Advertisment

VIDEO: ಗಂಡನಿಂದಲೇ ‘ಭಜರಂಗಿ’ ಸಿನಿಮಾ ನಟಿಯ ಭೀಕರ ಹತ್ಯೆ.. ಇದು ಪ್ರೀ ಪ್ಲಾನ್ ಮರ್ಡರ್ ಎಂದ ಪ್ರತ್ಯಕ್ಷದರ್ಶಿ

author-image
AS Harshith
Updated On
VIDEO: ಗಂಡನಿಂದಲೇ ‘ಭಜರಂಗಿ’ ಸಿನಿಮಾ ನಟಿಯ ಭೀಕರ ಹತ್ಯೆ.. ಇದು ಪ್ರೀ ಪ್ಲಾನ್ ಮರ್ಡರ್ ಎಂದ ಪ್ರತ್ಯಕ್ಷದರ್ಶಿ
Advertisment
  • 2018ರಲ್ಲಿ ಮದುವೆಯಾಗಿದ್ದ ನಂದೀಶ್ ಹಾಗೂ ವಿದ್ಯಾ
  • ಪರಸ್ಪರ ವಿಚ್ಛೇದನಕ್ಕೂ ಮುಂದಾಗಿದ್ದ ನಂದೀಶ್-ವಿದ್ಯಾ
  • ಕರೆಯಲ್ಲೂ ವಾಗ್ವಾದ.. ತನ್ನ ಮನೆಗೆ ಬರುವಂತೆ ಕರೆದಿದ್ದ

ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಮಾತಿತ್ತು. ಆದ್ರೀಗ ರಕ್ತದಾಹದ ಜನರು ಹೆಚ್ತಿರೋ ಕೊಲೆಯುಗದಲ್ಲಿ ಗಂಡ-ಹೆಂಡತಿ ಜಗಳ ಕೊಂದು ಹಾಕೋ ತನಕ ಅನ್ನೋ ಥರ ಆಗಿದೆ. ಅದೇ ರೀತಿ ಮೈಸೂರಲ್ಲೊಂದು ಕೌಟೌಂಬಿಕ ಕದನ ಕೊಲೆಗೆ ದಾರಿ ಮಾಡಿಕೊಟ್ಟಿದೆ. ಆದರಿಲ್ಲಿ ಸಾವನ್ನಪ್ಪಿದ್ದು ಓರ್ವ ನಟಿ.

Advertisment

ಇದು. ಶರಣ್-ಶೃತಿ ಹರಿಹರನ್ ನಟನೆಯ ಜೈ ಮಾರುತಿ 800 ಸಿನಿಮಾದ ದೃಶ್ಯ. ಈ ಸೀನ್​ನಲ್ಲಿ ನಟಿ ಶೃತಿ ಜೊತೆಗಿರೋ ಸ್ನೇಹಿತೆ ಕ್ಯಾರೆಕ್ಟರ್ ಮಾಡಿರೋ ಸಹನಟಿ ವಿದ್ಯಾ ಇದೀಗ ಕೊಲೆಯಾಗಿದ್ದಾರೆ. ತಾಳಿ ಕಟ್ಟಿದವನ ಕೈನಿಂದಲೇ ಸಾವಿನ ಉರುಳು ಬಿಗಿದಿದೆ.

publive-image

ವಿದ್ಯಾ ನಂದೀಶ್, ಈಕೆ ನಟಿಯೂ ಹೌದು. ಕಾಂಗ್ರೆಸ್ ಮುಖಂಡೆಯೂ ಹೌದು. ಕಾಂಗ್ರೆಸ್ ಪಕ್ಷದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ವಿದ್ಯಾ ಜವಾಬ್ದಾರಿ ನಿರ್ವಹಿಸಿದ್ದಾರೆ. ಒಂದೇ ಬದುಕಿನಲ್ಲಿ ಎರಡು ನೈಜಪಾತ್ರ ಮಾಡ್ತಿದ್ದ ಈಕೆ ಇದೀಗ ಮನೆಯಲ್ಲೇ ಹೆಣವಾಗಿದ್ದಾರೆ. ಹೀಗೆ ಈಕೆಯನ್ನ ಕೊಂದವನು ಪತಿ ನಂದೀಶ್.

[caption id="attachment_65361" align="alignnone" width="800"]publive-imageಪತಿ ನಂದೀಶ್​ ಜೊತೆ ವಿದ್ಯಾ[/caption]

Advertisment

ಇದನ್ನೂ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಟ್ಟಿಮೇಳ ಖ್ಯಾತಿಯ ರೌಡಿ ಬೇಬಿ ನಿಶಾ.. ಏನದು ಗೊತ್ತಾ?

[caption id="attachment_65362" align="alignnone" width="800"]publive-imageನಟ ಶಿವರಾಜ್​ ಕುಮಾರ್​ ಜೊತೆಗೆ ವಿದ್ಯಾ[/caption]

ಮೈಸೂರಿನ ಟಿ.ನರಸೀಪುರ ತುರಗನೂರು ಗ್ರಾಮದ ನಿವಾಸದಲ್ಲಿ ಇಂಥದ್ದೊಂದು ಭೀಕರ ಹತ್ಯೆ ನಡೆದುಹೋಗಿದೆ. ನಂದೀಶ್ ಸುತ್ತಿಗೆಯಿಂದ ಪತ್ನಿ ವಿದ್ಯಾ ತಲೆಗೆ ಹೊಡೆದ ಪರಿಣಾಮ, ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾ ಸಾವನ್ನಪ್ಪಿದ್ದಾರೆ. ಈ ಸಾವು ಕುಟುಂಬಸ್ಥರಲ್ಲಿ ನೋವಿನ ಕಾರ್ಮೋಡಕ್ಕೆ ಕಾರಣವಾಗಿತ್ತು. ಕಣ್ಣೀರ ಮಳೆಯೂ ಸುರಿದಿತ್ತು.

Advertisment

ಮಾತಿಗೆ ಮಾತು ಬೆಳೆದು ಸುತ್ತಿಗೆ ಬೀಸಿ ವಿದ್ಯಾ ಮರ್ಡರ್

2018ರಲ್ಲಿ ಮದುವೆಯಾಗಿದ್ದ ನಂದೀಶ್ ಹಾಗೂ ವಿದ್ಯಾ ಜೀವನ ಸಂತೋಷವಾಗೇನು ಇರಲಿಲ್ಲ. ಇಬ್ಬರ ನಡುವೆ ಆಗಾಗ ಜಗಳ ನಡಿಯುತ್ತಲೇ ಇತ್ತು. ಪರಸ್ಪರ ವಿಚ್ಛೇದನಕ್ಕೂ ಮುಂದಾಗಿದ್ದರು. ಆದ್ರೆ, ಮನೆಯವರ ಮಧ್ಯಸ್ಥಿಕೆಯಲ್ಲಿ ಬುದ್ಧಿವಾದ ಕೇಳಿ ವಿದ್ಯಾ ಹಾಗೂ ನಂದೀಶ್ ಮತ್ತೆ ಒಂದಾಗಿದ್ರು. ಮತ್ತೆ ಮೊನ್ನೆ ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ತವರು ಮನೆ ಶ್ರೀರಾಂಪುರದಲ್ಲಿದ್ದ ವಿದ್ಯಾಗೆ ಕರೆ ಮಾಡಿದ್ದ ನಂದೀಶ್, ತನ್ನ ಮನೆಗೆ ಬರುವಂತೆ ಕರೆದಿದ್ದ. ಈ ದೂರವಾಣಿ ಕರೆಯಲ್ಲೂ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ಗಂಡನ ಊರು ತುರುಗನೂರಿಗೆ ವಿದ್ಯಾ ಆಗಮಿಸಿದ್ರು. ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸುತ್ತಿಗೆಯ ಪ್ರಯೋಗವಾಗಿತ್ತು. ನೆತ್ತರು ಹರಿದಿತ್ತು. ನಟಿಯ ಜೀವ ಹಾರಿಹೋಗಿತ್ತು.

ಇದನ್ನೂ: ಬೆಂಗಳೂರು ಏರ್ಪೋರ್ಟ್​ಗೆ ಹೋಗೋ ವಾಹನ ಮಾಲೀಕರೇ ಹುಷಾರ್​​.. ನೀವು ಓದಲೇಬೇಕಾದ ಸ್ಟೋರಿ

ಸದ್ಯ, ಇದು ಪ್ರೀ ಪ್ಲಾನ್ ಮರ್ಡರ್ ಅಂತಾ ಪ್ರತ್ಯಕ್ಷದರ್ಶಿಯೂ ಆಗಿರೋ ಮೃತ ವಿದ್ಯಾ ಸ್ನೇಹಿತೆ ಭಾಗ್ಯ ಆರೋಪ ಮಾಡ್ತಿದ್ದಾರೆ. ಪೊಲೀಸರ ತನಿಖೆ ಎಲ್ಲಾ ಆಯಾಮಗಳಲ್ಲೂ ಸಾಗ್ತಿದೆ. ಆದ್ರೆ, ಭಜರಂಗಿ, ಅಜಿತ್, ವೇದಾ, ಜೈ ಮಾರುತಿ 800 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿದ್ಯಾ ಬದುಕು ದುರಂತ ರೀತಿಯಲ್ಲಿ ಅಂತ್ಯವಾಗಿದ್ದು ನಿಜ. ಸದ್ಯ, ಹತ್ಯೆಗೈದ ಪತಿ ನಂದೀಶ್ ಸೆರೆಗೆ ಬನ್ನೂರು ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೀತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment