/newsfirstlive-kannada/media/post_attachments/wp-content/uploads/2025/04/Ajay-rao-yuddhakhanda.jpg)
ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಅವರು ತಮ್ಮ ಯುದ್ಧಕಾಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬಹು ನಿರೀಕ್ಷಿತ ಸಿನಿಮಾಗಾಗಿ ಅಜಯ್ ರಾವ್ ಅವರು BMW ಕಾರು ಮಾರಾಟ ಮಾಡಿದ್ದಾರೆ.
ಯುದ್ಧಕಾಂಡ ಸಿನಿಮಾಗೆ ನಿರ್ಮಾಪಕರಾಗಿರೋ ಅಜಯ್ ರಾವ್ ಅವರು ಸಿನಿಮಾಗೆ ಬಂಡವಾಳ ಕಡಿಮೆ ಆದಾಗ ತಮ್ಮ ಫೇವರಿಟ್ BMW ಕಾರನ್ನು ಮಾರಾಟ ಮಾಡಿದ್ದಾರೆ.
ಅಪ್ಪ BMW ಕಾರು ಮಾರಾಟ ಮಾಡಿರೋದಕ್ಕೆ ಅಜಯ್ ರಾವ್ ಪುತ್ರಿ ಚರಿಷ್ಮಾ ಕಣ್ಣೀರು ಹಾಕಿದ್ದಾರೆ.
ಈ BMW ಕಾರು ಅಜಯ್ ರಾವ್ ಅವರಿಗೆ ಎಷ್ಟು ಇಷ್ಟವೋ ಅವರ ಪುತ್ರಿ ಚರಿಷ್ಮಾಗೂ ಅದಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪ ಅದನ್ನು ಮಾರುವಾಗ ಕಾರಿನ ಬಳಿ ಹೋಗಿ ಇಲ್ಲ.. ಇಲ್ಲ ನನಗೆ ಇದು ಬೇಕು. ಕಾರನ್ನ ಬಿಟ್ಟು ನಾನು ಹೋಗೋದಿಲ್ಲ ಎಂದು ಹಠ ಮಾಡುತ್ತಾ ಅತ್ತಿದ್ದಾರೆ.
ಇದನ್ನೂ ಓದಿ: ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಪ್ರಥಮ.. ದ್ವಿತೀಯ PU ಟಾಪರ್ಸ್ ಯಾರು? ಇಲ್ಲಿದೆ ಪಟ್ಟಿ!
ಕಾರು ಮಾರಾಟದ ವೇಳೆ ನಟ ಅಜಯ್ ರಾವ್ ಅವರ ಪುತ್ರಿ ಕಣ್ಣೀರು ಹಾಕುತ್ತಿರುವ ದೃಶ್ಯ ನೋಡುಗರನ್ನು ಭಾವುಕರಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ