Train Accident: ಹಳಿ ತಪ್ಪಿದ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ರೈಲು.. ಆಮೇಲೇನಾಯ್ತು? ಶಾಕಿಂಗ್ ವಿಡಿಯೋ!

author-image
Gopal Kulkarni
Updated On
Train Accident: ಹಳಿ ತಪ್ಪಿದ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ರೈಲು.. ಆಮೇಲೇನಾಯ್ತು? ಶಾಕಿಂಗ್ ವಿಡಿಯೋ!
Advertisment
  • ಪ್ರಯಾಣಿಕರಿಗೆ ಕ್ಷಣ ಕಾಲ ಆತಂಕ ಸೃಷ್ಟಿಸಿದ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್
  • ಹಳಿಯಲ್ಲಿ ಸಾಗುತ್ತಿದ್ದ ವೇಳೆಯೇ ಬೇರ್ಪಟ್ಟ ಇಂಜಿನ್ ಮತ್ತು ಬೋಗಿಗಳು
  • ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ನಿಲ್ದಾಣಕ್ಕೆ ತಲುಪುವ ಮುನ್ನವೇ ಅನಾಹುತ

ಪಾಟ್ನಾ: ಬಿಹಾರದಲ್ಲಿ ಭೀಕರ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಖದಿರಾಮ್ ಬೋಸ್ ಪುಸಾ ರೈಲ್ವೆ ನಿಲ್ದಾಣದ ಕೂಗಳತೆಯ ದೂರದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​ ನಾಟಕೀಯವೆನಿಸುವಂತ ಅಪಘಾತಕ್ಕೆ ಕಾರಣವಾಗಿದೆ. ಎಕ್ಸ್‌ಪ್ರೆಸ್‌ ರೈಲು ನಿಲ್ದಾಣಕ್ಕೆ ತಲುಪುವ ಮುನ್ನವೇ ಬೋಗಿಯಿಂದ ಪ್ರತ್ಯೇಕಗೊಂಡ ಇಂಜಿನ್​ ಬೇರೆ ದಿಕ್ಕಿನತ್ತ ಸಾಗಿದೆ. ಹಳಿ ತಪ್ಪಿದ ಇಂಜಿನ್ ಬೋಗಿಗಳಿಗಿಂತ ಮುಂದೆ ಸಾಗಿದೆ. ಈ ಹಳಿ ತಪ್ಪಿದ ದುರಂತವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ನೋಡಿದವರು ಬೆಚ್ಚಿ ಬಿದ್ದಿದ್ದಾರೆ.


">July 29, 2024

ಇದನ್ನೂ ಓದಿ:ಖಾಸಗಿ ಶಾಲಾ ಬಸ್ ಅಪಘಾತ.. ಸ್ಕೂಲ್‌ಗೆ ಹೊರಟಿದ್ದ 15 ಮಕ್ಕಳು ಆಸ್ಪತ್ರೆಗೆ ದಾಖಲು; ಏನಾಯ್ತು?

ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾದುರಂತ

ದೇಶದಲ್ಲಿ ಅತಿ ವೇಗವಾಗಿ ಓಡುವ ರೈಲುಗಳಲ್ಲಿ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ಕೂಡ ಒಂದು. ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ದರ್ಬಹಂಗಾದಿಂದ ದೆಹಲಿಗೆ ಹೊರಟಿತ್ತು. ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ಖುದಿರಾಮ್ ಬೋಸ್​ ರೇಲ್ವೆ ಸ್ಟೇಷನ್​ ಬಳಿ ಬೋಗಿ ಹಾಗೂ ಇಂಜಿನ್​ಗಳು ಬೇರ್ಪಟ್ಟಿವೆ. ಕ್ಷಣಕಾಲ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಗೂ ರೇಲ್ವೆ ಸಿಬ್ಬಂದಿಯ ಪ್ರಾಣ ಹೋಗಿ ಬಂದಂತಾಗಿದೆ. ಘಟನೆಗೆ ಪ್ರಮುಖ ಕಾರಣ ಮ್ಯಾಕಿನಿಕಲ್ ಫ್ಯೆಲ್ಯೂವರ್ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಬೋಗಿ ಹಾಗೂ ಇಂಜಿನ್ ಬೇರ್ಪಟ್ಟಿದ್ದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ, ಆದರೂ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿದೆ. ಬೇರ್ಪಟ್ಟಿದ್ದ ಇಂಜಿನ್ ಹಾಗೂ ಬೋಗಿಗಳನ್ನು ಪುನಃ ಜೋಡಿಸಲಾಗಿದೆ. ಇತ್ತೀಚೆಗೆ ರೈಲ್ವೆ ದುರಂತಗಳು ದೇಶದಲ್ಲಿ ಹೆಚ್ಚಾಗಿ ಆಗುತ್ತಿರುವುದರಿಂದ ಈ ಒಂದು ಘಟನೆ ಕೆಲ ಕ್ಷಣ ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್ ಭೀಕರ ದುರಂತವೊಂದು ತಪ್ಪಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment