Advertisment

‘ಯಾರಿಗೂ ಕೊಲೆ ಮಾಡುವ ಹಕ್ಕಿಲ್ಲ..’- ದರ್ಶನ್​ ವಿರುದ್ಧ ರಮ್ಯಾ ಮತ್ತೆ ಕಿಡಿ!

author-image
Veena Gangani
Updated On
‘ಯಾರಿಗೂ ಕೊಲೆ ಮಾಡುವ ಹಕ್ಕಿಲ್ಲ..’- ದರ್ಶನ್​ ವಿರುದ್ಧ ರಮ್ಯಾ ಮತ್ತೆ ಕಿಡಿ!
Advertisment
  • ನಟ ದರ್ಶನ್​, ಪವಿತ್ರ ಗೌಡ ಸೇರಿ13 ಆರೋಪಿಗಳು ಪೊಲೀಸ್​ ವಶಕ್ಕೆ​
  • ಯಾರಾದರೂ ನಿಮ್ಮನ್ನೂ ಟ್ರೋಲ್​ ಮಾಡಿದ್ರೆ ಅವರನ್ನು ಬ್ಲಾಕ್ ಮಾಡಿ!
  • ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ ವಿರುದ್ಧ ಧ್ವನಿ ಎತ್ತಿದ ನಟಿ

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಸುದ್ದಿ ಕೇಳಿ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಯಾವಾಗ ಈ ಕೊಲೆ ಕೇಸ್​ ಹಿಂದೆ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಹೆಸರು ಕೇಳಿ ಬಂತೋ ಅಭಿಮಾನಿಗಳ ಜೊತೆಗೆ ಇಡೀ ಕನ್ನಡ ಚಿತ್ರರಂಗ ಚಿಂತಾಕ್ರಾಂತವಾಗಿದೆ. ಸದ್ಯ ಈ ಕೊಲೆ ಕೇಸ್​ ಸಂಬಂಧ​ ನಟ ದರ್ಶನ್​ ಹಾಗೂ ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್​ ವಶದಲ್ಲಿದ್ದಾರೆ. ​

Advertisment

ಇದನ್ನೂ ಓದಿ:ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

publive-image

ಇನ್ನು, ಇದೇ ವಿಚಾರವಾಗಿ ಸಾರ್ವಜನಿಕರು ಸೇರಿದಂತೆ ನಟ ನಟಿಯರು ಕೂಡ ಈ ಕೇಸ್​​ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮೊನ್ನೆಯಷ್ಟೇ ಸ್ಯಾಂಡಲ್​ವುಡ್​ ನಟಿ ಮೋಹಕ ತಾರೆ ರಮ್ಯಾ ಅವರು ಕೂಡ ಈ ಬಗ್ಗೆ ಕಿಡಿ ಹಾಕಿದ್ದರು. ಇದೀಗ ಖುದ್ದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿಯನ್ನು ಶೇರ್ ಮಾಡಿಕೊಳ್ಳುವ ಮೂಲಕ ಯುವನಕ ಕೊಲೆ ಕೇಸ್​​ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಜೊತೆಗೆ ಮೃತ ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಅಂತ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕ್ರೂರ ಕೊಲೆ‌ ಕೇಸ್‌ಗೆ ಮೇಜರ್ ಟ್ವಿಸ್ಟ್.. ತನಿಖಾಧಿಕಾರಿ ದಿಢೀರ್ ಬದಲಾವಣೆ; ಯಾಕೆ?

Advertisment

publive-image

ಇನ್ನು, ಈ ಬಗ್ಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡ ನಟಿ ರಮ್ಯಾ,  ಸೋಷಿಯಲ್​ ಮೀಡಿಯಾದಲ್ಲಿ ಬ್ಲಾಕಿಂಗ್​ ಆಪ್ಷನ್ ಇದೆ. ಯಾರಾದರೂ ಟ್ರೋಲ್​ ಮಾಡಿದ್ರೆ ಅವರನ್ನು ಬ್ಲಾಕ್​ ಮಾಡಬಹುದು. ಇಲ್ಲದೇ ಹೋದರೆ ಕಂಪ್ಲೇಂಟ್​ ಕೊಡಬಹುದು. ನನ್ನನ್ನು ನಿರಂತರವಾಗಿ ಕೊಳಕು ಭಾಷೆ ಬಳಸಿ ಟ್ರೋಲ್ ಮಾಡಿದ್ದಾರೆ. ನಾನು ಮಾತ್ರವಲ್ಲ, ಅವರು ಇತರ ನಟ ಹಾಗೂ ನಟಿಯರನ್ನೂ ಟ್ರೋಲ್ ಮಾಡಿದ್ದಾರೆ. ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಸಹ ಬಿಡೋದಿಲ್ಲ. ಎಂತಹ ಶೋಚನೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಯಾವುದೇ ಕಾನೂನು ಪಾಲಿಸುವ ನಾಗರಿಕರು ಮಾಡಬೇಕಾದಂತಹ ಪ್ರಕರಣಗಳನ್ನು ನಾನು ದಾಖಲಿಸಿದ್ದೇನೆ. ಕೆಲವೊಮ್ಮೆ ಟ್ರೋಲ್‌ಗಳಿಗೆ ಪೊಲೀಸರಿಂದ ಎಚ್ಚರಿಕೆಯನ್ನು ಪೋಸ್ಟ್ ಮಾಡಿ ನಾನು ಸಹಾನುಭೂತಿಯ ಆಧಾರದ ಮೇಲೆ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಸಾಕಷ್ಟು ಯುವಕರು ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡದೇ ಅನಾಮಧೇಯ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಟ್ರೋಲ್ ಮಾಡುವ ಮೂಲಕ ತಮ್ಮ ಜೀವನವನ್ನು ಹಾಳುಮಾಡುತ್ತಿದ್ದಾರೆ. ವ್ಯರ್ಥ ಮಾಡುತ್ತಿದ್ದಾರೆ ಎಂಬ ಅಂಶವನ್ನು ನಾನು ಪರಿಗಣಿಸಿದ್ದೇನೆ. ಯಾರೂ ಕಾನೂನಿಗಿಂತ ಮೇಲಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾರಿಗೂ ಜನರನ್ನು ಹೊಡೆಯಲು ಮತ್ತು ಕೊಲ್ಲವ ಅಧಿಕಾರವಿಲ್ಲ. ಯಾರೇ ಕಾನೂನನ್ನು ಕೈಗೆ ತೆಗೆದುಕೊಂಡರು ಅವರಿಗೆ ಶಿಕ್ಷೆ ಆಗಬೇಕು. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮೆಚ್ಚುಗೆ ಮತ್ತು ಗೌರವದ ಮಾತು. ಇದು ಕೃತಜ್ಞತೆಯಿಲ್ಲದ ಕೆಲಸ. ಮತ್ತು ಪೊಲೀಸರು ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ. ಅವರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ. ಕಾನೂನು ಮತ್ತು ನ್ಯಾಯದಲ್ಲಿ ಜನರ ನಂಬಿಕೆಯನ್ನು ಮರುಸ್ಥಾಪಿಸುವುದಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ರೇಣುಕಾಸ್ವಾಮಿಗೆ ನ್ಯಾಯ ಕೊಡಿ. ದರ್ಶನ್ #ಯಡಿಯೂರಪ್ಪ #ಪ್ರಜ್ವಲ್ ರೇವಣ್ಣ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment