ನನ್ನ ಅಪ್ಪ ಅಮ್ಮನನ್ನು ಜೀವಂತವಾಗಿ ತರ್ತಾಳೆ.. ಮುದ್ದು ಕೂಸು ಸಿಹಿ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನು?

author-image
Veena Gangani
Updated On
ನನ್ನ ಅಪ್ಪ ಅಮ್ಮನನ್ನು ಜೀವಂತವಾಗಿ ತರ್ತಾಳೆ.. ಮುದ್ದು ಕೂಸು ಸಿಹಿ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನು?
Advertisment
  • ಸಿಹಿ ಬಗ್ಗೆ ಭಾವುಕರಾದ ಕ್ರೇಜಿಸ್ಟಾರ್ ರವಿಚಂದ್ರನ್
  • ವೇದಿಕೆಗೆ ಓಡೋಡಿ ಬಂದು ಸಿಹಿ ಕೊಟ್ಟಳು ಸಿಹಿ ಮುತ್ತು
  • ಪಟ ಪಟ ಅಂತ ಮಾತನಾಡುವ ಸಿಹಿ ಎಲ್ಲರಿಗೂ ಸಖತ್​ ಇಷ್ಟ

ಸೀತಾರಾಮ ಸೀರಿಯಲ್​ ವೀಕ್ಷಕರ ಫೇವರಿಟ್ ಆಗಿ ಉಳಿದುಕೊಂಡಿದೆ. ಅದರಲ್ಲೂ ಸಿಹಿ ಪಾತ್ರಕ್ಕೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಪಟಾಪಟ ಅಂತ ಮಾತನಾಡುವ ಸಿಹಿ ಅಂತೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸಖತ್​ ಇಷ್ಟ. ಸಿಹಿಗೂ ಕೂಡ ರವಿ ಮಾಮ ಅಂದ್ರೆ ಅಷ್ಟೇ ಇಷ್ಟ. ಡ್ರಾಮಾ ಜೂನಿಯರ್​ನಿಂದ ಬಂದ ಈ ಪುಟಾಣಿ ಬಗ್ಗೆ ನಟ ಭಾವುಕರಾಗಿದ್ದಾರೆ.

ಇದನ್ನೂ ಓದಿ:BBK11: ಈ ವಾರ ಇರಲಿದ್ಯಾ ಬಿಗ್​ ಟ್ವಿಸ್ಟ್; ಬಿಗ್​ಬಾಸ್​ ಮನೆಯಿಂದ ಆಚೆ ಬರೋ ಸ್ಪರ್ಧಿ ಯಾರು?

publive-image

ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿಹಿಯ ಬಗ್ಗೆ ಹಾಡಿ ಹೊಗಳಿದ್ದಾರೆ. ರವಿ ಮಾಮನನ್ನು ನೋಡಿದ ಸಿಹಿ ವೇದಿಕೆಗೆ ಓಡೋಡಿ ಬಂದಿದ್ದಾಳೆ. ಬಂದು ರವಿ ಸರ್​ಗೆ ಹಗ್​ ಮಾಡಿ ಮುತ್ತು ಕೊಟ್ಟಿದ್ದಾಳೆ. ಇದಾದ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಸಿಹಿ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ.

ಇದೇ ವೇದಿಕೆ ಮೇಲೆ ಈಕೆಯನ್ನು ಸೆಲೆಕ್ಟ್​ ಮಾಡಿದ್ದು. ಆಗ ಏನೂ ಬರ್ತಾ ಇರಲಿಲ್ಲ. ಆದರೆ ಆಕೆಗೆ ಆಸೆ ಇತ್ತು. ಈಕೆಯನ್ನು ನೋಡಿದ ಕೂಡಲೇ ನಮ್ಮ ಅಪ್ಪ ನೆನೆಪಾಗುತ್ತಾರೆ. ಈಕೆ ನನ್ನ ಬಳಿ ಬಂದ್ರೆ ಮೈಯೆಲ್ಲಾ ರೋಮಾಂಚನ ಆಗುತ್ತೆ. ಇವಳು ಬಂದು ತಬ್ಬಿಕೊಂಡರೆ ನಮ್ಮ ತಾಯಿ ತಂದೆಯೇ ಬಂದು ಹಗ್​ ಮಾಡಿದ ಹಾಗೇ ಇರುತ್ತೆ. ಈವಳು ಬಂದಾಗಲೆಲ್ಲಾ ನನ್ನ ಪೋಷಕರು ನೆನಪಾಗುತ್ತಾರೆ. ಅವಳಲ್ಲಿ ಆ ಒಂದು ಮುಗ್ಧತೆ ಇದೆಯಲ್ಲಾ, ನಮ್ಮ ಅಪ್ಪ ಅಮ್ಮನನ್ನು ಜೀವಂತವಾಗಿ ತರುತ್ತಾಳೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment