newsfirstkannada.com

ಸಮಂತಾ ಸರ್ಬಿಯಾದಲ್ಲಿ ಜಾಲಿ ಟ್ರಿಪ್, ಸಾಯಿ ಪಲ್ಲವಿ ಬಗ್ಗೆ ಕೇಳಿದ ಸುದ್ದಿ ಸುಳ್ಳು!; ಇಲ್ಲಿವೆ ಟಾಪ್​ 5 ಸಿನಿಮಾ ಸುದ್ದಿ

Share :

28-06-2023

    ಕಾಂತಾರ ನಟ ರಿಷಬ್ ಶೆಟ್ಟಿಗೆ ಐತಿಹಾಸಿಕ ಪ್ರಸಿದ್ಧ ಸಿನಿಮಾ ಮಂದಿರದಲ್ಲಿ ಪ್ರಶಸ್ತಿ ಪ್ರದಾನ

    ಹ್ಯಾಟ್ರಿಕ್ ಹೀರೋ ಶಿವಣ್ಣನ ಹುಟ್ಟುಹಬ್ಬದಂದು ಘೋಸ್ಟ್​ ಚಿತ್ರ ತಂಡದಿಂದ ಬಿಗ್​​ ಗಿಫ್ಟ್​​!

    ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರದಲ್ಲಿ ಮಲಯಾಳಂ ನಟಿ ಮಾಳವಿಕಾ ನಾಯರ್

ಗಣೇಶ್​ ಚಿತ್ರಕ್ಕೆ ಮಲಯಾಳಂ ನಟಿ ಎಂಟ್ರಿ!

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಲಿರುವ ಹೊಸ ಚಿತ್ರದಲ್ಲಿ ಮಲಯಾಳಂ ನಟಿ ಮಾಳವಿಕಾ ನಾಯರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ನಾಯಕನಾಗಿ ಅಭಿನಯಿಸಲಿದ್ದಾರಂತೆ. ಅಂದ್ಹಾಗೆ, ಮಾಳವಿಕಾ ನಾಯರ್ ಈಗಾಗಲೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಟ್ಯಾಕ್ಸಿವಾಲಾ, ಉಸ್ತಾದ್ ಹೋಟೆಲ್, ಚುಕ್ಕು ಅಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

‘ವಿಶ್ವ ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ: ರಿಷಬ್ ಸಂತಸ

ನಟ-ನಿರ್ದೇಶಕ ರಿಷಬ್ ಶೆಟ್ಟಿಗೆ ಮತ್ತೊಂದು ಶ್ರೇಷ್ಠ ಪ್ರಶಸ್ತಿ ದೊರತಿದೆ. ವಾಷಿಂಗ್ಟನ್​ನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗ ಸಂಘದ ವತಿಯಿಂದ ”ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಲಭಿಸಿದ್ದಕ್ಕೆ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಿಷಬ್, ”ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೆರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ” ಎಂದು ಸಂತಸ ಹಂಚಿಕೊಂಡಿದ್ದಾರೆ.

View this post on Instagram

A post shared by Rishab Shetty (@rishabshettyofficial)

ಸಾಯಿ ಪಲ್ಲವಿ ಬಗ್ಗೆ ಕೇಳಿದ ಸುದ್ದಿ ಸುಳ್ಳು!

‘ಜ್ಯೂನಿಯರ್​ ಎನ್​ಟಿಆರ್ ನಟಿಸ್ತಿರುವ ದೇವರ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ವಿಶೇಷ ಪಾತ್ರ ಮಾಡ್ತಿದ್ದಾರೆ, ಎನ್​ಟಿಆರ್​ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಯನ್ನ ದೇವರ ಚಿತ್ರತಂಡ ಅಧಿಕೃತವಾಗಿ ನಿರಾಕರಣೆ ಮಾಡಿದೆ. ಟ್ವಿಟ್ಟರ್ ಮೂಲಕ ಈ ಸುದ್ದಿ ನಿಜ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿದ್ದು, ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ.

ಜುಲೈಗೆ ‘ಘೋಸ್ಟ್’​ ಟ್ರೇಲರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಘೋಸ್ಟ್​ ಚಿತ್ರದ ಟ್ರೇಲರ್​ ಜುಲೈ ತಿಂಗಳಲ್ಲಿ ಬರಲಿದೆ. ಜುಲೈ 12ಕ್ಕೆ ಶಿವಣ್ಣನ ಹುಟ್ಟುಹಬ್ಬವಿದ್ದು, ಅದೇ ದಿನ ಘೋಸ್ಟ್​ ಟ್ರೇಲರ್ ರಿಲೀಸ್ ಮಾಡಲಿದೆಯಂತೆ ಚಿತ್ರತಂಡ. ಶ್ರೀನಿವಾಸ ಕಲ್ಯಾಣ, ಓಲ್ಡ್​ಮಾಂಕ್ ಚಿತ್ರಗಳನ್ನ ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ.

ಸರ್ಬಿಯಾದಲ್ಲಿ ಸಮಂತಾ ಜಾಲಿ ಟ್ರಿಪ್!

ಸೌತ್ ನಟಿ ಸಮಂತಾ ಸರ್ಬಿಯಾದಲ್ಲಿ ಜಾಲಿ ಟ್ರಿಪ್ ಮಾಡಿದ್ದು,​ ಫೋಟೋಗಳು ಸೋಶಿಯಲ್​ ವೈರಲ್ ಆಗಿವೆ. ಬಾಲಿವುಡ್ ನಟ ವರುಣ್ ಧವನ್ ಜೊತೆ ಸಿಟಾಡೆಲ್​ ವೆಬ್ ಸೀರಿಸ್​ನಲ್ಲಿ ನಟಿಸ್ತಿರುವ ಸಮಂತಾ ಸದ್ಯ ಸರ್ಬಿಯಾದಲ್ಲಿ ಶೂಟಿಂಗ್ ಮಾಡ್ತಿದ್ದಾರೆ. ಈ ನಡುವೆ ಬಿಡುವು ಮಾಡ್ಕೊಂಡು ಸರ್ಬಿಯಾದ ಸುಂದರ ತಾಣಗಳನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ ಸಮಂತಾ.

View this post on Instagram

A post shared by Samantha (@samantharuthprabhuoffl)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಮಂತಾ ಸರ್ಬಿಯಾದಲ್ಲಿ ಜಾಲಿ ಟ್ರಿಪ್, ಸಾಯಿ ಪಲ್ಲವಿ ಬಗ್ಗೆ ಕೇಳಿದ ಸುದ್ದಿ ಸುಳ್ಳು!; ಇಲ್ಲಿವೆ ಟಾಪ್​ 5 ಸಿನಿಮಾ ಸುದ್ದಿ

https://newsfirstlive.com/wp-content/uploads/2023/06/samantha-1-1.jpg

Load More