಚಿಕೊಂಡಿರುವ ಸಮಂತ ರಾಜ್​ ಜೊತೆ ಕೈ ಹಿಡಿದುಕೊಂಡಿರುವ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರ ಫ್ಯಾನ್ಸ್​ ಸಮಂತಾ ರಾಜ್ ಜೊತೆ ಡೇಟಿಂಗ್ ಮಾಡಲು ಶುರು ಮಾಡಿದ್ದಾರಾ ಅನ್ನೋ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ತುಂಬಾ ದಿನಗಳ ನಂತರ ಕ್ಯಾಮೆರಾ ಕಣ್ಣಿಗೆ ಬಿದ್ದ ಬ್ಯೂಟಿ ಸಮಂತಾ; ಅಬ್ಬಾ.. ಏನಿದರ ಸೀಕ್ರೆಟ್‌?

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.ಅದರಲ್ಲೂ ಬಾಲಿಬ್ಲೈಂಡ್ಸ್​ಎನ್​ಗಾಸಿಪ್ ಪೇಜ್​ ನನಗೆ ಅನಿಸುತ್ತೆ ಸ್ಯಾಮ್​ ಅಧಿಕೃತವಾಗಿ ಏನನ್ನೋ ಹೇಳಲು ಹೊರಟಿದ್ದಾರೆ. ಇದು ಒಳ್ಳೆಯದು ಕೂಡ.. ಇದರಿಂದ ಎಲ್ಲರಿಗೂ ಸಂತೋಷವಾಗಿದೆ ಎಂದು ಹೇಳಿದೆ. ಆದ್ರೆ ಇದರ ಬಗ್ಗೆ ಡೈರೆಕ್ಟರ್ ರಾಜ್​ ನಿಡಿಮೊರ್ ಆಗಲಿ ನಟಿ ಸಮಂತಾ ಆಗಲಿ ಎಲ್ಲಿಯೂ ಕೂಡ ಪ್ರತಿಕ್ರಿಯೆನ್ನು ಇಲ್ಲಿಯವರೆಗೂ ನೀಡಿಲ್ಲ.

ಯಾರು ಈ ರಾಜ್ ನಿಡಿಮೊರು?
ರಾಜ್ ನಿಡಿಮೊರು ಒಬ್ಬ ಖ್ಯಾತ ನಿರ್ದೇಶಕ ದಿ ಫ್ಯಾಮಿಲಿ ಮ್ಯಾನ್, ಫರ್ಜಿ, ಹನಿಬನ್ನಿ, ಗನ್ಸ್​ ಆ್ಯಂಡ್ ಗುಲಾಬ್ಸ್​​ ನಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಫ್ಯಾಮಿಲಿ ಮ್ಯಾನ್ 2 ಹಾಗೂ ಹನಿಬನ್ನಿ ಬಳಿಕ ಈಗ ಸಮಂತಾ ರಾಜ್​ ನಿರ್ದೇಶನದ ರಕ್ತ ಬ್ರಹ್ಮಾಂಡದಲ್ಲಿಯೂ ಪಾತ್ರ ನಿರ್ವಹಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment