/newsfirstlive-kannada/media/post_attachments/wp-content/uploads/2025/06/srilila5.jpg)
ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ಬಗೆಗಿನ ಒಂದಷ್ಟು ಫೋಟೋಗಳು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟು ಹಾಕಿತ್ತು.
ಅದರಲ್ಲೂ ಅರಿಶಿಣ ಶಾಸ್ತ್ರದ ಫೋಟೋ ನೋಡಿದ ಅಭಿಮಾನಿಗಳಿಗೆ ಅನುಮಾನ ಹೆಚ್ಚಾಗಿತ್ತು. ಆದರೆ ಇದೀಗ ಆ ಫೋಟೋಗಳ ಸೀಕ್ರೆಟ್ ರಿವೀಲ್ ಆಗಿದೆ. ಹೌದು, ಈ ಫೋಟೋಗಳನ್ನು ಖುದ್ದು ಶ್ರೀಲೀಲಾನೇ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ.
ಶ್ರೀಲೀಲಾ ಫೋಟೋ ಸೀಕ್ರೆಟ್ ಏನು?
ನಟಿ ಶ್ರೀಲೀಲಾ ನಿನ್ನೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿ ಶಾಕ್ ಕೊಟ್ಟಿದ್ದರು. ಜೊತೆಗೆ ಕಮಿಂಗ್ ಸೂನ್ ಅಂತ ಬರೆದುಕೊಂಡು ಕುತೂಹಲ ಮೂಡಿಸಿದ್ದರು. ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗ ಅರಿಶಿಣ ಶಾಸ್ತ್ರದ ಹಿಂದನ ಅಸಲಿ ಸತ್ಯ ಏನೆಂದು ಅವರೇ ರಿವೀಲ್ ಮಾಡಿದ್ದಾರೆ ನೋಡಿ.
ಅವರ ಮನೆಯಲ್ಲಿ ನಿಜವಾಗಲೂ ನಡೆಯುತ್ತಿರುವುದು ಏನು ಅಂತ ಹೇಳಿಕೊಂಡಿದ್ದಾರೆ.
ಜೂನ್ 14 ನಟಿ ಶ್ರೀಲೀಲಾ ಹುಟ್ಟು ಹಬ್ಬ. ಹೀಗಾಗಿ ಜನ್ಮದಿನದ ಮೊದಲು ಮನೆಯಲ್ಲಿ ಹೇಗೆಲ್ಲ ಸಂಭ್ರಮ ಮಾಡುತ್ತಾರೆ ಅನ್ನೋದನ್ನೇ ನಟಿ ರಿವೀಲ್ ಮಾಡಿದ್ದಾರೆ. ಶ್ರೀಲೀಲಾ ಮನೆಯಲ್ಲಿ ಜನ್ಮ ದಿನ ಮುಂಚೆ ಸಖತ್ ಸೆಲೆಬ್ರೇಷನ್ ಇರುತ್ತದೆ. ಹೀಗೆ ಮಾಡುವುದು ಅಮ್ಮನ ಪ್ಲಾನ್ ಆಗಿದೆ. ಇದರ ಕ್ರೆಟಿಡ್ ಅಮ್ಮನಿಗೇನೆ ಸಲ್ಲಬೇಕು ಅಂತ ಶ್ರೀಲೀಲಾ ಹೇಳಿಕೊಂಡಿದ್ದಾರೆ.
View this post on Instagram
ಸದ್ಯ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದರ ನಡುವೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ನಡುವೆ ಡೇಟಿಂಗ್ ವಂದತಿಗಳು ಸಹ ಹಬ್ಬಿವೆ. ಈ ಹಿಂದೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು, ಕಾರ್ತಿಕ್ ಆರ್ಯನ್ ತಾಯಿ ಸಹ, ನಮಗೆ ಡಾಕ್ಟರ್ ಸೊಸೆ ಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು. ಹೀಗಾಗಿ ಶ್ರೀಲೀಲಾ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮದುವೆ ಆಗುತ್ತಿದ್ದಾರೆ ಅಂತ ಅಂದುಕೊಂಡಿದ್ದರು. ಆದ್ರೆ ನಟಿಯ ಹುಟ್ಟು ಹಬ್ಬದ ಮೊದಲು ಹೇಗೆಲ್ಲಾ ಆಚರಣೆ ಮಾಡುತ್ತಾರೆ ಎಂಬುವುದರ ಹಿಂದಿನ ಸತ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ