newsfirstkannada.com

BREAKING: ಹಿರಿಯ ನಟ, ನಿವೃತ್ತ IAS ಅಧಿಕಾರಿ ಕೆ. ಶಿವರಾಮ್​ ವಿಧಿವಶ

Share :

Published February 29, 2024 at 5:59pm

Update February 29, 2024 at 6:03pm

    ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಶಿವರಾಮ್​

    ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಕನ್ನಡದ ಹಿರಿಯ ನಟ ಶಿವರಾಮ್‌

    ನಿವೃತ್ತ ಸರ್ಕಾರಿ ಅಧಿಕಾರಿ, ರಾಜಕಾರಣಿ ಕೆ ಶಿವರಾಮ್​ ಇನ್ನಿಲ್ಲ

ಸ್ಯಾಂಡಲ್​ವುಡ್​ ನಟ, ರಾಜಕಾರಣಿ ಮತ್ತು ನಿವೃತ್ತ ಐಎಎಸ್​ ಅಧಿಕಾರಿ ಕೆ. ಶಿವರಾಮ್​ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ನಗರದ ಎಚ್ ಸಿ ಜಿ ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಮ್‌ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಶಿವರಾಮ್ ಸಾವು ಅವರ ಅಪಾರ ಅಭಿಮಾನಿಗಳಿಗೆ ನೋವು ತಂದಿದೆ.

ಶಿವರಾಮ್​ಗೆ ಏನಾಗಿತ್ತು?

71 ವರ್ಷದ ಶಿವರಾಮ್​ ಅವರು ಕಾರ್ಡಿಯಕ್ ಅರೆಸ್ಟ್​ ಆಗಿ ಆಸ್ಪತ್ರೆ ಸೇರಿದ್ದರು. ಆ ಬಳಿಕ ಅವರ ಬ್ರೈನ್ ಡೆಡ್ ಆಗಿದೆ. ಹೀಗಾಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ಸರ್ಕಾರಿ ಸೇವೆ, ಸಿನಿಮಾ ಕ್ಷೇತ್ರವಲ್ಲದೆ, ರಾಜಕೀಯದಲ್ಲೂ ಶಿವರಾಮ್​ ಗುರುತಿಸಿಕೊಂಡಿದ್ದರು. 9ಕ್ಕೂ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ರಾಜಕೀಯಕ್ಕೂ ಧುಮುಕಿ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್​ ಆಕ್ಷಾಂಕಿ ಎಂದು ಹೇಳಲಾಗಿತ್ತು. ಆದರೆ ಇಂದು ವಿಧಿಯ ಕ್ರೂರಲೀಲೆಗೆ ಬಲಿಯಾಗಿದ್ದಾರೆ. ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಹಿರಿಯ ನಟ, ನಿವೃತ್ತ IAS ಅಧಿಕಾರಿ ಕೆ. ಶಿವರಾಮ್​ ವಿಧಿವಶ

https://newsfirstlive.com/wp-content/uploads/2024/02/Shivaram-13.jpg

Load More