newsfirstkannada.com

ಲೇಟ್​​ ನೈಟ್​ ಪಾರ್ಟಿ ಕೇಸ್​​… ದರ್ಶನ್​ ಸೇರಿ ಹಲವರ ವಿಚಾರಣೆ; ಪೊಲೀಸ್ರು ಕೇಳಿದ ಪ್ರಶ್ನೆಗಳೇನು?

Share :

Published January 12, 2024 at 7:45pm

Update January 12, 2024 at 7:40pm

  ನಿನಾಸಂ ಸತೀಶ, ಡಾಲಿ, ಅಭಿಷೇಕ್ ಅಂಬರೀಶ್ ವಿಚಾರಣೆಗೆ ಹಾಜರು

  ಸೆಲೆಬ್ರಿಟಿಗಳ ಪಾರ್ಟಿ ವಿಚಾರವಾಗಿ ನೋಟಿಸ್ ಜಾರಿ ಮಾಡಿದ್ದ ಪೊಲೀಸ್​!

  ಸುಬ್ರಹ್ಮಣ್ಯನಗರ ಪೊಲೀಸರಿಂದ ಟಾಪ್ 8 ಸೆಲೆಬ್ರಿಟಿಗಳಿಗೆ ನೋಟಿಸ್

ಬೆಂಗಳೂರು: ಜೆಟ್ ಲಾಗ್ ಪಬ್​​ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು.

ಇದನ್ನು ಓದಿ: ಪಬ್​ನಲ್ಲಿ ಮುಂಜಾನೆವರೆಗೆ ಪಾರ್ಟಿ.. ದರ್ಶನ್, ರಾಕ್ ಲೈನ್, ಅಭಿಷೇಕ್​, ಚಿಕ್ಕಣ್ಣನಿಗೆ ನೋಟಿಸ್​ ನೀಡಲು ಮುಂದಾದ ಪೊಲೀಸರು

ಜೆಟ್ ಲಾಗ್ ಪಬ್​ನಲ್ಲಿ ಮುಂಜಾನೆವರೆಗೂ ಸೆಲೆಬ್ರಿಟಿಗಳ ಪಾರ್ಟಿ ಮಾಡಿರುವ ವಿಚಾರವಾಗಿ ಸುಬ್ರಮಣ್ಯನಗರ ಪೊಲೀಸರು ಮಾಲೀಕರು ಹಾಗೂ ಮ್ಯಾನೇಜರ್ ಮೇಲೆ ಎಫ್ಐಆರ್ ದಾಖಲಿಸಿದ್ದರು. ಜೊತೆಗೆ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್​ ಸೇರಿದಂತೆ ಕೆಲ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಲಾಗಿತ್ತು.

ಈಗ ಆ ನೋಟಿಸ್ ಬೆನ್ನಲ್ಲೇ ಇಂದು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಆ್ಯಂಡ್ ಟೀಮ್ ವಿಚಾರಣೆಗೆ ಹಾಜರಾಗಿದ್ದರು. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿನಾಸಂ ಸತೀಶ, ಡಾಲಿ ಧನಂಜಯ್ ಹಾಗೂ ಅಭಿಷೇಕ್ ಅಂಬರೀಶ್ ಕೂಡ ಪೊಲೀಸರ ವಿಚಾರಣೆಗೆ ಹೋಗಿದ್ದರು.

ಸುಬ್ರಹ್ಮಣ್ಯನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್, ಶ್ರೀರಾಂಪುರ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್‌ಪೆಕ್ಟರ್ ಜಗದೀಶ್ ಅವರಿಂದ ವಿಚಾರಣೆ ನಡೆಸಲಾಗಿದೆ. ಜನವರಿ 3ರಂದು ಒರಾಯನ್ ಮಾಲ್​​ನಲ್ಲಿರುವ ಜೆಟ್ ಲಾಗ್ ಪಬ್​ನಲ್ಲಿ ಕಾಟೇರ ಚಿತ್ರತಂಡ, ರಾತ್ರಿಯಿಂದ ಬೆಳಗಿನ ಜಾವದವರೆಗೂ ಸಕ್ಸಸ್ ಸೆಲಬ್ರೇಷನ್ ಮಾಡಿತ್ತು. ಇದೇ ವಿಚಾರವಾಗಿ ಸುಬ್ರಹ್ಮಣ್ಯನಗರ ಪೊಲೀಸ್ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡಲಾಗಿತ್ತು.

ಸೆಲೆಬ್ರಿಟಿಗಳಿಗೆ ಏನೆಲ್ಲ ಪ್ರಶ್ನೆಗಳನ್ನು ಕೇಳಲಾಯ್ತು?

ಪ್ರಶ್ನೆ-1: ನಿಮ್ಮ ಹೆಸರೇನು? ತಂದೆಯ ಹೆಸರೇನು?
ಪ್ರಶ್ನೆ-2: ಯಾವ ವಿಳಾಸದಲ್ಲಿ ವಾಸವಾಗಿದ್ದೀರಿ?
ಪ್ರಶ್ನೆ-3: ಯಾವ ವೃತ್ತಿಯನ್ನ ಮಾಡಿಕೊಂಡಿದ್ದೀರಿ?
ಪ್ರಶ್ನೆ-4: ಜನವರಿ 3ಕ್ಕೆ ಜೆಟ್ ಲ್ಯಾಗ್​ ಪಬ್​ಗೆ ಯಾಕೆ ಬಂದಿದ್ರಿ?
ಪ್ರಶ್ನೆ-5: ಎಷ್ಟೊತ್ತಿಗೆ, ಯಾರ ಜೊತೆ ಪಬ್​ಗೆ ಬಂದಿದ್ರಿ?
ಪ್ರಶ್ನೆ-6: ಜೆಟ್ ಲ್ಯಾಗ್ ಪಬ್​ಗೆ ಬರಲು ಯಾರಾದ್ರೂ ಆಹ್ವಾನಿಸಿದ್ರಾ?
ಪ್ರಶ್ನೆ-7: ಜೆಟ್ ಲ್ಯಾಗ್ ಪಬ್​ಗೆ ಯಾವ ಉದ್ದೇಶಕ್ಕೆ ಆಹ್ವಾನಿಸಿದ್ರು?
ಪ್ರಶ್ನೆ-8: ಪಾರ್ಟಿಗೆ ಆಹ್ವಾನಿಸಿದ್ರೆ, ಎಷ್ಟೊತ್ತಿಗೆ ಪಾರ್ಟಿ ಶುರುವಾಯ್ತು?
ಪ್ರಶ್ನೆ-9: ಪಬ್​ನಲ್ಲಾದ ಪಾರ್ಟಿಯಲ್ಲಿ ಯಾಱರು ಭಾಗಿಯಾಗಿದ್ರು?
ಪ್ರಶ್ನೆ-10: ಪಾರ್ಟಿಗೆ ಬಂದವರು ಎಷ್ಟು ಹೊತ್ತಿಗೆ ಹೊರಗಡೆ ಹೋದ್ರು?
ಪ್ರಶ್ನೆ-11: ನೀವು ಎಷ್ಟು ಹೊತ್ತಿಗೆ ಪಾರ್ಟಿಯಿಂದ ಹೊರ ಬಂದ್ರಿ?
ಪ್ರಶ್ನೆ-12: ಅವಧಿ ಮೀರಿ ಪಾರ್ಟಿ ಮಾಡಿದ್ದಕ್ಕೆ ಸಾಕ್ಷಿ ಇದೆ, ಏನು ಹೇಳ್ತೀರಿ?
ಪ್ರಶ್ನೆ-13: 1 ಗಂಟೆ ಬಳಿಕ ಕ್ಲೋಸ್ ಆಗುತ್ತೆ, ಹೋಗಬೇಕೆಂಬ ಅರಿವಿಲ್ವಾ?
ಪ್ರಶ್ನೆ-14: ಪಬ್​ನಲ್ಲಿ ಆಯೋಜಿಸಿದ್ದ ಪಾರ್ಟಿ, ಸಿನಿಮಾ ಸಕ್ಸಸ್ ಪಾರ್ಟಿನಾ?
ಪ್ರಶ್ನೆ-15: ಪಬ್ ಸಿಬ್ಬಂದಿ ಹೊರತುಪಡಿಸಿ ನೀವು 8 ಜನ ಉಳಿಯಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೇಟ್​​ ನೈಟ್​ ಪಾರ್ಟಿ ಕೇಸ್​​… ದರ್ಶನ್​ ಸೇರಿ ಹಲವರ ವಿಚಾರಣೆ; ಪೊಲೀಸ್ರು ಕೇಳಿದ ಪ್ರಶ್ನೆಗಳೇನು?

https://newsfirstlive.com/wp-content/uploads/2024/01/dboss-11.jpg

Load More