Advertisment

ಸ್ಯಾಮ್​ಸಂಗ್​ ಕಡೆಯಿಂದ ಬಿಗ್ ಆಫರ್​​​; ​8.22 ಕೋಟಿ ರೂಪಾಯಿ ಗೆಲ್ಲುವ ಅವಕಾಶ! ಮಿಸ್​ ಮಾಡ್ಬೇಡಿ

author-image
AS Harshith
Updated On
ಸ್ಯಾಮ್​ಸಂಗ್​ ಕಡೆಯಿಂದ ಬಿಗ್ ಆಫರ್​​​; ​8.22 ಕೋಟಿ ರೂಪಾಯಿ ಗೆಲ್ಲುವ ಅವಕಾಶ! ಮಿಸ್​ ಮಾಡ್ಬೇಡಿ
Advertisment
  • ಸೌತ್​ ಕೊರಿಯಾ ಮೂಲದ ಜನಪ್ರಿಯ ಕಂಪನಿ ಸ್ಯಾಮ್​ಸಂಗ್
  • ಮೊಬೈಲ್​ ಸೆಕ್ಯುರಿಟಿ ವಿಚಾರವಾಗಿ ಕಂಪನಿಯ ಹೀಗೊಂದು ನಿರ್ಣಯ
  • ಬಗ್​ ಬೌಂಟಿ ಕಾರ್ಯಕ್ರಮ ಬಿಗ್​​ ಆಫರ್​ ತೆರೆದಿಟ್ಟ ಸ್ಯಾಮ್​​​ಸಂಗ್​ ಕಂಪನಿ

ಜನಪ್ರಿಯ ಕಂಪನಿಯಾದ ಸ್ಯಾಮ್​​ಸಂಗ್​​ ಹೊಸ ಆಫರ್​ ತೆರೆದಿಟ್ಟಿದೆ. ಇದರ ಮೂಲಕ 8.22 ಕೋಟಿ ರೂಪಾಯಿ ಗೆಲ್ಲಬಹುದಾಗಿದೆ. ಯಾರು ಬೇಕಾದರೂ ಈ ಅವಕಾಶವನ್ನು ಪಡೆಯಬಹುದಾಗಿದೆ.

Advertisment

ಸ್ಯಾಮ್​ಸಂಗ್​​ ಸೌತ್​ ಕೊರಿಯಾದ ಜನಪ್ರಿಯ ಕಂಪನಿ. ಇದೀಗ ಈ ಕಂಪನಿ ಮೊಬೈಲ್​ ಸೆಕ್ಯುರಿಟಿ ವಿಚಾರವಾಗಿ ಸಾಫ್ಟ್​​ವೇರ್​ನಲ್ಲಿ ಸಮಸ್ಯೆಯನ್ನು ಹುಡುಕಲು ಬಯಸುತ್ತಿದೆ. ಅದಕ್ಕಾಗಿ ಸಾಮಾನ್ಯರಿಗೆ ಮತ್ತು ನುರಿತರಿಗೆ ಸಾಫ್ಟ್​​ವೇರ್​ನಲ್ಲಿ ಸಮಸ್ಯೆ ಕಂಡುಹಿಡಿದರೆ 1 ಮಿಲಿಯನ್​ ಬಹುಮಾನವಾಗಿ ಪಡೆಯಬಹುದು ಎಂದು ತಿಳಿಸಿದೆ.

ಸ್ಯಾಮ್​​​ಸಂಗ್​​ ಬ್ಲಾಗ್​ ಪೋಸ್ಟ್​ನಲ್ಲಿ ತಿಳಿಸಿರುವಂತೆ, ಭದ್ರತಾ ಸಂಶೋಧಕರು ಮತ್ತು ಇತರರು ತಮ್ಮ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್​​ ಮತ್ತು ಎಕ್ಸಿಕ್ಯೂಶನ್​ಗೆ ಸಂಬಂಧಿಸಿದಂತೆ ಭದ್ರತಾ ನ್ಯೂನತೆಗಳು ಮತ್ತು ದುರ್ಬಲತೆಗಳಿದ್ದರೆ ಕಂಡು ಹಿಡಿಯಿರಿ ಎಂದು ತಿಳಿಸಿದೆ. ಆ ಮೂಲಕ ಹಣವನ್ನು ಪಡೆಯಿರಿ ಎಂದು ಹೇಳಿದೆ.

ಇದನ್ನೂ ಓದಿ: ಇನ್​​​ಸ್ಟಾಗ್ರಾಂನಲ್ಲಿ ಸದಾ ಪೋಸ್ಟ್​ ಮಾಡ್ತೀರಾ? ಹಾಗಿದ್ರೆ ಈ ಹೊಸ ಫೀಚರ್​ ಬಗ್ಗೆ ಗೊತ್ತಾ? ಸಖತ್ತಾಗಿದೆ ಕಣ್ರಿ

Advertisment

ನ್ಯೂನತೆಯನ್ನು ಕಂಡುಹಿಡಿಯುವುದರ ಜೊತೆಗೆ ಡೇಟಾ ಹೊರತೆಗೆಯುವುದು, ಸಾಧನಗಳನ್ನು ಅನ್​ಲಾಕ್​​ ಮಾಡುವುದು, ಅನಿಯಂತ್ರಿಕ ಅಪ್ಲಿಕೇಶನ್​​ ಸ್ಥಾಪಿಸುವುದು. ಸಾಧನಗಳ ಸುರಕ್ಷತೆಯನ್ನು ಬೈಪಾಸ್​ ಮಾಡುವ ವಿಚಾರಗಳನ್ನು ಒಳಗೊಂಡು ಕೆಲಸ ಮಾಡಬೇಕಿದೆ ಎಂದು ಸ್ಯಾಮ್​​ಸಂಗ್​​ ತಿಳಿಸಿದೆ.

ಇದನ್ನೂ ಓದಿ: ಆರ್​ಸಿಬಿ ಫ್ಯಾನ್ಸ್​ಗೆ ಬೇಸರದ ಸುದ್ದಿ! ಈ ಮೂವರನ್ನು ತಂಡದಿಂದ ಕೈ ಬಿಡೋದು ಪಕ್ಕನಾ?

ಕಂಪನಿಯು ಬಗ್​ ಬೌಂಟಿ ಕಾರ್ಯಕ್ರಮ ಮೂಲಕ ಈ ಆಫರ್​ ಅನ್ನು ತೆರೆದಿಟ್ಟಿದೆ. ವಿಜೇತರಿಗೆ 8.22 ಕೋಟಿ ರೂಪಾಯಿ ಸಿಗಲಿದೆ. ಅಂದಹಾಗೆಯೇ ವ್ಯಕ್ತಿಯೊಬ್ಬರು ನಾಕ್ಸ್​ ವಾಲ್ಟ್​​ ಅನ್ನು ಹ್ಯಾಕ್​ ಮಾಡುವ ಮೂಲಕ ಸ್ಯಾಮ್​​ಸಂಗ್​ ಹಾರ್ಡ್​ವೇರ್​​ ಭದ್ರತಾ ವ್ಯವಸ್ಥೆಯ ರಿಮೋಡ್​ ಕೋಡ್​ ಸಮಸ್ಯೆಯನ್ನು ಬಹಿರಂಗಪಡಿಸಿದ್ದರು. ಆ ಮೂಲಕ 8.2 ಕೋಟಿ ರೂಪಾಯಿ ಬಹುಮಾನವಾಗಿ ಪಡೆದಿದ್ದರು.

Advertisment

ಇದನ್ನೂ ಓದಿ: ಇಂದು ನಿರ್ಧಾರವಾಗಲಿದೆ ವಿನೇಶ್ ಪೋಗಟ್​​ ಭವಿಷ್ಯ.. ಬೆಳ್ಳಿ ಪದಕ ಸಿಗೋದು ಮಾತ್ರ..

ಸ್ಯಾಮ್​ಸಂಗ್​​ ಸಾಧನಗಳನ್ನು ಅನ್​​ಲಾಕ್​​ ಮಾಡಲು ಬಯಸುವವರಿಗೆ ಕಂಪನಿ 1 ಕೋಟಿ ಬಹುಮಾನ ನೀಡಲಿದೆ. ಅನ್​ಲಾಕ್​ ಮಾಡದೆ ಬಳಕೆದಾರರ ಡೇಟಾವನ್ನು ಹೊರತೆಗೆದರೆ 2 ಕೋಟಿ ಬಹುಮಾನವಾಗಿ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment