/newsfirstlive-kannada/media/post_attachments/wp-content/uploads/2025/06/Shourya-Vijay.jpg)
ಅಬ್ಬಬ್ಬಾ.. ಈತ ಸ್ಯಾಂಡಲ್​ವುಡ್​ ಸ್ಟಾರ್​ ನಟನ ಮಗ. ಹೀಗೆ ಜಿಮ್​ನಲ್ಲಿ ಜಬರ್ದಸ್ತ್ ವರ್ಕೌಟ್ ಮಾಡಿ ಎಲ್ಲರ ಕಣ್ಮನ ಸೆಳೆದಿದ್ದಾನೆ. ಈತ ಯಾರು ಅಂತ ಗೆಸ್​ ಮಾಡಬಲ್ಲಿರಾ? ಈತ ಬೇರೆ ಯಾರು ಅಲ್ಲ ಚಿನ್ನಾರಿ ಮುತ್ತನ ಮುದ್ದಿನ ಮಗ ಶೌರ್ಯ.
ಹೌದು, ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ ಮುದ್ದಿನ ಮಗ ಶೌರ್ಯ ಜಿಮ್​ನಲ್ಲಿ ಮಸ್ತ್ ವರ್ಕೌಟ್​ ಮಾಡಿದ್ದಾನೆ. ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಟ ವಿಜಯ್​ ರಾಘವೇಂದ್ರು ಕೂಡ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ, ಇತ್ತೀಚೆಗಷ್ಟೇ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ವಿಜಯ್ ಐಎಸ್​ಸಿ 12ನೇ (Indian School Certificate Examination) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಈ ವಿಚಾರವನ್ನು ಹೇಳಿಕೊಂಡು ನಟ ಸಂಭ್ರಮಿಸಿದ್ದರು. ಇದೇ ಖುಷಿಯಲ್ಲಿ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ