/newsfirstlive-kannada/media/post_attachments/wp-content/uploads/2024/08/samatha.jpg)
ತೆಲುಗು ಸೂಪರ್ ಹೀರೋ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸದ್ದಿಲ್ಲದೇ ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಾಗಚೈತನ್ಯ ನಿಶ್ಚಿತಾರ್ಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಕ್ಷರಶಃ ಶಾಕ್ ಆಗಿದ್ದಾರೆ.
ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಸಮಂತಾಗೆ ಕೈಕೊಟ್ಟಿದ್ದು ಇದ್ಕೆ ಎಂದು ಆಕ್ರೋಶ
ಹೌದು, ಇಂದು ಇಂದು ಬೆಳಿಗ್ಗೆ 9.42ಕ್ಕೆ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ್ ಎಂಗೇಜ್ಮೆಂಟ್ ನಡೆದಿದೆ. ಈ ಬಗ್ಗೆ ಖುದ್ದು ನಟ ನಾಗಾರ್ಜುನ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ನಲ್ಲಿರುವ ನಾಗಾರ್ಜುನ್ ಮನೆಯಲ್ಲಿ ಎಂಗೇಜ್ಮೆಂಟ್ ನಡೆದಿದೆ. ಇದೇ ಫೋಟೋಗಳನ್ನು ನೋಡಿದ ಕೆಲವರು ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ಭಾವಿಸುತ್ತೇವೆ, ಒಳ್ಳೆಯ ಜೋಡಿ, ನಿಮಗೆ ಇಷ್ಟ ಆದವರ ಜೊತೆಗೆ ಖುಷಿಯಿಂದ ಇರಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಇನ್ನು, ನಟ ನಾಗಚೈತನ್ಯ ಹಾಗೂ ನಟಿ ಸಮಂತ ದೂರ ಆಗಿದ್ದರು ಕೂಡ ಅಭಿಮಾನಿಗಳಲ್ಲಿ ಭರವಸೆ ಇತ್ತು. 4 ವರ್ಷಗಳ ದಾಂಪತ್ಯ ಜೀವನದ ಬಳಿಕವೂ ಈ ಸ್ಟಾರ್ ಜೋಡಿ ಮತ್ತೆ ಒಂದಾಗುತ್ತಾರೆ ಅಂತ ಅಭಿಮಾನಿಗಳು ನಿರೀಕ್ಷೆಯಲ್ಲಿ ಇದ್ದರು. ಆದರೆ ಡಿವೋರ್ಸ್ ಪಡೆದ ಬಳಿಕ ನಟ ನಾಗಚೈತನ್ಯ ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ಸುತ್ತಾಡುತ್ತಿದ್ದರು. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆಗ ಅಭಿಮಾನಿಗಳ ಕೆಂಗಣ್ಣಿಗೆ ನಟಿ ಶೋಭಿತಾ ಧೂಲಿಪಾಲ್ ಗುರಿಯಾಗಿದ್ದರು.
Happy Married life Both of you. ?
Heart break for samantha Ruth Prabhu. ?#NagaChaitanya#ShobhitaDhulipalapic.twitter.com/cYNF0NVQXP
— Saurabh kumar (@Saurabhk0096)
Happy Married life Both of you. 🫂
Heart break for samantha Ruth Prabhu. 💔#NagaChaitanya#ShobhitaDhulipalapic.twitter.com/cYNF0NVQXP— Saurabh kumar (@Saurabhk0096) August 8, 2024
">August 8, 2024
ಆದರೆ ಇದೀಗ ದಿಢೀರ್ ಅಂತ ನಟಿ ಸಮಂತಾ ಮಾಜಿ ಪತಿಯ ಜೊತೆಗೆ ಶೋಭಿತಾ ಧೂಲಿಪಾಲ್ ಎಂಗೇಜ್ಮೆಂಟ್ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಸಿಟ್ಟು ತರಿಸಿದೆ. ಇದೇ ಕೋಪದಲ್ಲಿ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ. ಜೊತೆಗೆ ಕರ್ಮ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಶೋಭಿತಾ ಧೂಲಿಪಾಲ್ ಹೇಟ್ ಯು ಅಂತ ಕಾಮೆಂಟ್ಸ್ ಹಾಕಿದ್ದಾರೆ. ಇದರ ಜೊತೆಗೆ ನಟಿ ಸಮಂತಾ ಅವರು ಈ ಹಿಂದೆ ವೇದಿಕೆ ಮೇಲೆ ಕಣ್ಣೀರಿಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ