Advertisment

ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಮೇಲೆ ಅನಾಚಾರ; ಮಲ್ಲು ಅಲಿಯಾಸ್ ಹಂದಿಮಲ್ಲು ಕೈವಾಡ?

author-image
admin
Updated On
ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಮೇಲೆ ಅನಾಚಾರ; ಮಲ್ಲು ಅಲಿಯಾಸ್ ಹಂದಿಮಲ್ಲು ಕೈವಾಡ?
Advertisment
  • ತುಂಗಾಭದ್ರಾ ಎಡದಂಡೆ ಕಾಲುವೆ ಬಳಿ ಗಿಟಾರ್ ಬಾರಿಸ್ತಿದ್ದ ಪ್ರವಾಸಿಗರು
  • ಅಮೆರಿಕಾ ವ್ಯಕ್ತಿ, ಇಸ್ರೇಲ್​ ಮಹಿಳೆ, ಒಡಿಶಾ, ಮಹಾರಾಷ್ಟ್ರದ ಇಬ್ಬರು
  • ಮಹಿಳೆಯರು ಕೂಗಾಡುತ್ತಿದ್ದಂತೆ ಪರಾರಿಯಾದ ದುಷ್ಕರ್ಮಿಗಳ ತಂಡ

ಇದು ಕರ್ನಾಟಕದ ಗೋವಾ ಅಂತಲೇ ಫೇಮಸ್​. ವಿದೇಶಿಗರ ಹಾಟ್ ಸ್ಪಾಟ್ ಅಂತಲೂ ಪ್ರಸಿದ್ಧಿ. ಇಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಲು ದೇಶ, ಅದ್ರಲ್ಲೂ ವಿದೇಶಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಹೀಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರ ಮೇಲೆ ನಡೆಯಬಾರದ ಕೃತ್ಯ ನಡೆದು ಹೋಗಿದೆ. ರಾಜ್ಯದ ಮಾನ ಮಾರ್ಯದೆಯನ್ನ ಹರಾಜು ಹಾಕಿದ್ದ ದುಷ್ಕರ್ಮಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Advertisment

ಅತಿಥಿ ದೇವೋ ಭವ ಅನ್ನೋ ದೇಶ ನಮ್ಮದು. ಆದರೆ ಕೊಪ್ಪಳ ಪ್ರವಾಸಿ ತಾಣದಲ್ಲಿ ದುಷ್ಕರ್ಮಿಗಳು ಮಾಡಿದ ನೀಚಕೃತ್ಯಕ್ಕೆ ಪ್ರವಾಸಿಗರು ಬೆಚ್ಚಿ ಬಿದ್ದಿದ್ದು, ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ.

publive-image

ವಿದೇಶಿ ಮಹಿಳೆ, ಹೋಮ್ ಸ್ಟೇ ಮಾಲಕಿ ಮೇಲೆ ಅತ್ಯಾಚಾರ!
ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಓರ್ವ ಪ್ರವಾಸಿಗನ ಶವ ಪತ್ತೆ
ಕಳೆದ ಮಾರ್ಚ್​ 6ರಂದು ಅಂದ್ರೆ 2 ದಿನದ ಹಿಂದಷ್ಟೇ ವಿದೇಶಿಗರ ಹಾಟ್ ಸ್ಪಾಟ್ ಅಂತಲೇ ಫೇಮಸ್​ ಆಗಿರೋ ಕೊಪ್ಪಳದ ಸಾಣಾಪುರದ ಬಳಿ ದುಷ್ಕರ್ಮಿಗಳು ಹೇಯ ಕೃತ್ಯ ನಡೆಸಿದ್ದಾರೆ. ದೇಶ ಮತ್ತು ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮೂವರು ಪ್ರವಾಸಿಗರನ್ನ ಕಾಲುವೆಗೆ ತಳ್ಳಿದ್ರು.

ಇಷ್ಟಕ್ಕೆ ನಿಲ್ಲದ ಕಿಡಿಗೇಡಿಗಳ ಅಟ್ಟಹಾಸಕ್ಕೆ ಇಸ್ರೇಲ್​ ಮಹಿಳೆ ಮತ್ತು ಹೋಮ್​ ಸ್ಟೇ ಮಾಲಕಿ ನಲುಗಿ ಹೋಗಿದ್ದು, ಇಬ್ಬರ ಮೇಲೆ ಕೀಚಕರು ಅತ್ಯಾಚಾರ ಎಸಗಿ ಎಸ್ಕೇಪ್​ ಆಗಿದ್ದಾರೆ. ಅದೃಷ್ಟವಶಾತ್​ ಮಹಾರಾಷ್ಟ್ರ ಮೂಲದ ಪಂಕಜ್, ಇಸ್ರೇಲ್ ಮ‌ೂಲದ ಗ್ರೇಗರಿ ಈಜುಕೊಂಡು ತಡ ಸೇರಿದ್ರೆ, ಒರಿಸ್ಸಾ‌‌ ಮೂಲದ ಬೀ ಬಾಸ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಘಟನಾ ಸ್ಥಳದಿಂದ 2 ಕಿಲೋ ಮೀಟರ್ ದೂರದಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

Advertisment

publive-image

ಪ್ರವಾಸಿಗರ ಮೇಲೆ ಪಾಪದ ಕೃತ್ಯ!
ಮಾರ್ಚ್​ 6ರಂದು ಪ್ರವಾಸಿಗರು ತುಂಗಾಭದ್ರಾ ಎಡದಂಡೆ ಕಾಲುವೆ ಬಳಿ ಗಿಟಾರ್ ಬಾರಿಸುತ್ತಿದ್ದರು. ಅಮೆರಿಕಾ ವ್ಯಕ್ತಿ, ಇಸ್ರೇಲ್​ ಮಹಿಳೆ, ಒರಿಸ್ಸಾ, ಮಹಾರಾಷ್ಟ್ರದ ಇಬ್ಬರು ಹೋಮ್​ ಸ್ಟೇ ಮಾಲಕಿ ಜೊತೆ ಕಾಲುವೆ ಬಳಿ ಗಿಟಾರ್ ಬಾರಿಸುತ್ತಿದ್ರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ 3 ಅಪರಿಚಿತ ವ್ಯಕ್ತಿಗಳು ಬಂದಿದ್ದು, ಇಲ್ಲಸಲ್ಲದ ವಿಚಾರಕ್ಕೆ ಮೂವರು ಜಗಳ ತೆಗೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಂತರ 3 ಜನ ಪುರುಷರ ಮೇಲೆ ಹಲ್ಲೆ ನಡೆಸಿರೋ ದುಷ್ಕರ್ಮಿಗಳು, ಮೂವರನ್ನು ಕಾಲುವೆಗೆ ತಳ್ಳಿದ್ರು. ಬಳಿಕ ಇಸ್ರೇಲ್​ ಮಹಿಳೆ, ಹೋಮ್​ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯರು ಕೂಗಾಡುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಇಬ್ಬರು ಪ್ರವಾಸಿಗರು ಈಜಿ ದಡ ಸೇರಿದ್ರೆ, ಓರ್ವ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ನಂತರ ಸ್ಥಳೀಯರ ಸಹಾಯದಿಂದ ಆ್ಯಂಬುಲೆನ್ಸ್​ ಮೂಲಕ ನಾಲ್ವರನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು.

publive-image

ಬೆಳಗ್ಗೆ ಘಟನಾ ಸ್ಥಳಕ್ಕೆ ನಗರಠಾಣೆ ಪಿಐ ಪ್ರಕಾಶ ಮಾಳೆ, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಸ್ಥಳದಲ್ಲಿ ಸ್ಕೂಟಿ, ಹ್ಯಾಂಡ್ ಬ್ಯಾಗ್, ಕ್ಯಾಮೆರ್ ಪತ್ತೆಯಾಗಿತ್ತು. ಮುರಿದು ಬಿದ್ದ ಗಿಟಾರ್, ಕೈ ವಸ್ತ್ರ, ಸೇದಿದ ಸಿಗರೇಟ್, ರಕ್ತದ ಕಲೆ ಬಟ್ಟೆ ಪತ್ತೆಯಾಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕಿದ್ರು.

ನೀಚಕೃತ್ಯ ಎಸಗಿದ್ದ ಇಬ್ಬರನ್ನ ಬಂಧಿಸಿದ ಪೊಲೀಸರು
ಮಲ್ಲು ಅಲಿಯಾಸ್ ಹಂದಿಮಲ್ಲು, ಚೇತನ್ ಸಾಯಿ ಲಾಕ್​!
ವಿದೇಶಿ ಮಹಿಳೆ ನೀಡಿದ ಅತ್ಯಾಚಾರ ದೂರಿನಡಿ ತನಿಖೆ ಚುರುಕುಗೊಳಿಸಿದ್ದ ಗಂಗಾವತಿ ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ರು. ಸದ್ಯ ಗಂಗಾವತಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಿದ್ದಿದ್ದ ಕೆಲ ವಸ್ತುಗಳನ್ನ ಆಧರಿಸಿ ಗಂಗಾವತಿ ಸಾಯಿನಗರ‌ ಮೂಲದ ಮಲ್ಲು ಅಲಿಯಾಸ್​ ಹಂದಿಮಲ್ಲು, ಚೇತನ್​ ಸಾಯಿ ಎಂಬಾತನನ್ನ ಅರೆಸ್ಟ್​ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ: ಕೋಮಾದಲ್ಲಿದ್ದವನು ಆಸ್ಪತ್ರೆಯ ಬಿಲ್​ ನೋಡಿ ಎದ್ದು ಬಂದು ಪ್ರತಿಭಟನೆ.. ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ! 

ದೇಶದ ಅತಿಥಿಗಳ ಮೇಲೆ ನಡೆಯಬಾರದ ಕೃತ್ಯ ನಡೆದಿದೆ. ಪ್ರವಾಸಿಗರಿಗೆ ರಾಜ್ಯದಲ್ಲಿನ ಪ್ರವಾಸಿ ತಾಣಗಳು ಎಷ್ಟು ಸೇಫ್​ ಅನ್ನೋ ಪ್ರಶ್ನೆಯೂ ಹುಟ್ಟುಕೊಂಡಿದೆ. ಸದ್ಯ ಇಬ್ಬರು ಆರೋಪಿಗಳನ್ನ ಹೆಡೆಮುರಿಕಟ್ಟಿರೋ ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

publive-image

ಸಿಎಂ ಸಿದ್ದರಾಮಯ್ಯ ಖಂಡನೆ!
ಪ್ರವಾಸಿಗರ ಮೇಲೆ ನಡೆದ ಪಾಪದ ಕೃತ್ಯವನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್‌ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ. ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Advertisment

ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಅದೇನೆ ಇರ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವನ ಜೀವವೇ ಹೋಗಿದ್ದು ಮಾತ್ರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment