/newsfirstlive-kannada/media/post_attachments/wp-content/uploads/2024/10/Samantha-1.jpg)
ನಾಗಚೈತನ್ಯ - ಸಮಂತಾ ಡಿವೋರ್ಸ್ ಆಗಿ ಮೂರು ವರ್ಷವೇ ಕಳೆದಿದ್ರೂ ಆ ಜೋಡಿಯ ಕೆಲ ಗಾಸಿಪ್ಗಳು ಇನ್ನೂ ಕಮ್ಮಿಯಾಗಿಲ್ಲ. ನಾಗಚೈತನ್ಯ ನಿಶ್ಚಿತಾರ್ಥವೊಂದು ಸಖತ್ ಸುದ್ದಿಯಾಗಿತ್ತು. ಆದ್ರೆ ನಿನ್ನೆ ತೆಲಂಗಾಣ ಸಚಿವೆ ಇವರ ಡಿವೋರ್ಸ್ಗೆ ಕಾರಣ ಬಿಚ್ಚಿಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಇದಕ್ಕೆ ಖುದ್ದು ಸಮಂತಾ ಕೆಂಡವಾಗಿದ್ದಾರೆ.
ಟಾಲಿವುಡ್ನ ಮುದ್ದಾದ ಜೋಡಿ ಆಗಿದ್ದ ನಾಗಚೈತನ್ಯ- ಸಮಂತಾ ವಿಚ್ಛೇದನ ಬೆನ್ನಲ್ಲೇ ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ. ಮದುವೆಯಾದ ನಾಲ್ಕೇ ವರ್ಷಕ್ಕೆ ಜೋಡಿ ಹಕ್ಕಿಗಳು ಬೇರೆ ಬೇರೆಯಾಗಿವೆ. ಆದ್ರೆ ಇವರ ಡಿವೋರ್ಸ್ಗೆ ಕಾರಣ ಬಹಿರಂಗವಾಗಿರಲಿಲ್ಲ. ನಿನ್ನೆ ತೆಲಂಗಾಣದ ಸಚಿವೆ ಕೊಂಡ ಸುರೇಖಾ, ಸಮಂತಾ ಡಿವೋರ್ಸ್ಗೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರ ಮಾಜಿ ಸಚಿವ ಕೆಟಿ ರಾಮರಾವ್ ಕಾರಣ ಅಂತ ಹೇಳಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಇದು ಸಮಂತಾ ಕೆಂಗಣ್ಣಿಗೂ ಕಾರಣವಾಗಿದೆ.
ಡಿವೋರ್ಸ್ ವೈಯಕ್ತಿಕ, ರಾಜಕೀಯ ಷಡ್ಯಂತ್ರ ಇಲ್ಲ ಎಂದ ಸ್ಯಾಮ್
ತೆಲಂಗಾಣದ ಸಚಿವೆ ಕೊಂಡ ಸುರೇಖಾ ಹೇಳಿಕೆಗೆ ನಟಿ ಸಮಂತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನ ಡಿವೋರ್ಸ್ ಪರಸ್ಪರ ಒಪ್ಪಿಗೆಯಿಂದ ಆಗಿದೆ. ಡಿವೋರ್ಸ್ನಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ದಯವಿಟ್ಟು ರಾಜಕೀಯ ಜಗಳದಿಂದ ನನ್ನ ಹೆಸರನ್ನು ಹೊರಗಿಡಿ ಅಂತ ಇನ್ಸ್ಟಾಗ್ರಾಮ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಡಿವೋರ್ಸ್ ಬಗ್ಗೆ ವದಂತಿ ಹರಡುವುದನ್ನು ನಿಲ್ಲಿಸಿ’
ನಮ್ಮ ಡಿವೋರ್ಸ್ನಲ್ಲಿ ಯಾವ ರಾಜಕೀಯ ಸಂಚು ಇಲ್ಲ. ನನ್ನ ವಿಚ್ಛೇದನ ಪರಸ್ಪರ ಒಪ್ಪಿಗೆಯಿಂದ ಆಗಿದೆ. ಡಿವೋರ್ಸ್ನಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರನ್ನ ಹೊರಗಿಡಿ. ನಾನು ಯಾವಾಗಲೂ ರಾಜಕೀಯೇತರ ವ್ಯಕ್ತಿ. ಅದೇ ರೀತಿ ಮುಂದುವರೆಯಲು ಬಯಸುತ್ತೇನೆ. ನನ್ನ ಡಿವೋರ್ಸ್ ವೈಯಕ್ತಿಕ ವಿಚಾರ. ಡಿವೋರ್ಸ್ ಬಗ್ಗೆ ನೀವು ಊಹಾಪೋಹ ಹರಡುವುದನ್ನು ನಿಲ್ಲಿಸಿ. ನೀವು ಸಚಿವರಾಗಿರುವುದರಿಂದ ನಿಮ್ಮ ಮಾತಿಗೆ ಹೆಚ್ಚಿನ ತೂಕ ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ಬೇರೆಯವರ ಖಾಸಗಿ ಜೀವನದ ಬಗ್ಗೆ ಗೌರವದಿಂದ ಇರಿ.
-ಸಮಂತಾ ರುತ್ ಪ್ರಭು, ನಟಿ
ಇನ್ನು ಕೇವಲ ಸಮಂತಾ ಮಾತ್ರವಲ್ಲದೆ ಸಚಿವೆ ಹೇಳಿಕೆಯನ್ನು ಕೆಟಿಆರ್ ಕೂಡ ತೀವ್ರವಾಗಿ ವಿರೋಧಿಸಿದ್ದಾರೆ. ವಿವಾದಿತ ಹೇಳಿಕೆಯನ್ನು 24 ಗಂಟೆಯಲ್ಲಿ ವಾಪಸ್ಸು ಪಡೆದು ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ, ಕ್ರಿಮಿನಲ್ ಕೇಸ್ ಹಾಕುವುದಾಗಿ ನೋಟೀಸ್ ನೀಡಿದ್ದಾರೆ.
ಇತ್ತ ಸಚಿವೆಯ ವಿರುದ್ಧ ಸಮಂತಾ ಮಾಜಿ ಮಾವ ನಟ ನಾಗಾರ್ಜುನ ಕೂಡ ಕಿಡಿಕಾರಿದ್ದಾರೆ. ನಿಮ್ಮ ಮಾತುಗಳನ್ನು ಹಿಂಪಡೆಯಿರಿ ಅಂತ ಟ್ವಿಟರ್ನಲ್ಲಿ ಗುಡುಗಿದ್ದಾರೆ.
ಒಟ್ಟಾರೆ ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಆಗಿದ್ದಕ್ಕೆ ಅಭಿಮಾನಿಗಳು ಇನ್ನೂ ಬೇಸರದಲ್ಲಿದ್ದಾರೆ. ಅಲ್ಲದೇ ಇಬ್ಬರೂ ಕೂಡ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ಆದ್ರೆ ಸಚಿವೆ ಈ ರೀತಿ ಹೇಳಿಕೆ ಕೊಟ್ಟು ಸಂಚಲನಕ್ಕೆ ಕಾರಣವಾಗಿದ್ದಾರೆ. ಎಲ್ಲರ ಖಾಸಗಿ ಜೀವನವನ್ನು ಮೊದಲು ಜನಪ್ರತಿನಿಧಿಗಳು ಗೌರವಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ