/newsfirstlive-kannada/media/post_attachments/wp-content/uploads/2024/09/Amulya.jpg)
ಸ್ಯಾಂಡಲ್​ವುಡ್​ನ ಕ್ಯೂಟ್​ ನಟಿ ಅಮೂಲ್ಯ ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಬಣ್ಣದ ಲೋಕದಿಂದ ಕೆಲ ವರ್ಷ ದೂರ ಸರಿದ ನಟಿ ಅಮೂಲ್ಯ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಸೀರೆಯುಟ್ಟ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುಯತ್ತಾ ಇರುತ್ತಾರೆ.
ಇದನ್ನೂ ಓದಿ: ದಿಢೀರ್ ವರಸೆ ಬದಲಿಸಿದ ವರುಣ್ ಆರಾಧ್ಯ.. ಮಾಜಿ ಪ್ರೇಯಸಿ ಉಲ್ಟಾ ಹೊಡೆದಿದ್ದೇಕೆ? ಕಣ್ಣೀರಧಾರೆ ಏಕೆ?
/newsfirstlive-kannada/media/post_attachments/wp-content/uploads/2024/09/Amulya1.jpg)
ನಿನ್ನೆಯಷ್ಟೇ ನಟಿ ಅಮೂಲ್ಯ ಅವರು 31ನೇ ವಸಂತಕ್ಕೆ ಕಾಲಿಟ್ಟಿದ್ದರು. ಇದೇ ಖುಷಿಯಲ್ಲಿದ್ದ ನಟಿಗೆ ಮುದ್ದಾದ ಮಕ್ಕಳು ಹೂವಿನ ಸುರಿಮಳೆಗೈದಿದ್ದಾರೆ. ಹ್ಯಾಪಿ ಬರ್ತ್​ ಡೇ ಅಮ್ಮ ಅಂತ ಹೇಳುತ್ತಾ ನಟಿ ಅಮೂಲ್ಯ ಮೇಲೆ ಹೂವಿನ ಮಳೆಯೇ ಸುರಿಸಿದ್ದಾರೆ. ಇದೇ ವಿಡಿಯೋವನ್ನು ನಟಿ ಅಮ್ಯೂಲ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನನಗೆ ಬಂದ ಕ್ಯೂಟ್​ ಬರ್ತ್​ ಡೇ ವಿಶ್​​ ಇದು ಅಂತ ಬರೆದುಕೊಂಡಿದ್ದಾರೆ.
View this post on Instagram
ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ನಟಿಗೆ ಬರ್ತ್​ ಡೇಗೆ ಶುಭ ಕೋರಿದ್ದಾರೆ. ಜೊತೆಗೆ ಇನ್ನೂ ನಿಮ್ಮ ಧ್ವನಿ ಚಲುವಿನ ಚಿತ್ತಾರದಂತೆ ಇದೆ ಅಂತ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ನಟಿ ಅಮೂಲ್ಯ ಅವರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜಗದೀಶ್ ದಂಪತಿ ಇತ್ತೀಚಿಗಷ್ಟೇ ತಮ್ಮ ಅವಳಿ ಮಕ್ಕಳ 2ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಮಕ್ಕಳ ಬರ್ತ್ ಡೇ ಸೆಲೆಬ್ರೇಶನ್​ ಫೋಟೋವನ್ನು ಸಹ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us