/newsfirstlive-kannada/media/post_attachments/wp-content/uploads/2024/04/haripriya6.jpg)
ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೀಗಾಗಿ ಮುದ್ದಾದ ಜೋಡಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು,ಒಂದಲ್ಲಾ ಒಂದು ವಿಚಾರಕ್ಕೆ ಈ ಲವ್​ ಬರ್ಡ್ಸ್ ಸುದ್ದಿಯಲ್ಲಿ ಇರುತ್ತಾರೆ. ಇದೀಗ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ
/newsfirstlive-kannada/media/post_attachments/wp-content/uploads/2024/04/haripriya4.jpg)
ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಈ ಸ್ಟಾರ್​ ಜೋಡಿಯೂ ಕಾರು ಶೋ ರೂಮ್​ಗೆ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/haripriya7.jpg)
View this post on Instagram
ಇನ್ನು, ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ GLE ಸೂಪರ್ ಲಕ್ಷುರಿ ಕಾರನ್ನು ಖರೀದಿ ಮಾಡಿದ್ದಾರೆ. GLE ಸೂಪರ್ ಲಕ್ಷುರಿ ಕಾರಿನ ಬೆಲೆ ಬರೋಬ್ಬರಿ 96.40 ಲಕ್ಷದಿಂದ 1.15 ಕೋಟಿಯವರೆಗೂ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಹೊಸ ಕಾರು ಖರೀದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
/newsfirstlive-kannada/media/post_attachments/wp-content/uploads/2024/04/haripriya6.jpg)
ಈ ವಿಡಿಯೋ ನೋಡಿದ ಅಭಿಮಾನಿಗಳು ಇನ್​ಸ್ಟಾಗ್ರಾಮ್​​ನಲ್ಲಿ ಕಾಮೆಂಟ್​ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ 2023 ಜನವರಿ 26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಗೆ ರಾಜಕೀಯ ಗಣ್ಯರು, ಹಾಗೂ ಸ್ಯಾಂಡಲ್​​ವುಡ್​ ಸಿನಿ ಅನೇಕ ತಾರೆಯರು ಸಾಕ್ಷಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us