/newsfirstlive-kannada/media/post_attachments/wp-content/uploads/2024/06/Sreeleela.jpg)
ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಲಕ್​ ಬದಲಾಗಿದೆ. ಟಾಲಿವುಡ್​ ಬಳಿಕ ಇದೀಗ ಶ್ರೀಲೀಲಾ ಮುಂಬೈ ವಿಮಾನ ಏರಿದ್ದಾರೆ. ಬಾಲಿವುಡ್​ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಶ್ರೀಲೀಲಾ ಬಾಲಿವುಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಿರಬಿದ್ದಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಟಿಯ ವೇಗದ ಬೆಳವಣಿಗೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆಯೇ ಶ್ರೀಲೀಲಾ ಬಾಲಿವುಡ್​ನಲ್ಲಿ ಯಾರಿಗೆ ಜೋಡಿಯಾಗುತ್ತಿದ್ದಾರೆ ಗೊತ್ತಾ?.
ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಶ್ರೀಲೀಲಾ ನಟಿಯಾಗಲಿದ್ದಾರಂತೆ. ‘ಡೈಲಾರ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಂಬಂಧ ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್​ನಲ್ಲೂ ಪಾಲ್ಗೊಳ್ಳಲಿದ್ದಾರಂತೆ.
[caption id="attachment_68509" align="alignnone" width="800"]
ಶ್ರೀಲೀಲಾ ಮತ್ತು ನಟ ಇಬ್ರಾಹಿಂ ಖಾನ್[/caption]
ಇದನ್ನೂ ಓದಿ: ವೇಗವಾಗಿ ಬಂದು ಒಂಟೆಗೆ ಡಿಕ್ಕಿ ಹೊಡೆದ ಕಾರು.. ಬಾನೆಟ್ ಮೇಲೆ ಸಿಲುಕಿ ಕೂಗಾಡಿದ ಪ್ರಾಣಿ.. ಅಸಲಿಗೆ ಆಗಿದ್ದೇನು?
ಆಗಸ್ಟ್​ನಿಂದ ಈ ಸಿನಿಮಾದ ಶೂಟಿಂಗ್​ ಪ್ರಾರಂಭವಾಗಿಲಿದ್ದು, ಶ್ರೀಲೀಲಾಗೆ ಉತ್ತಮ ಪಾತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ
ಇನ್ನು ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿಗೆ ಬಾಲಿವುಡ್​ ಬಾಗಿಲು ತೆರೆದಿದೆ. ಅಭಿಮಾನಿಗಳಂತೂ ನಟಿಯನ್ನು ಹಿಂದಿ ಸಿನಿಮಾದಲ್ಲೂ ಕಾಣಲು ಕಾತುರರಾಗಿದ್ದಾರೆ. ಇದಲ್ಲದೆ ನಟಿ ತೆಲುಗಿನ ನಟ ರವಿತೇಜ ಜೊತೆಗೂ ಸಿನಿಮಾ ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us