/newsfirstlive-kannada/media/post_attachments/wp-content/uploads/2024/12/Sameer_Rizvi.jpg)
ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ತ್ರಿಪುರ ತಂಡದ ವಿರುದ್ಧ ಯುವ ಪ್ಲೇಯರ್ ಸಮೀರ್ ರಿಜ್ವಿ ಅತಿ ವೇಗದ ಡಬಲ್ ಹಂಡ್ರೆಡ್ (201) ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೊಸದೊಂದು ಇತಿಹಾಸ ನಿರ್ಮಿಸಿದ್ದು ಹಲವರ ದಾಖಲೆ ಬ್ರೇಕ್ ಮಾಡಿದ್ದಾರೆ.
ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಟೀಮ್, ಸಮೀರ್ ರಿಜ್ವಿ ಹೊಡಿಬಡಿ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತದ ರನ್ಗಳನ್ನು ಕಲೆ ಹಾಕಿತು. ತಂಡದ ಕ್ಯಾಪ್ಟನ್ ಆಗಿರುವ ಸಮೀರ್ ರಿಜ್ವಿ ಕ್ರೀಸ್ಗೆ 23 ನೇ ಓವರ್‌ನಲ್ಲಿ ಆಗಮಿಸಿದರು. ಬರುತ್ತಿದ್ದಂತೆ ದೊಡ್ಡ ದೊಡ್ಡ ಶಾಟ್ಗಳನ್ನು ಹೊಡೆದರು. ಇದರಿಂದ ಕೇವಲ 97 ಎಸೆತಗಳಲ್ಲಿ 13 ಬೌಂಡರಿ, 20 ಸಿಕ್ಸರ್ ಸಮೇತ 201 ರನ್ಗಳನ್ನು ಚಚ್ಚಿದರು. ಇವರ ಅಮೋಘ ದ್ವಿಶತಕದಿಂದ ಉತ್ತರ ಪ್ರದೇಶ ನಿಗದಿತ 50 ಓವರ್‌ಗಳಲ್ಲಿ 405 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು.
ಇದನ್ನೂ ಓದಿ:ರಾಬಿನ್ ಉತ್ತಪ್ಪ ಸ್ಪಷ್ಟನೆ.. ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ಹೇಳಿದ್ದೇನು..?
ಈ ಟಾರ್ಗೆಟ್ ಬೆನ್ನತ್ತಿದ ತ್ರಿಪುರ ಉತ್ತಮ ಆಟವನ್ನೇ ಆಡಿತು. ಬ್ಯಾಟಿಂಗ್ ಆರಂಭಿಸಿದ ತ್ರಿಪುರಾ ಟೀಮ್ ಬೃಹತ್ ರನ್ಗಳನ್ನು ಕಲೆ ಹಾಕುವಲ್ಲಿ ವಿಫಲವಾಗುತ್ತ ಸಾಗಿತು. ಕೇವಲ 253 ರನ್ ಗಳಿಸಲು ಅಷ್ಟೇ ಸಾಧ್ಯವಾಯಿತು. ಹೀಗಾಗಿ ಉತ್ತರ ಪ್ರದೇಶ 152 ರರ್ಗಳಿಂದ ವಿಜಯ ಮಾಲೆ ಧರಿಸಿ ಸಂಭ್ರಮಿಸಿತು.
ಈ ಮೊದಲು ಅಂಡರ್-23 ಟ್ರೋಫಿಯಲ್ಲಿ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ ಅತ್ಯಂತ ವೇಗದ ದ್ವಿಶತಕ 102 ಎಸೆತಗಳಲ್ಲಿ 200 ರನ್ ಬಾರಿಸಿದ್ದರು. ಇವರ ನಂತರ ಭಾರತದ ನಾರಾಯಣ್ ಜಗದೀಸನ್, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 114 ಎಸೆತಗಳ 200 ರನ್ಗಳಿಸಿದ್ದರು. ಆದರೆ ಈಗ ಸಮೀರ್ ರಿಜ್ವಿ ಕೇವಲ 97 ಎಸೆತಳಲ್ಲಿ 201 ರನ್ ಸಿಡಿಸುವ ಮೂಲಕ ಎಲ್ಲ ರೆಕಾರ್ಡ್ಗಳನ್ನು ಉಡೀಸ್ ಮಾಡಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಸಮೀರ್ ರಿಜ್ವಿ ಡೆಲ್ಲಿ ಕ್ಯಾಪ್ಟಲ್ಸ್ ತಂಡದಲ್ಲಿ ಆಡಲಿದ್ದಾರೆ. 2025ರ ಮೆಗಾ ಆಕ್ಷನ್ನಲ್ಲಿ ಸಮೀರ್ ರಿಜ್ವಿ ಅವರನ್ನು ಡೆಲ್ಲಿ ಕ್ಯಾಪ್ಟಲ್ಸ್ ಒಟ್ಟು 97 ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಿತ್ತು. ಈ ಹಿಂದೆ ಚೆನ್ನೈ ಟೀಮ್ನಲ್ಲಿ ಆಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ