/newsfirstlive-kannada/media/post_attachments/wp-content/uploads/2024/08/samantha-1.jpg)
ನಟಿ ಸಮಂತಾ ರುತ್ ಪ್ರಭುಗೆ ವಿಚ್ಛೇದನ ನೀಡಿದ ಬಳಿಕ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಜೊತೆ ಸಂಬಂಧದಲ್ಲಿದ್ದಾರೆ. ಈ ಸಂಬಂಧದವನ್ನು ಗಟ್ಟಿಗೊಳಿಸಲು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಅತ್ತ ಸಮಂತಾ ಮಾತ್ರ ಡಿವೋರ್ಸ್​ ಬಳಿಕ ಒಂಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೀಗ ಒಂಟಿಯಾಗಿರುವ ನಟಿ ಸಮಂತಾ ನಿರ್ದೇಶಕನೋರ್ವನ ಜೊತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ನಿರ್ದೇಶಕ ರಾಜ್​​ ನಿಡಿಮೋರ್​ ಜೊತೆಗೆ ನಟಿ ಸಮಂತಾ ಡೇಟ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೆಬ್​ ಸೀರಿಸ್​​ನಲ್ಲಿ ಜೊತೆಯಾದ ನಂತರದಿಂದ ಸಮಂತಾ ಆತನ ಜೊತೆಗೆ ಡೇಟ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇದಕ್ಕೆಲ್ಲ ನಟಿಯೇ ಉತ್ತರ ನೀಡಬೇಕಿದೆ.
ಇದನ್ನೂ ಓದಿ: ದೇವರ ಮೊರೆ ಹೋದ ಕನ್ನಡ ಚಿತ್ರರಂಗ.. ಕಲಾವಿದರ ಸಂಘದಲ್ಲಿ ವಿಶೇಷ ಹೋಮ, ಹವನ..!
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ 2017 ರಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ನಂತರ ಈ ಜೋಡಿ ಬೇರೆಯಾಗಲು ನಿರ್ಧರಿಸುತ್ತಾರೆ. 2021 ರಲ್ಲಿ ಈ ಜೋಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಇಬ್ಬರ ಪ್ರತ್ಯೇಕತೆಯ ಸುದ್ದಿ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು.
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಅಸಾಧಾರಣ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಳಿಸಿದರು. ಹನಿ ಬನ್ನಿಯಲ್ಲಿ ರಾಜ್​ ನಿಡಿಮೋರ್​ ಪರಿಚಯವಾಗಿ ಸದ್ಯ ಡೇಟ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ರಾಜ್​ಗೆ ಈಗಾಗಲೇ ಒಮದು ಮದುವೆಯಾಗಿದೆ ಎಂಬುದು ನಂಬಲೇಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ