ಥಿಯೇಟರ್​ನಲ್ಲಿ ‘ಅಪ್ಪು’ ಸಿನಿಮಾ ನೋಡಿ ಖುಷಿಪಟ್ಟ ಮೋಹಕ ತಾರೆ ರಮ್ಯಾ; ಹೇಳಿದ್ದೇನು?

author-image
Veena Gangani
Updated On
ಥಿಯೇಟರ್​ನಲ್ಲಿ ‘ಅಪ್ಪು’ ಸಿನಿಮಾ ನೋಡಿ ಖುಷಿಪಟ್ಟ ಮೋಹಕ ತಾರೆ ರಮ್ಯಾ; ಹೇಳಿದ್ದೇನು?
Advertisment
  • 23 ವರ್ಷಗಳ ನಂತರ ಅದ್ಧೂರಿಯಾಗಿ ಮರು ಬಿಡುಗಡೆಯಾದ ಅಪ್ಪು ಸಿನಿಮಾ
  • ಅಪ್ಪು ಸಿನಿಮಾ ನೋಡಲು ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಾಗರ
  • ವೀರೇಶ್ ಚಿತ್ರಮಂದಿರದ ಬಳಿ ಕುಣಿದು ಕುಪ್ಪಳಿಸಿದ ಅಪ್ಪು ಅಭಿಮಾನಿಗಳು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ನಾಯಕ ನಟನಾಗಿ ಅಭಿನಯ ಮಾಡಿರೋ ಮೊಟ್ಟ ಮೊದಲ ಸಿನಿಮಾ ಅಪ್ಪು. ನಿನ್ನೆ ರಾಜ್ಯಾದ್ಯಂತ ಮರು ಬಿಡುಗಡೆ ಆಗಿತ್ತು. ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಫಸ್ಟ್​ ಶೋ ನೋಡಿ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ:ಅಂಬರೀಶ್ ಮೊಮ್ಮಗನಿಗೆ ಕಿಚ್ಚ ಸುದೀಪ್ ಕೊಟ್ಟ ಗಿಫ್ಟ್ ಏನು? ನಾಮಕರಣದ ಫೋಟೋಗಳು ಇಲ್ಲಿವೆ!

publive-image

ಹೌದು, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದ ಸಂಭ್ರಮ. ಮಾರ್ಚ್ 17ಕ್ಕೆ ಪುನೀತ್​ ರಾಜ್​ಕುಮಾರ್​ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರತ್ನ ಪುನೀತ್ ಅವರನ್ನು ಸ್ಮರಿಸಲು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

publive-image

ಅಲ್ಲದೇ ಈ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ಮೊಟ್ಟ ಮೊದಲು ಸಿನಿಮಾ 'ಅಪ್ಪು' ಚಿತ್ರವನ್ನು ನಿನ್ನೆ ರಾಜ್ಯಾದ್ಯಂತ ಮರು ಬಿಡುಗಡೆ ಮಾಡಲಾಗಿತ್ತು. ವಿಶೇಷ ಎಂದರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಅಪ್ಪು ಸಿನಿಮಾ ರೀ-ರಿಲೀಸ್ ಆಗಿದ್ದು. ಹೀಗಾಗಿ ನಿನ್ನೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ನಟಿ ರಕ್ಷಿತಾ ಪ್ರೇಮ್ (ಅಪ್ಪು ಚಿತ್ರದ ನಾಯಕಿ) ಆಗಮಿಸಿದ್ದರು. ಇಂದು ಮೋಹಕತಾರೆ ರಮ್ಯಾ ಅವರು ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.

ನಟಿ ರಮ್ಯಾ ಅವರು ಬರುತ್ತಿರೋ ಸುದ್ದಿ ಕೇಳಿ ವೀರೇಶ್ ಚಿತ್ರಮಂದಿರದ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ರಮ್ಯಾ ಮಾತ್ರವಲ್ಲದೇ ವೀರೇಶ್ ಚಿತ್ರಮಂದಿರಕ್ಕೆ ಪುನೀತ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಆಗಮಿಸಿದ್ದರು. ಅಪ್ಪು ಅಭಿಮಾನಿಗಳ ಜೊತೆ ಕುಳಿತು ನಟಿ ರಮ್ಯಾ, ಯುವ ಹಾಗೂ ವಿನಯ್ ರಾಜ್‌ಕುಮಾರ್ ಅವರು ಅಪ್ಪು ಚಿತ್ರವನ್ನು ಇಂದು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ.

publive-image

ಅಪ್ಪು ಸಿನಿಮಾ ನೋಡಿ ನಟಿ ರಮ್ಯಾ ಹೇಳಿದ್ದೇನು?

23 ವರ್ಷಗಳ ಹಿಂದೆ ನಾನು ಅಪ್ಪು ಸಿನಿಮಾ ನೋಡಿದಾಗ ಇದ್ದ ಕ್ರೇಜ್ ಈಗಲೂ ಹಾಗೇ ಇದೆ. ನನಗೆ ಅಭಿಮಾನಿಗಳ ಜೊತೆಗೆ ಕುಳಿತುಕೊಂಡು ಸಿನಿಮಾ ನೋಡಿದ್ದು ಬಹಳ ಖುಷಿ ಕೊಟ್ಟಿದೆ. ಫ್ಯಾನ್ಸ್​ಗಳಲ್ಲಿ ಇರೋ ಒಂದು ಎನರ್ಜಿ, ಅವರು ತೋರಿಸುವಂತಹ ಪ್ರೀತಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಅಭಿಮಾನಿಗಳ ಕ್ರೇಜ್ ನೋಡಿ ನನಗೆ ನಿಜಕ್ಕೂ ಶಾಕ್ ಆಯ್ತು. ಆದ್ರೆ ಅಪ್ಪುನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment