newsfirstkannada.com

Breaking: ಹೃದಯಾಘಾತ.. ಬಾನಲ್ಲೆ ಮಧುಚಂದ್ರಕೆ ನಟ ಕೆ. ಶಿವರಾಮ್​ ಆಸ್ಪತ್ರೆಗೆ ದಾಖಲು 

Share :

Published February 28, 2024 at 3:06pm

Update February 28, 2024 at 3:23pm

  ಐಎಎಸ್​ ಅಧಿಕಾರಿಯಾಗಿದ್ದ ಕೆ ಶಿವರಾಮ್ ಆಸ್ಪತ್ರೆಗೆ ದಾಖಲು​

  ಬಾನಲ್ಲೆ ಮಧುಚಂದ್ರಕೆ ‘ವಸಂತ ಕಾವ್ಯ’ ಚಿತ್ರದ ನಟನಿಗೆ ಅನಾರೋಗ್ಯ

  ಬಿಜೆಪಿ ನಾಯಕನ ಸ್ಥಿತಿ ಚಿಂತಾಜನಕ ಅನ್ನೋ ಮಾಹಿತಿ

ಬೆಂಗಳೂರು: ಖ್ಯಾತ ನಟ ಕೆ. ಶಿವರಾಮ್ ಗೆ ಅನಾರೋಗ್ಯ ಹಿನ್ನೆಲೆ ನಗರದ ಎಚ್ ಸಿ ಜಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ. ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸದ್ಯ ಶಿವರಾಮ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಕೆ ಶಿವರಾಮ್​ ಐಎಎಸ್​ ಅಧಿಕಾರಿಯಾಗಿದ್ದರು. ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್​ ಪಾಸ್​ ಮಾಡಿದ ಕೀರ್ತಿ ಅವರಿಗಿತ್ತು. ಬಳಿಕ ಸಿನಿಮಾ ಕ್ಷೇತ್ರದ ಆಸಕ್ತಿಯಿಂದ ಸರ್ಕಾರಿ ಸೇವೆಗೆ ವಿದಾಯ ಹೇಳಿ ಸಿನಿಮಾದತ್ತ ಚಿತ್ತ ನೆಟ್ಟರು.

ಇವರು ‘ಬಾನಲ್ಲೆ ಮಧುಚಂದ್ರಕ್ಕೆ’, ‘ವಸಂತಕಾವ್ಯ’ ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡಿದ್ದರು. ಆ ಬಳಿಕ ರಾಜಕೀಯದತ್ತ ಒಲವು ತೋರಿಸಿ ರಾಜಕೀಯ ರಂಗಕ್ಕೆ ಪ್ರವೇಶ ಬೆಳೆಸಿದರು. ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಸದ್ಯ ಕೆ.ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಹೃದಯಾಘಾತ.. ಬಾನಲ್ಲೆ ಮಧುಚಂದ್ರಕೆ ನಟ ಕೆ. ಶಿವರಾಮ್​ ಆಸ್ಪತ್ರೆಗೆ ದಾಖಲು 

https://newsfirstlive.com/wp-content/uploads/2024/02/K-Shivaram.jpg

Load More