newsfirstkannada.com

ಸಮಂತಾ ಬಗ್ಗೆ ಇದೆಂಥಾ ಸುದ್ದಿ? ಕೋಟಿ, ಕೋಟಿ ದುಡಿದ ಸ್ಯಾಮ್​ ಆ ಸ್ಟಾರ್​ ನಟನಿಂದ 25 ಕೋಟಿ ಸಾಲ ಪಡೆದಿದ್ಯಾಕೆ?

Share :

Published August 3, 2023 at 9:00pm

Update August 3, 2023 at 8:47pm

  ಆರ್ಥಿಕವಾಗಿ ಸಂಕಷ್ಟದ ಸುಳಿಯಲ್ಲಿ ಸೌತ್‌ ನಟಿ ಸಮಂತಾ

  ಸಮಂತಾ ಒಂದು ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?

  ಸೌತ್ ಸುಂದರಿ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟಿದೆ?

ಸೌತ್ ಸುಂದರಿ ಸಮಂತಾ ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರುವುದು ಅಭಿಮಾನಿಗಳಿಗೆ ಗೊತ್ತೇ ಇದೆ. ಇದು ಜಾಲಿ ಟ್ರಿಪ್​​ ಅನ್ನೋದಕ್ಕಿಂತ ಮಯೋಸೈಟಿಸ್ ಕಾಯಿಲೆಗೆ ಟ್ರೀಟ್ಮೆಂಟ್​ ಎನ್ನಬಹುದು. ಸಮಂತಾ ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರೀಟ್ಮೆಂಟ್​ ಹಿನ್ನೆಲೆ ಶೀಘ್ರದಲ್ಲೇ ವಿದೇಶಕ್ಕೆ ಹಾರಲಿರುವ ಸಮಂತಾ ಅದಕ್ಕೂ ಮುಂಚೆ ಭಾರತದಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅದರ ಭಾಗವೇ ಸಮಂತಾ ಕೈಗೊಂಡಿರುವ ರೋಡ್ ಟ್ರಿಪ್. ಯೋಗ, ಧ್ಯಾನ, ವರ್ಕೌಟ್​ ಅಂತ ಸಖತ್ ಸ್ಟೈಲ್ ಆಗಿ ಸಖತ್​ ಬ್ಯುಸಿಯಾಗಿದ್ದಾರೆ.

ಇಶಾ ಫೌಂಡೇಶನ್​ ಹಾಗೂ ಬಾಲಿಯಲ್ಲಿ ಒಂದಿಷ್ಟು ದಿನ ಸಮಯ ಕಳೆದ ಸಮಂತಾ ಈಗ ತಮ್ಮ ನೆಕ್ಸ್ಟ್​ ಡೆಸ್ಟಿನಿ ರೀಚ್​ ಆಗಿದ್ದಾರೆ. ಸದ್ಯಕ್ಕೆ ಆ ಪ್ಲೇಸ್​ ಯಾವುದು ಅನ್ನೋದು ಸೀಕ್ರೆಟ್​. ಹೀಗೆ ಆರಾಮಾಗಿ ಟ್ರೀಟ್ಮೆಂಟ್​ ಜೊತೆ ವೇಕೆಶನ್​ ಎಂಜಾಯ್ ಮಾಡುತ್ತಿರುವ ಸ್ಯಾಮ್​ ಬಗ್ಗೆ ಈಗ ಶಾಕಿಂಗ್ ಸಮಾಚಾರವೊಂದು ಹೊರಬಿದ್ದಿದೆ. ಸೌತ್ ಇಂಡಸ್ಟ್ರಿಯ ಟಾಪ್ ನಟಿ ಅಂತ ಕರೆಸಿಕೊಳ್ಳೋ ಸಮಂತಾ ಬಗ್ಗೆ ಬೆಚ್ಚಿ ಬೀಳಿಸುವ ವಿಷ್ಯವೊಂದು ಸದ್ದು ಮಾಡುತ್ತಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರಾ ನಟಿ ಸಮಂತಾ!

ಟ್ರೀಟ್ಮೆಂಟ್​​ಗಾಗಿ ಭಾರಿ ಹಣ ಸಾಲ ಪಡೆದ್ರಾ ಸ್ಟಾರ್ ನಟಿ?

ನಟಿ ಸಮಂತಾ ದಕ್ಷಿಣ ಸಿನಿಮಾರಂಗದ ಬೇಡಿಕೆ ನಟಿ. ಸುಮಾರು 12 ವರ್ಷದಿಂದ ಸಿನಿಮಾ ಪ್ರಪಂಚದಲ್ಲಿರುವ ಸ್ಯಾಮ್ ತೆಲುಗು, ತಮಿಳಿನ ಬಹುತೇಕ ಸೂಪರ್​​ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಒಂದ್ ಟೈಮ್​ಲ್ಲಿ ಹೈಯೆಸ್ಟ್​ ಪೇಯ್ಡ್​ ನಟಿ ಕೂಡ ಆಗಿದ್ದರು. ಹಾಗಂತ ಈಗ ಡಿಮ್ಯಾಂಡ್​ ಇಲ್ವಾ ಅಂದುಕೊಳ್ಳಬೇಡಿ. ಈಗಲೂ ಸಮಂತಾ ಜೊತೆ ಸಿನಿಮಾ ಮಾಡೋಕೆ ಪ್ರೊಡ್ಯೂಸರ್​ ಸಾಲುಗಟ್ಟಿ ನಿಂತಿದ್ದಾರೆ. ಸಮಂತಾ ನಟಿಸ್ತಾರೆ ಅಂದ್ರೆ ಕೋಟಿ ಕೋಟಿ ಬಂಡವಾಳ ಹಾಕೋಕು ಸಿದ್ದರಿದ್ದಾರೆ. ಈಗಲೂ ಸಮಂತಾ ಭಾರಿ ಸಂಭಾವನೆ ಪಡೆಯುತ್ತಾರೆ. ಹೀಗೆ ಬೇಡಿಕೆ ನಟಿಯಾಗಿರುವ ಸಮಂತಾ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರಂತೆ. ಟ್ರೀಟ್ಮೆಂಟ್​ಗಾಗಿ ಭಾರಿ ದೊಡ್ಡ ಸಾಲ ಪಡೆದುಕೊಂಡಿದ್ದಾರೆ ಅನ್ನೋ ಸುದ್ದಿ ಈಗ ಅಭಿಮಾನಿಗಳಿಗೆ ಅಚ್ಚರಿ ಪ್ಲಸ್ ಆಘಾತ ತಂದಿದೆ.

ಮಯೋಸೈಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲಿದ್ದಾರೆ. ಸುಮಾರು ಆರು ತಿಂಗಳು ಅಮೆರಿಕಾದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹೈ ಕ್ವಾಲಿಟಿ ವೈದ್ಯರಿಂದ ಚಿಕಿತ್ಸೆ ಪಡೆಯಲಿದ್ದು, ಇದಕ್ಕಾಗಿ ಭಾರಿ ವೆಚ್ಚ ಖರ್ಚು ಮಾಡ್ತಿದ್ದಾರಂತೆ. ಆದ್ರೆ ಅಷ್ಟು ದೊಡ್ಡ ಮೊತ್ತ ಸಮಂತಾ ಬಳಿ ಇಲ್ಲವಾಗಿದ್ದು, ಅದಕ್ಕಾಗಿ ಒಬ್ಬ ಸ್ಟಾರ್​ ನಟನಿಂದ ಬರೋಬ್ಬರಿ 25 ಕೋಟಿ ಸಾಲ ಪಡೆದುಕೊಂಡಿದ್ದಾರೆ ಅನ್ನೋದು ಅಭಿಮಾನಿ ವಲಯವನ್ನ ಬೆರಗುಗೊಳಿಸ್ತಿದೆ. ನಿಜಕ್ಕೂ ಸಮಂತಾ ಟ್ರೀಟ್ಮೆಂಟ್​ಗೆ ಅಷ್ಟು ಖರ್ಚು ಮಾಡ್ತಿದ್ದಾರಾ? ಒಂದು ವೇಳೆ 25 ಕೋಟಿ ಚಿಕಿತ್ಸೆಗೆ ವೆಚ್ಚವಾಗುವುದಾದರೂ ಅಷ್ಟು ದುಡ್ಡ ಸ್ಯಾಮ್ ಬಳಿ ಇಲ್ವಾ? ಹಾಗಾದ್ರೆ ಇಷ್ಟು ದಿನ ಸಮಂತಾ ಸಂಪಾದನೆ ಮಾಡಿದ ಹಣ ಎಲ್ಲಿ ಅನ್ನೋ ಕುತೂಹಲ ಸಹಜವಾಗಿ ಹಾಡುತ್ತಿದೆ. ಇದರಲ್ಲಿ ಎಷ್ಟು ನಿಜಾ ಇದ್ಯೋ? ಎಷ್ಟು ಸುಳ್ಳು ಅನ್ನೋ ಗೊಂದಲದ ನಡುವೆಯೂ ಸೋಶಿಯಲ್ ಮೀಡಿಯಾದಲ್ಲೊಂದು ಸೆನ್ಸೇಷನ್ ಸೃಷ್ಟಿಯಾಗಿಬಿಟ್ಟಿದೆ.

ಸಮಂತಾ ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟಿದೆ?

ಸಮಂತಾ ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ಇಷ್ಟೆಲ್ಲಾ ಚರ್ಚೆ ಆದ್ಮೇಲೆ ಸಹಜವಾಗಿ ಅವರ ಸಂಭಾವನೆ ಹಾಗೂ ಒಟ್ಟು ಆಸ್ತಿ ಬಗ್ಗೆ ಕ್ಯೂರಿಯಸಿಟಿ ಹೆಚ್ಚಾಗುತ್ತೆ. ಸಮಂತಾ ಒಂದು ಸಿನಿಮಾ ಎಷ್ಟು ಸಂಭಾವನೆ ತಗೋತಿದ್ರು? ಒಟ್ಟು ಎಷ್ಟು ಆಸ್ತಿ ಅವರತ್ರ ಇದೆ ಅನ್ನೋದು ಕುತೂಹಲ ಸೃಷ್ಟಿಸಿದೆ. ಸಮಂತಾ ಪ್ರತಿ ಸಿನಿಮಾಗೂ 3 ರಿಂದ 4 ಕೋಟಿ ಚಾರ್ಜ್ ಮಾಡಿದ್ದಾರೆ. ‘ಫ್ಯಾಮಿಲಿ ಮ್ಯಾನ್ 2’ ವೆಬ್​ಸಿರೀಸ್​ಗೆ ಸರಿ ಸುಮಾರು 8 ಕೋಟಿ ತೆಗೊಂಡಿದ್ದರಂತೆ. ಇದುವರೆಗೂ ಸುಮಾರು 50 ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ಬಳಿ ಅಂದಾಜು 90 ರಿಂದ 100 ಕೋಟಿ ಆಸ್ತಿ ಇದೆ ಎನ್ನಲಾಗಿದೆ. ನಾಗಚೈತನ್ಯ ಜೊತೆಗಿನ ಮದುವೆ ಮುರಿದುಕೊಂಡ ಸಮಂತಾಗೆ ಭಾರಿ ದೊಡ್ಡ ಮಟ್ಟದಲ್ಲೇ ನಷ್ಟ ಪರಿಹಾರ ಸಿಕ್ಕಿದೆ ಎಂಬ ಗುಮಾನಿ ಹಬ್ಬಿತ್ತು.

ಆದರೆ, ಡಿವೋರ್ಸ್ ವಿಚಾರದಲ್ಲಿ ಯಾವ ಥರಾ ವ್ಯವಹಾರ ಜರುಗಿದೆ ಅನ್ನೋದ್ರ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಹಾಗಾಗಿ ಮಾಜಿ ಗಂಡನಿಂದ ಸಮಂತಾಗೆ ಸಿಕ್ಕಿರೋ ಆಸ್ತಿ ಕುರಿತು ಸ್ಪಷ್ಟತೆ ಇಲ್ಲ. ಸದ್ಯ ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ನಟಿಸಿರುವ ಸಮಂತಾ ಈ ಚಿತ್ರವನ್ನ ಪೂರ್ಣಗೊಳಿಸಿದ್ದಾರೆ. ಟ್ರೇಲರ್, ಸಾಂಗ್ಸ್​ ಮೂಲಕ ಸದ್ದು ಮಾಡುತ್ತಿರುವ ಖುಷಿ ಶೀಘ್ರದಲ್ಲೇ ತೆರೆಗೆ ಬರಲಿದೆ. ಅದರ ಬೆನ್ನಲ್ಲೇ ಸಿಟಾಡೆಲ್ ಎನ್ನುವ ವೆಬ್ ಸಿರೀಸ್​ನಲ್ಲಿ ಸಮಂತಾ ನಟಿಸಿದ್ದು, ಈ ಚಿತ್ರವೂ ಮುಗಿಸಿಕೊಂಡಿದ್ದಾರೆ. ಇನ್ನೆರಡು ಚಿತ್ರಗಳನ್ನ ಒಪ್ಪಿಕೊಂಡಿದ್ದ ಸಮಂತಾ ಟ್ರೀಟ್ಮೆಂಟ್​ ಕಾರಣದಿಂದ ತೆಗೆದುಕೊಂಡಿದ್ದ ಅಡ್ವಾನ್ಸ್​ ಹಣವನ್ನ ವಾಪಸ್ ಕೊಟ್ಟಿದ್ದರು. ವೃತ್ತಿ ಜೀವನದಲ್ಲಿ ಸಮಂತಾ ಸೋತಿದ್ದಕ್ಕಿಂತ ಗೆದ್ದಿರೋದೇ ಹೆಚ್ಚು. ಸಿನಿಮಾ ಜೊತೆಗೆ ಸಾಕಷ್ಟು ಜಾಹೀರಾತು ಕಂಪನಿಗಳ ಜೊತೆ ಟೈ ಅಪ್ ಆಗಿದ್ದರು. ಆ್ಯಡ್ಸ್​ ಮಾಡಿಕೊಟ್ಟಿದ್ದಾರೆ. ಪ್ರೈವೇಟ್​ ಕಂಪನಿಗಳ ಜೊತೆ ಕೆಲಸ ಮಾಡಿದ್ದಾರೆ.

ಸ್ಟಾರ್​​ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಸೋಲೋ ಹೀರೋಯಿನ್​ ಆಗಿಯೂ ಸಕ್ಸಸ್​ ಕಂಡಿದ್ದಾರೆ. ಪರ್ಸನಲ್ ಲೈಫ್​ನಲ್ಲಿ ಎಡವಿದ್ದು ಅನ್ನೋದು ಬಿಟ್ಟರೆ ಸಮಂತಾ ಓರ್ವ ಸಕ್ಸಸ್​ಫುಲ್ ನಟಿ. ಹಾಗಾಗಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಅನ್ನೋದು ವಾಸ್ತವಕ್ಕೆ ದೂರ ಅನಿಸ್ತಿದೆ. ಜೊತೆಗೆ ಟ್ರೀಟ್ಮೆಂಟ್​ಗೆ 25 ಕೋಟಿ ಆಗುತ್ತೆ ಅನ್ನುವುದರ ಬಗ್ಗೆ ಕ್ಲಾರಿಟಿ ಇಲ್ಲದ ಕಾರಣ ಇದೊಂದು ಆಧಾರವಿಲ್ಲದ ಸುದ್ದಿ ಎನ್ನಲಾಗುತ್ತಿದೆ. ಇನ್ನು ಸಮಂತಾಗೆ 25 ಕೋಟಿ ಸಾಲ ಕೊಟ್ಟಿದ್ದಾರೆ ಎನ್ನಲಾಗುತ್ತಿರುವ ಆ ನಟನ ಬಗ್ಗೆಯೂ ಸ್ಪಷ್ಟತೆ ಇಲ್ಲದಿರುವುದರಿಂದ ಇದೊಂದು ವದಂತಿಯಾಗಿದೆ. ಒಟ್ಟಿನಲ್ಲಿ ಸಮಂತಾ ಒಳ್ಳೆ ಆಸ್ತಿ ಹೊಂದಿದ್ದಾರೆ. ಹೈದರಾಬಾದ್​, ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಹಾಗಾಗಿ ಸ್ಯಾಮ್ ಸಾಲ ಪಡೆಯೋ ಅವಶ್ಯಕತೆ ಇಲ್ಲ ಅನ್ನೋದು ಅವರ ಅಭಿಮಾನಿ ವರ್ಗದ ವಾದ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಮಂತಾ ಬಗ್ಗೆ ಇದೆಂಥಾ ಸುದ್ದಿ? ಕೋಟಿ, ಕೋಟಿ ದುಡಿದ ಸ್ಯಾಮ್​ ಆ ಸ್ಟಾರ್​ ನಟನಿಂದ 25 ಕೋಟಿ ಸಾಲ ಪಡೆದಿದ್ಯಾಕೆ?

https://newsfirstlive.com/wp-content/uploads/2023/08/samantha.jpg

Load More