/newsfirstlive-kannada/media/post_attachments/wp-content/uploads/2024/10/Samantha-3.jpg)
ಟಾಲಿವುಡ್​​ ಕ್ಯೂಟ್​ ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಒಬ್ಬಂಟಿಯಾಗಿದ್ದಾರೆ. ತನ್ನ ನೋವನೆಲ್ಲಾ ನುಂಗಿ ಈಗ ಸದೃಢವಾಗಿದ್ದಾರೆ. ಇವರ ನಿಜ ಜೀವನದ ಘಟನೆಯನ್ನು ಕಂಡ ಬಾಲಿವುಡ್​ ನಟಿ ಆಲಿಯಾ ಭಟ್ ವೇದಿಕೆ ಮೇಲೆ ನಿಂತು​​ ಆಕೆಯನ್ನು ‘ರೋಲ್​​ ಮಾಡೆಲ್’​ ಎಂದು ಬಣ್ಣಿಸಿದ್ದಾರೆ.
ಆಲಿಯಾ ಭಟ್​ ‘ಜಿಗ್ರಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ರೀ ರಿಲೀಸ್​ ಇವೆಂಟ್​​​ ಹೈದರಾಬಾದ್​ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಭಾಗವಹಿಸುವ ಮುನ್ನ ಆಲಿಯಾ ಭಟ್​ರವರು ನಟಿ ಸಮಂತಾಗೆ ಭಾಗಿಯಾಗಲು ಮೆಸೇಜ್​ ಮಾಡಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿದ ಸಮಂತಾರವರು ‘ಜಿಗ್ರಾ’ ಇವೆಂಟ್​ನಲ್ಲಿ ಭಾಗವಹಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/Samantha-4.jpg)
ವೇದಿಕೆ ಮೇಲೆ ನಿಂತು ಮಾತನಾಡಿದ ಆಲಿಯಾ ಭಟ್​, ‘ಸ್ಯಾಮ್​.. ನನ್ನ ಪ್ರೀತಿಯ ಸಮಂತಾ. ನೀವು ತೆರೆ ಮೇಲೆ ಮತ್ತು ಹೊರಗೆ ಹೀರೋ ಆಗಿದ್ದೀರಿ. ನಿಮ್ಮ ಪ್ರತಿಭೆ ಮತ್ತು ಶಕ್ತಿಯ ಬಗ್ಗೆ ನನಗೆ ತುಂಬಾ ಮೆಚ್ಚುಗೆ ಇದೆ’ ಎಂದು ಹೇಳಿದ್ದಾರೆ. ಆಲಿಯಾ ಮಾತುಗಳನ್ನು ಕೇಳಿದ ಸಮಂತಾ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: BBK11: ಉಸ್ತುವಾರಿ ಸರಿಯಿಲ್ವಂತೆ! ಮನೆ ಮಂದಿ ಬಾಯಲ್ಲಿ ಗೊಬ್ಬರ ಅಬ್ಬರದ ಬಗ್ಗೆಯೇ ಮಾತು
ಬಳಿಕ ಮಾತು ಮುಂದುವರೆಸಿದ ಆಲಿಯಾ, ‘ಪುರುಷ ಜಗತ್ತಿನಲ್ಲಿ ಮಹಿಳೆಯಾಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ನೀವು ಅದನೆಲ್ಲಾ ಮೀರಿಸಿದ್ದೀರಿ. ನೀವು ನಿಮ್ಮ ಎರಡು ಕಾಲುಗಳ ಮೇಲೆ ಎತ್ತರವಾಗಿ ನಿಲ್ಲುತ್ತೀರಿ. ನಿಮ್ಮ ಪ್ರತಿಭೆ ಮತ್ತು ಬಲವಾದ ಒದೆತಗಳು ಎಲ್ಲರಿಗೂ ಉದಾಹರಣೆ’ ಎಂದು ಹೇಳಿದ್ದಾರೆ. ಜೊತೆಗೆ ನಮ್ಮಿಬ್ಬರಿಗೆ ಸಿನಿಮಾವೊಂದನ್ನು ನಿರ್ದೇಶಿಸುವಂತೆ ನಿರ್ಮಾಪಕ ತ್ರಿವಿಕ್ರಮ ಶ್ರೀನಿವಾಸ್​​ ಜೊತೆಗೆ ನಟಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಈತನ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​! ನಗುವ ಮೊದಲು ಈ ಸ್ಟೋರಿ ಓದಿ
ಜಿಗ್ರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಇದೊಂದು ಆ್ಯಕ್ಷನ್​ ಸಿನಿಮಾವಾಗಿದ್ದು, ಆಲಿಯಾ ಭಟ್​ ಮತ್ತು ವೇದಂಗ್​​​ ರೈನಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದು ಸಹೋದರನನ್ನು ರಕ್ಷಿಸುವ ಯುವತಿಯ ಕತೆಯಾಗಿದೆ.
ಅಂದಹಾಗೆಯೇ ಜಿಗ್ರಾ ಸಿನಿಮಾದಲ್ಲಿ ಶೋಭಿತಾ ಧೂಳಿಪಾಲ, ಆದಿತ್ಯಾ ನಂದಾ ಸೇರಿ ಹಲವಾರು ತಾರಾಗಣ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮಾ ಪ್ರೊಡಕ್ಷನ್​ ಮತ್ತು ಎಟರ್ನಲ್​​ ಸನ್​ಶೈನ್​​ ಪ್ರೊಡಕ್ಷನ್​ ಅಡಿಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಶುಕ್ರವಾರದಂದು ತೆರೆಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us