newsfirstkannada.com

ಅಭಿ​ ನೆಕ್ಸ್ಟ್​ ಟಾರ್ಗೆಟ್​ ಬಲು ರೋಚಕ.. ರಾಜಮೌಳಿಯ RRR ಕಾಡಿಗೆ ಹೋಗ್ತಾರೆ ಅಭಿಷೇಕ್..!

Share :

Published June 13, 2023 at 9:18am

Update June 13, 2023 at 9:23am

  ಏನಿದು ಅಭಿಷೇಕ್ ಫಾರೆಸ್ಟ್ ಸ್ಟೋರಿ..?

  ಜೂನ್ 5 ರಂದು ಮದುವೆ ಆಗಿರುವ ಅಭಿ

  ಮದುವೆ, ರಿಸಪ್ಷನ್, ಪಾರ್ಟಿ ಅಂತ ಬಿಂದಾಸ್

ಮದುವೆ, ರಿಸಪ್ಷನ್.. ಸಂಗೀತ್ ಪಾರ್ಟಿ ಅಂತ ಸಖತ್ ಬಿಂದಾಸ್​ ಆಗಿದ್ದ ಅಭಿಷೇಕ್​ ಅವರ ನೆಕ್ಸ್ಟ್​ ಟಾರ್ಗೆಟ್​ ಬಲು ರೋಚಕವಾಗಿದೆ. ಬರೀ ರೋಚಕ ಅಲ್ಲ ಬಹುಶಃ ರಣ ರೋಚಕವಾದ್ರು ಅಚ್ಚರಿ ಇಲ್ಲ. ಹೌದು, ರಾಜಮೌಳಿನ ಹಾದಿನ ಕಂಡ್ಕೊಂಡಿರೋ ರೆಬೆಲ್ ಸ್ಟಾರ್​ ತ್ರಿಬಲ್ ಆರ್ ಕಾಡಿಗೆ ಪ್ರಯಾಣ ಮಾಡೋ ಸಾಧ್ಯತೆ ಇದೆಯಂತೆ.

ಅಭಿಷೇಕ್ ಅಂಬರೀಶ್-ಅವಿವಾ ಮದುವೆ ಅರಮನೆ ಮೈದಾನದಲ್ಲಿ ಬಹಳ ಅದ್ಧೂರಿಯಿಂದಾಯ್ತು. ರಿಸಪ್ಷನ್ ಕೂಡ ಅದಕ್ಕಿಂತ ಗ್ರ್ಯಾಂಡ್​ ಆಗಿಯೇ ಆಯ್ತು. ಮದುವೆ, ಆರತಕ್ಷತೆ ಬೆನ್ನಲ್ಲೇ ಸಂಗೀತ್ ಪಾರ್ಟಿ ಆಯೋಜನೆ ಮಾಡಿದ್ದು, ಈ ಸಂಭ್ರಮದಲ್ಲಿ ಇಡೀ ಸ್ಯಾಂಡಲ್​ವುಡ್​ ಭಾಗಿ ಕುಣಿದು ಕುಪ್ಪಳಿಸಿತ್ತು. ಕಳೆದ ಹದಿನೈದು ದಿನದಿಂದ ಮದುವೆ ಸಂಭ್ರಮದಲ್ಲಿ ಮುಳುಗಿಹೋಗಿದ್ದ ಅಭಿಷೇಕ್ ಈಗ ಪರ್ಸನಲ್​ ಲೈಫಿಂದ ಪ್ರೊಫೆಷನಲ್​ ಲೈಫ್​ ಕಡೆ ಗಮನ ಹರಿಸೋಕೆ ಮುಂದಾಗಿದ್ದಾರೆ.

ಪ್ರೊಫೆಷನಲ್ ಲೈಫಾ? ಅಂಬರೀಶ್​ ಅವರ ಮಗ, ಇಷ್ಟು ಅದ್ಧೂರಿಯಾಗಿ ಮದುವೆಯಾಗಿ ಇಷ್ಟು ಬೇಗ ಸಿನಿಮಾ ಕೆಲಸ ಸ್ಟಾರ್ಟ್ ಮಾಡ್ತಾರಾ? ಹಾಗಾದ್ರೆ ಹನಿಮೂನ್​ಗೆ ಅಂತ ಫಾರಿನ್ ಟ್ರಿಪ್ ಏನೂ ಹೋಗಲ್ವಾ ಅಂತ ಕೇಳಿದ್ರೆ ಸದ್ಯಕ್ಕೆ ನೋ.. ಹೌದು, ಸದ್ಯಕ್ಕೆ ಅಭಿಷೇಕ್ ಅವರ ಶೆಡ್ಯೂಲ್ ತುಂಬಾನೇ ಬ್ಯುಸಿ ಇದೆ.. ಮದುವೆ ಮುಗಿತಿದ್ದಂತೆ ಕಮಿಟ್​ಮೆಂಟ್​ಗಳನ್ನ ಮುಗಿಸಬೇಕಾದ ಜವಾಬ್ದಾರಿ ಇದೆ. ಹಾಗಾಗಿ, ಸದ್ಯಕ್ಕೆ ನೋ ಹನಿಮೂನ್ ಟ್ರಿಪ್ ಎನ್ನಲಾಗ್ತಿದೆ.

ಜೂನ್ 16ಕ್ಕೆ ಮಂಡ್ಯದಲ್ಲಿ ಬೀಗರ ಊಟ!

ಬೆಂಗಳೂರಲ್ಲಿ ಮದುವೆ ಮತ್ತು ಆರತಕ್ಷತೆ, ಸಂಗೀತ್ ಪಾರ್ಟಿ ಮುಗಿಸಿರೋ ಅಭಿಷೇಕ್ ಅಂಬರೀಶ್​​, ಜೂನ್ 16ಕ್ಕೆ ಮಂಡ್ಯದಲ್ಲಿ ಬೀಗರ ಔತಣ ಆಯೋಜಿಸಲಿದೆ. ಅಂಬರೀಶ್ ಅಭಿಮಾನಿಗಳು ಹಾಗೂ ಮಂಡ್ಯ ಜನರಿಗಾಗಿ ನಾನ್​ವೆಜ್​ ಊಟ ಹಾಕಿಸೋ ಪ್ಲಾನ್ ಮಾಡಿರೋ ಯಂಗ್ ರೆಬೆಲ್ ಸ್ಟಾರ್​ ಜೂನ್ 16ರವರೆಗೂ ಬೇರೆ ಯಾವುದೇ ಕೆಲಸಕ್ಕೂ ಹಾಜರ್ ಆಗಲ್ಲ. 16ನೇ ತಾರೀಕು ಮುಗಿತಿದ್ದಂತೆ ಸಿನಿಮಾ ಕೆಲಸಗಳನ್ನ ಪುನರ್​ ಆರಂಭಿಸಲಿದ್ದಾರಂತೆ.

ದುನಿಯಾ ಸೂರಿ ನಿರ್ದೇಶನದಲ್ಲಿ ತಯಾರಾಗಿರುವ ಬ್ಯಾಡ್​ ಮ್ಯಾನರ್ಸ್​ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಸದ್ಯ ಟೀಸರ್​ ಮೂಲಕ ಅಬ್ಬರಿಸ್ತಿರೋ ಬ್ಯಾಡ್​ ಮ್ಯಾನರ್ಸ್​ ಈ ತಿಂಗಳ ಅಂತ್ಯಕ್ಕೆ ಅಥವಾ ಮುಂದಿನ ತಿಂಗಳ ಆರಂಭದಲ್ಲೇ ತೆರೆಗೆ ಅಪ್ಪಳಿಸೋಕೆ ಸಜ್ಜಾಗ್ತಿದೆ. ಹಾಗಾಗಿ ಅಭಿಷೇಕ್​ಗೆ ಹೆಚ್ಚು ಸಮಯವಿಲ್ಲ. ಬ್ಯಾಡ್​ಮ್ಯಾನರ್ಸ್​ ಎಂಟ್ರಿಗೆ ಹತ್ ಇಪ್ಪತ್ ದಿನ ಬಾಕಿ ಇರೋದ್ರಿಂದ ಪ್ರಮೋಷನ್ ಕೆಲಸ ಸ್ಟಾರ್ಟ್ ಮಾಡಬೇಕಿದೆ.

ಆಗಸ್ಟ್​ನಿಂದ ಶುರುವಾಗುತ್ತೆ ದುಬಾರಿ ಸಿನಿಮಾ

ಬ್ಯಾಡ್​ಮ್ಯಾನರ್ಸ್​ ಪ್ರಮೋಷನ್​ ಮುಗಿತಿದ್ದಂತೆ ಹೆಬ್ಬುಲಿ ಕೃಷ್ಣ ಡೈರೆಕ್ಷನ್​ನಲ್ಲಿ ಕಾಳಿ ಚಿತ್ರ ಆರಂಭಿಸಲಿದ್ದಾರೆ ಅಭಿಷೇಕ್. ಕಾಳಿ ಚಿತ್ರದ ಶೂಟಿಂಗ್​ ಗ್ಯಾಪ್​ನಲ್ಲಿ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಚಿತ್ರದ ಶೂಟಿಂಗ್​ ಸಹ ಟೇಕ್ ಆಫ್ ಮಾಡಲಿದ್ದಾರಂತೆ. ಸುಮಾರು 40 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗ್ತಿದ್ದು, ಅಭಿ ಪಾಲಿಗೆ ಇದು ದೊಡ್ಡ ಸಿನಿಮಾ ಆಗಲಿದೆಯಂತೆ. ಚಿತ್ರದ ಬಹುಮುಖ್ಯ ಸನ್ನಿವೇಶವನ್ನ ವಿಶಾಖಪಟ್ಟಣದಲ್ಲಿರುವ ಕಾಡಿನಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಿದ್ದು, ಇದೇ ಕಾಡಿನಲ್ಲಿ ತ್ರಿಬಲ್ ಆರ್ ಚಿತ್ರದ ಚಿತ್ರೀಕರಣ ಆಗಿತ್ತು ಅನ್ನೋದು ವಿಶೇಷ. ಎನ್​ಟಿಆರ್ ಇಂಟ್ರೋಡಕ್ಷನ್ ಸೀನ್​​ ಶೂಟ್ ಮಾಡಲಾಗಿದ್ದ ವೈಜಾಕ್ ಫಾರೆಸ್ಟ್​ನಲ್ಲಿ ಅಭಿಷೇಕ್​ ಚಿತ್ರದ ಆ್ಯಕ್ಷನ್ ಸೀನ್​ವೊಂದನ್ನ ಸೆರೆಹಿಡಿಯಲಿದ್ದಾರಂತೆ. ಇದು ಈ ಚಿತ್ರದ ಹೈಲೈಟ್​ ಎನ್ನಲಾಗ್ತಿದೆ.

ಅಭಿಷೇಕ್-ಮಹೇಶ್ ಕಾಂಬಿನೇಷನ್​ನ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದ್ರೆ ಫಸ್ಟ್​ ಲುಕ್ ಪೋಸ್ಟರ್​ ಹಾಗೂ ಮೋಷನ್​ ಪೋಸ್ಟರ್​​ವೊಂದು ಭಾರಿ ಹೈಪ್ ಕ್ರಿಯೇಟ್ ಮಾಡಿದೆ. ವಾರಿಯರ್​ ಲುಕ್​ನಲ್ಲಿ ಅಭಿಷೇಕ್​​ ಅಬ್ಬರಿಸಿದ್ದು, ಹಾಲಿವುಡ್​ ರೇಂಜ್​ಗೆ ಎಕ್ಸ್​ಪೆಕ್ಟೇಶನ್ ಹುಟ್ಟುಹಾಕಿದೆ. ಶೆಡ್ಯುಲ್ ಪ್ರಕಾರ ಬ್ಯಾಡ್​ಮ್ಯಾನರ್ ಆದ್ಮೇಲೆ ಕಾಳಿ ಚಿತ್ರವನ್ನೇ ಅಭಿಷೇಕ್ ಆರಂಭಿಸಬೇಕಿದೆ. ಅದನ್ನ ಶುರು ಮಾಡ್ತಾರೆ ಕೂಡ.. ಆದ್ರೆ, ಈ ಗ್ಯಾಪ್​ನಲ್ಲಿ ರಾಕ್ಲೈನ್​ ಚಿತ್ರದ ಬಹುಮುಖ್ಯ ಸೀನ್​​ವೊಂದನ್ನ ವೈಜಾಕ್ ಫಾರೆಸ್ಟ್​ನಲ್ಲಿ ಶೂಟ್ ಮಾಡಿ ಮುಗಿಸುವ ಟಾಸ್ಕ್​​ ಸಹ ಅಂಬಿ ಪುತ್ರನ ಮುಂದಿದೆ.

ಬಹುಕಾಲದ ಗೆಳತಿಯನ್ನ ಬಾಳ ಸಂಗಾತಿಯನ್ನಾಗಿ ಪಡೆದ ಅಭಿಷೇಕ್​ ಆ ಕಡೆ ಫ್ಯಾಮಿಲಿ ಕಮಿಟ್​ಮೆಂಟ್​ ಮುಗಿಸಿ, ಈ ಕಡೆ ಸಿನಿಮಾ ಕಮಿಟ್​ಮೆಂಟ್​ಗೂ ನ್ಯಾಯ ಕೊಡಬೇಕಿದೆ. ಹಾಗಾಗಿ ಇನ್ಮುಂದೆ ರೆಬೆಲ್ ಸ್ಟಾರ್ ಪುತ್ರ ಡಬಲ್ ಜವಾಬ್ದಾರಿ ಹೊರಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಭಿ​ ನೆಕ್ಸ್ಟ್​ ಟಾರ್ಗೆಟ್​ ಬಲು ರೋಚಕ.. ರಾಜಮೌಳಿಯ RRR ಕಾಡಿಗೆ ಹೋಗ್ತಾರೆ ಅಭಿಷೇಕ್..!

https://newsfirstlive.com/wp-content/uploads/2023/06/RRR.jpg

Load More