/newsfirstlive-kannada/media/post_attachments/wp-content/uploads/2024/08/milana.jpg)
ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮದ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಫ್ಯಾನ್ಸ್​ಗಳಿಗೆ ಈ ಹಿಂದೆ ಮಾಹಿತಿ ನೀಡಿದ್ದರು.
ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್​ವುಡ್ ನಟಿ ಮಿಲನಾ ನಾಗರಾಜ್ ಅವರ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ನಟಿ ಮಿಲನಾ ನಾಗರಾಜ್ ಅವರ ಸೀಮಂತ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿ ಹಾಗೂ ಸ್ಯಾಂಡಲ್​ವುಡ್​ ನಟ, ನಟಿಯರು, ಹಾಗೂ ಬಂಧು ಮಿತ್ರರು ಸಹ ಭಾಗಿಯಾಗಿದ್ದರು.
ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಫೋಟೋಸ್​ ನೋಡಿದ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಇಬ್ಬರು ದೃಷ್ಟಿ ತೆಗೆದುಕೊಳ್ಳಿ ಅಂತ ಕಾಮೆಂಟ್ಸ್​ ಹಾಕಿದ್ದಾರೆ.
ಮೊನ್ನೆಯಷ್ಟೇ ನಟಿ ಮಿಲನಾ ನಾಗರಾಜ್​ ಸುಂದರವಾದ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಮಿಲನಾ ನಾಗರಾಜ್​ ಹಾಗೂ ಪತಿ ಡಾರ್ಲಿಂಗ್​ ಕೃಷ್ಣ ಅವರು​ ಕಾಣಿಸಿಕೊಂಡಿದ್ದಾರೆ. ಸದ್ಯ ಮಗುವಿನ ನಿರೀಕ್ಷೆಯಲ್ಲಿರೋ ಜೋಡಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ