Advertisment

ಮದುವೆಯ ಗೌನ್​ಗೆ ಹೊಸ ರೂಪ ಕೊಟ್ಟ ಸೌತ್​ ಸ್ಯಾಮ್‌; ಫ್ಯಾನ್ಸ್​ ಫುಲ್​ ಶಾಕ್​.. ಕಾರಣವೇನು?

author-image
Veena Gangani
Updated On
ಮದುವೆಯ ಗೌನ್​ಗೆ ಹೊಸ ರೂಪ ಕೊಟ್ಟ ಸೌತ್​ ಸ್ಯಾಮ್‌; ಫ್ಯಾನ್ಸ್​ ಫುಲ್​ ಶಾಕ್​.. ಕಾರಣವೇನು?
Advertisment
  • ನಟ ನಾಗಚೈತನ್ಯ ಜೊತೆ ಮದುವೆಯಲ್ಲಿ ಧರಿಸಿದ್ದ ಗೌನ್​ ಇದು
  • ನೆಟ್ಟಿಗರ ಕಣ್ಣು ಕುಕ್ಕುವಂತೆ ಗೌನ್​ಗೆ​ ಹೊಸ ರೂಪ ನೀಡಿದ ನಟಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ತೆಲುಗಿನ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಖ್ಯಾತ ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ವಿಚಿತ್ರ ಕಾಯಿಗೆ ತುತ್ತಾಗಿದ್ದರು. ಈ ಕ್ಯೂಟೆಸ್ಟ್​ ಜೋಡಿಯ ಬಗ್ಗೆ ಈಗಲೂ ಅಭಿಮಾನಿಗಳು ಬೇಸರ ಹೊರ ಹಾಕುತ್ತಾ ಇರುತ್ತಾರೆ.

Advertisment

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

publive-image

ಆದರೆ ಈ ಮಧ್ಯೆ ನಟಿ ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟ ನಾಗಚೈತನ್ಯ ಅವರ ಜೊತೆ ಮದುವೆಗೆ ಸಮಂತಾ ಧರಿಸಿದ್ದ ಗೌನ್‌ಅನ್ನು ಹರಿದು ಹಾಕಿ ಅದಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ನಟಿ ಸಮಂತಾ ಏಪ್ರಿಲ್ 25ರಂದು ನಡೆದ ಗ್ಲಾಮರಸ್ ಫ್ಯಾಶನ್ ಪ್ರೋಗ್ರಾಮ್‌ನಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದರು.

Advertisment

ಇದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಈ ಗೌನ್ ಬಗ್ಗೆ ಬಗ್ಗೆ ನಟಿ ಸಮಂತಾ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ಅತ್ಯಂತ ಸುಂದರವಾಗಿ ಬಿಳಿ ಬಣ್ಣದ ವೆಡ್ಡಿಂಗ್ ಗೌನ್ ಅನ್ನು ಕಟ್​ ಮಾಡಿಸಿ ಅದಕ್ಕೆ ಬ್ಲ್ಯಾಕ್ ಡೈ ಡಿಸೈನ್​ಗೆ ರೂಪಾಂತರಿಸಿದ್ದಾರೆ. ಈಗ ಸಖತ್​ ವೈರಲ್​ ಆಗುತ್ತಿದೆ. ಸದ್ಯ ನಟಿ ಸಮಂತಾ ಹುಟ್ಟು ಹಬ್ಬದ ದಿನವೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಬಂಗಾರಮ್ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸದ್ಯದಲ್ಲೇ ನಟಿ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment