newsfirstkannada.com

ಹೆಸರಲ್ಲೇನಿದೆ?; ದೇಶದ ಮರುನಾಮಕರಣದ ಕುರಿತು ಮೋಹಕ ತಾರೆ ರಮ್ಯಾ ಟ್ವೀಟ್​

Share :

06-09-2023

    ಟ್ವೀಟ್​​ ಮಾಡಿದ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ

    ಇಂಡಿಯಾ ಬದಲು ಭಾರತ, ಮರುನಾಮಕರಣಕ್ಕೆ ಮುಂದಾದ ಕೇಂದ್ರ

    ಮರುನಾಮಕರಣ ಕುರಿತಾಗಿ ಶುರುವಾಗಿದೆ ಪರ-ವಿರೋಧ ಚರ್ಚೆ

ಇಂಡಿಯಾ ಬದಲು ಭಾರತ ಎಂದು ದೇಶಕ್ಕೆ ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿ ಸ್ಯಾಂಡಲ್​ವುಡ್​ ನಟಿ ರಮ್ಯಾ ಟ್ವೀಟ್​ ಮಾಡಿದ್ದಾರೆ. ಟ್ವೀಟ್​​ನಲ್ಲಿ ‘ಹೆಸರಲ್ಲೇನಿದೆ? ಸಾಕಷ್ಟು ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರ ದೇಶದ ಹೆಸರು ಮರುನಾಮಕರಣ ಮಾಡುವ ಕುರಿತು ಭಾರೀ ಚರ್ಚೆಯಾಗುತ್ತಿದೆ. ರಾಜಕೀಯ ಪಕ್ಷಗಳಂತೂ ಪರ ವಿರೋಧ ವ್ಯಕ್ತಪಡಿಸಿವೆ. ಸದ್ಯ ಇಂಡಿಯಾ/ ಭಾರತದ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತಿವೆ.

ನಮ್ಮ ದೇಶವನ್ನು ಕಳೆದ 75 ವರ್ಷದಿಂದ ಇಂಡಿಯಾ ಅಂತಾನೇ ಕರೆಯಲಾಗುತ್ತಿದೆ. ದೇಶದ ಸಂವಿಧಾನದಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಉಲ್ಲೇಖಿಸಲಾಗಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ನಮ್ಮ ದೇಶವನ್ನು ಇಂಡಿಯಾ ಎಂದೇ ಕರೆಯಲಾಗುತ್ತೆ. ಇಂಡಿಯಾದ ಹೆಸರಿನಲ್ಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೀಗ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರಕ್ಕೆ ಇಂಡಿಯಾ ಪದದ ಬಗ್ಗೆ ಅಸಮಾಧಾನ ಸೃಷ್ಟಿಯಾಗಿದೆ.

ಸೆಪ್ಟೆಂಬರ್ 18 ರಿಂದ 23 ರವರೆಗೆ ಸಂಸತ್‌ನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ವಿಶೇಷ ಅಧಿವೇಶನದಲ್ಲೇ ದೇಶದ ಹೆಸರನ್ನು ಬದಲಾಯಿಸುವ ನಿರ್ಣಯ ಅಂಗೀಕರಿಸಲು ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಸರಲ್ಲೇನಿದೆ?; ದೇಶದ ಮರುನಾಮಕರಣದ ಕುರಿತು ಮೋಹಕ ತಾರೆ ರಮ್ಯಾ ಟ್ವೀಟ್​

https://newsfirstlive.com/wp-content/uploads/2023/09/Ramya.jpg

Load More