ಕರ್ನಾಟಕವನ್ನು ಕೆಣಕಿದ ಸಮೀರ್​ ನಿಗಮ್​​.. ಫೋನ್​ ಪೇ ಡಿಲೀಟ್​ ಮಾಡಿ ಕನ್ನಡಿಗರು ಆಕ್ರೋಶ!

author-image
Veena Gangani
Updated On
ಕರ್ನಾಟಕವನ್ನು ಕೆಣಕಿದ ಸಮೀರ್​ ನಿಗಮ್​​.. ಫೋನ್​ ಪೇ ಡಿಲೀಟ್​ ಮಾಡಿ ಕನ್ನಡಿಗರು ಆಕ್ರೋಶ!
Advertisment
  • #boycott phonepe, #uninstallPhonepe ಹ್ಯಾಷ್‌ ಟ್ಯಾಗ್‌ಗಳು ವೈರಲ್​
  • ಸಾಮಾಜಿಕ ಜಾಲತಾಣದಲ್ಲಿ ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು
  • ಕನ್ನಡಿಗರಿಗೆ ಮೀಸಲಾತಿ ಕೇಳುವುದೇ ನಾಚಿಕೆಗೇಡು ಎಂದ ಸಮೀರ್ ನಿಗಮ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ನಿರ್ಧಾರದ ವಿರುದ್ಧ ಫೋನ್ ಪೇ ಸಿಇಒ ಸಮೀರ್ ನಿಗಮ್ ಕಾಮೆಂಟ್​ ಮಾಡಿದ್ದರು. ಈ ಬೆನ್ನಲ್ಲೇ ಸಮೀರ್​ ನಿಗಮ್​​​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಹಾಗಾಗಿ ಕನ್ನಡಿಗರು ಬೈಕಾಟ್​​ ಫೋನ್​ ಪೇ, ಅನ್​ ಇನ್​ಸ್ಟಾಲ್ ಫೋನ್​ ಪೇ ಎನ್ನುವ ಟ್ರೆಂಡ್​ ಶುರು ಮಾಡಿದ್ದಾರೆ.​


">July 19, 2024

publive-image

ಫೋನ್ ಪೇ ಸಿಇಒ ಸಮೀರ್ ನಿಗಮ್ ಹೇಳಿದ್ದೇನು?

ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದ್ದರು. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ. ದೇಶಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?' ಎಂದು ಬರೆದುಕೊಂಡಿದ್ದರು. ಇದೇ ಪೋಸ್ಟ್ ವಿರುದ್ಧ ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರವಾಗಿ ಇನ್ಫೋಸಿಸ್ ಸಹಸಂಸ್ಥಾಪಕ ಮೋಹನ್ ದಾಸ್ ಪೈ, ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್ ಸೇರಿ ಅನೇಕ ದಿಗ್ಗಜರು ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ರು. ಇವರ ಬೆನ್ನಲ್ಲೇ ಯುಪಿಐ ಪೇಮೆಂಟ್ ಮೊಬೈಲ್ ಅಪ್ಲಿಕೇಷನ್ ಆದ ಫೋನ್ ಪೇ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಸಮೀರ್ ನಿಗಮ್ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ರು.

publive-image

ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ‘ಫೋನ್ ಪೇ’ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ನಿಮ್ಮ ಮೊಬೈಲ್​ನಿಂದ ಫೋನ್​ ಪೇಯನ್ನು uninstall ಮಾಡುವಂತೆ ಕ್ಯಾಂಪೇನ್ ನಡೆಸಲಾಗುತ್ತಿದೆ. ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ, ಗೂಗಲ್ ಸ್ಟೋರ್​ನಲ್ಲಿ 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲೀಟ್ ಮಾಡುವಂತೆ ಮಾಡಿ ಅಂತ ಅಭಿಯಾನ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment